‘ಸಿದ್ದರಾಮಯ್ಯ ಪ್ರಾಮಾಣಿಕರೆಂದು ಎದೆತಟ್ಟಿ ಹೇಳುವೆ’ಯಾವುದೇ ತಪ್ಪು ಮಾಡಿಲ್ಲ : ಪ್ರದೀಪ್‌ ಈಶ್ವರ್‌

| N/A | Published : Feb 21 2025, 12:45 AM IST / Updated: Feb 21 2025, 04:10 AM IST

‘ಸಿದ್ದರಾಮಯ್ಯ ಪ್ರಾಮಾಣಿಕರೆಂದು ಎದೆತಟ್ಟಿ ಹೇಳುವೆ’ಯಾವುದೇ ತಪ್ಪು ಮಾಡಿಲ್ಲ : ಪ್ರದೀಪ್‌ ಈಶ್ವರ್‌
Share this Article
  • FB
  • TW
  • Linkdin
  • Email

ಸಾರಾಂಶ

  ಸಿದ್ದರಾಮಯ್ಯ ಸಾಹೇಬ್ರು ಪ್ರಾಮಾಣಿಕರಾಗಿರುವುದರಿಂದ ಯಾವುದೇ ತಪ್ಪು ಮಾಡಿಲ್ಲ. ಅವರು ಆವತ್ತು ಪ್ರಾಮಾಣಿಕರೇ ಈವತ್ತೂ ಪ್ರಾಮಾಣಿಕರೇ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಮುಖ್ಯಮಂತ್ರಿಗಳನ್ನು ಸಮರ್ಥಿಸಿದ್ದಾರೆ.

 ಚಿಕ್ಕಬಳ್ಳಾಪುರ : ‘ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರು ಪ್ರಾಮಾಣಿಕರು ಎದೆ ಮುಟ್ಕೊಂಡು, ಎದೆ ತಟ್ಕೊಂಡು ಹೇಳ್ತೀನಿ’ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ನಗರದ ಏಳನೇ ವಾರ್ಡ್‌ನ ಗಂಗನಮಿದ್ದೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಇ-ಆಸ್ತಿ ತಂತ್ರಾಂಶದ ಮೂಲಕ ಇ-ಖಾತಾ ನೀಡುವ ಪ್ರಾಮಾಣಿತ ಕಾರ್ಯವಿಧಾನವಾದ ಬಿ.ಖಾತಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಆರೋಪಕ್ಕೆ ಸಾಕ್ಷ್ಯಾಧಾರ ಇಲ್ಲ

ಲೋಕಾಯುಕ್ತ ಏಕೆ ಕ್ಲೀನ್‌ ಚಿಟ್ ಕೊಡ್ತು ಅಂದರೆ ಅವರ ವಿರುದ್ಧ ಯಾವುದೇ ಸಾಕ್ಷಾಧಾರ ಇರಲಿಲ್ಲ. ದೂರುದಾರರು ಸಾಕ್ಷ್ಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಸಿದ್ದರಾಮಯ್ಯ ಸಾಹೇಬ್ರು ಪ್ರಾಮಾಣಿಕರಾಗಿರುವುದರಿಂದ ಯಾವುದೇ ತಪ್ಪು ಮಾಡಿಲ್ಲ. ಅವರು ಆವತ್ತು ಪ್ರಾಮಾಣಿಕರೇ ಈವತ್ತೂ ಪ್ರಾಮಾಣಿಕರೇ ಎಂದು ಮುಖ್ಯಮಂತ್ರಿಗಳನ್ನು ಸಮರ್ಥಿಸಿಕೊಂಡರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನಧಿಕೃತ, ರೆವಿನ್ಯೂ ಬಡಾವಣೆ. ಗ್ರಾಮ ಠಾಣಾ ವಸತಿ ಪ್ರದೇಶಗಳಿಗೆ ಬಿ ಖಾತಾ ಅಭಿಯಾನ ಯಶಸ್ವಿಗೊಳಿಸುವಲ್ಲಿ ಆಯುಕ್ತರು ಮತ್ತು ಸಿಬ್ಬಂದಿಯ ಪಾತ್ರ ಪ್ರಮುಖವಾಗಿದೆ. ಬಡವರ ಬದುಕಿಗೆ ಆಸರೆ ಯಾಗುವ ಈ ಅಭಿ ಯಾನವನ್ನು ಯಜ್ಞದ ರೀತಿ ಭಾವಿಸಿ ಪಕ್ಷಾತೀತವಾಗಿ, ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಮಾಡಬೇಕು ಎಂದು ಹೇಳಿದರು.

ಅಭಿಯಾನ ಯಶಸ್ವಿಗೊಳಿಸಿ

90 ದಿನಗಳ ಕಾಲ ನಡೆಯುವ ಬಿ.ಖಾತಾ ಅಭಿಯಾನವನ್ನು ಬಹಳ ಯಶಸ್ವಿಯಾಗಿ ಮುಗಿಸುವ ಗುರುತರ ಜವಾಬ್ದಾರಿ ಶಾಸಕನಾಗಿ ನನ್ನನ್ನೂ ಸೇರಿದಂತೆ ನಗರಾಡಳಿತ, ಆಯುಕ್ತರು, ಈ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಮೇಲಿದೆ. ನಾವೆಲ್ಲಾ ನಮ್ಮ ನಮ್ಮ ಕೆಲಸವನ್ನು ಬದ್ಧತೆಯಿಂದ ಮಾಡಿದಲ್ಲಿ ಬಡವರ ಮನೆಯಲ್ಲಿ ನಂದಾದೀಪ ಬೆಳಗಲಿದೆ. ಅದರ ಶ್ರೇಯ ನಮಗೂ ಸಲ್ಲಲ್ಲಿದೆ ಎಂದರು.

ನಗರದ ಎಲ್ಲಾ 31 ಬಡಾವಣೆಗಳಲ್ಲಿ ಇಂದಿನಿಂದ ನಾಲ್ಕುದಿನಗಳು ಬೆಳಗ್ಗೆ 8ರಿಂದ ಸಂಜೆ 4.30 ರವರೆಗೆ ಏಕಕಾಲಕ್ಕೆ ನಡೆಯುವ ಬಿ ಖಾತಾ ಅಭಿಯಾನದ ಸಿಬ್ಬಂದಿಗೆ ಬೇಕಾದ ಊಟ ತಿಂಡಿಯ ವ್ಯವಸ್ಥೆಯನ್ನು ಅಚ್ಚಕಟ್ಟಾಗಿ ಮಾಡಲಾಗುವುದು. ಈ ಅವಧಿಯಲ್ಲಿ ಪ್ರತಿಯೊಬ್ಬ ಸಿಬ್ಬಂದಿಯೂ ನಿಮಗೆ ಗೊತ್ತುಪಡಿಸಿದ ಸ್ಥಳದಲ್ಲಿಯೇ ಇದ್ದು ನಿಮ್ಮಲ್ಲಿ ಬರುವ ನಿವಾಸಿಗಳಿಂದ ಸರ್ಕಾರ ನಿಗದಿಪಡಿಸಿರುವ ಸೀಮಿತ ದಾಖಲಾತಿಗಳನ್ನು ಪಡೆದು ಕೆಲಸ ಮಾಡಬೇಕು ಎಂದು ಸೂಚಿಸಿದರು.

ಕರ್ತವ್ಯ ಲೋಪವಾದರೆ ಕ್ರಮ

ಖಾತೆ ಮಾಡಿಸುವವ ಬಳಿ ಸರ್ಕಾರಿ ಶುಲ್ಕ ಬಿಟ್ಟು ಬೇರೇನೂ ಪಡೆಯಯುವಂತಿಲ್ಲ, ಖಾತೆ ಬಯಸಿ ಬರುವ ನಿವಾಸಿಗಳಿಗೆ ಅನಗತ್ಯ ಕಿರುಕುಳ ನೀಡುವುದು, ದಲ್ಲಾಳಿಗಳಿಗೆ ಪುರಸ್ಕಾರ ನೀಡುವುದು, ಕರ್ತವ್ಯಲೋಪ ಎಸಗಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಂಡು ಬಂದಲ್ಲಿ ಕಾನೂನು ಪ್ರಕಾರ ತಲೆದಂಡವಾಗಲಿದೆ ಎಂದು ಎಚ್ಚರಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ 22771 ಒಟ್ಟು ಖಾತೆಗಳಿದ್ದು ,ಅದರಲ್ಲಿ 22937 ಡಿಜಿಟಲ್‌ಗೆ ಬಂದಿವೆ. 8062ಕ್ಕೆ ಇ ಖಾತೆಗಳಾಗಿವೆ.ಈದಿನದವರೆಗೆ 81 ಪ್ರಗತಿಯಲಿವೆ. ಬಾಕಿಯಿರುವ ಖಾತೆಗಳು 15 ಸಾವಿರಕ್ಕೂ ಹೆಚ್ಚು ಇವೆ. ಖಾತೆ ಬಯಸಿ ಬರುವ ನಿವಾಸಿಗಳಿಗೆ ಅನಗತ್ಯ ಕಿರುಕುಳ, ದಲ್ಲಾಳಿಗಳ, ಮಧ್ಯವರ್ತಿಗಳ ಕಾಟ ಇರುವುದಿಲ್ಲ ಎಂದರು.

ಈ ವೇಳೆ ಪೌರಾಯುಕ್ತ ಮನ್ಸೂರ್ ಆಲಿ, ಮಾಜಿ ಶಾಸಕ ಡಾ.ಎಂ.ಶಿವಾನಂದ್, ಮುಖಂಡರಾದ ನಾಗಭೂಷಣ್, ಪೆದ್ದಣ್ಣ, ವೆಂಕಟ್,ಅಲ್ಲು ಅನಿಲ್, ವಿನಯ್ ಬಂಗಾರಿ,ರಘು, ರಾಜು, ನವೀನ್, ಮುನಿರಾಜು, ಮಂಜು, ಗಂಗರಾಜು, ಗಂಗಾಧರ್, ಮುನಿರಾಜು, ಸಂದೀಪ್, ಚೇತನ್, ಪ್ರಶಾಂತ್, ಸಂತೋಷ್, ವೆಂಕಟ ಲಕ್ಷ್ಮಮ್ಮ, ನಂದೀಶ್, ಅನಿಲ್, ನಗರಸಭೆ ಸಿಬ್ಬಂಧಿ, ಮತ್ತಿತರರು ಇದ್ದರು.