ಎಕ ಪೋಷಕ ಮಕ್ಕಳಿಗೆ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ವಿತರಣೆ | Kannada Prabha
Image Credit: KP
ಬೆಂಗಳೂರಿನ ಅಕ್ಸಲರೇಟ್ ಇಂಡಿಯಾ ಫೌಂಡೆಶನ್ ಟ್ರಸ್ಟ್ , ಸುಪ್ರಜಿತ್ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ಕೋವಿಡ್ ನಿಂದ ಏಕಪೋಷಕ ಮತ್ತು ದ್ವಿಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಿಯುಸಿ, ಪದವಿ ತರಗತಿಗಳಲ್ಲಿ ಓದುತ್ತಿರುವ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.
ಅಕ್ಸಲರೇಟ್ ಇಂಡಿಯಾ ಫೌಂಡೆಶನ್ ,ಸುಪ್ರಜಿತ್ ಫೌಂಡೇಶನಿಂದ ವಿದ್ಯಾರ್ಥಿವೇತನ । ಅಕ್ಸಲರೇಟ್ ಸಂಸ್ಥಾಪಕ ಶ್ರೀವಾಸ್ತವ್ ಸಲಹೆ ಕನ್ನಡಪ್ರಭ ವಾರ್ತೆ ಚಾಮರಾಜನಗರ ಬೆಂಗಳೂರಿನ ಅಕ್ಸಲರೇಟ್ ಇಂಡಿಯಾ ಫೌಂಡೆಶನ್ ಟ್ರಸ್ಟ್ , ಸುಪ್ರಜಿತ್ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ಕೋವಿಡ್ ನಿಂದ ಏಕಪೋಷಕ ಮತ್ತು ದ್ವಿಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಿಯುಸಿ, ಪದವಿ ತರಗತಿಗಳಲ್ಲಿ ಓದುತ್ತಿರುವ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ನ ಸಂಸ್ಥಾಪಕರಾದ ಅನುರಾಗ್ ಶ್ರೀವಾಸ್ತವ್ ರವರು ಮಾತನಾಡಿ, ನಮ್ಮ ಸಂಸ್ಥೆಯು ಕಳೆದ ಐದು ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕೋವಿಡ್ ಮಹಾಮಾರಿ ನಂತರ ನಾವು ಮುಖ್ಯವಾಗಿ ಮಕ್ಕಳ ವಿದ್ಯಾಭ್ಯಾಸದ ಮೇಲೆ ಗಮನಹರಿಸಿದ್ದೇವೆ. ಆದ್ದರಿಂದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ಸಹಾಯಧನವನ್ನು ನೀಡುತ್ತಿದ್ದೇವೆ. ‘ನೀವು ಎಲ್ಲಿಯವರೆಗೂ ವಿದ್ಯಾಭ್ಯಾಸ ಮಾಡುತ್ತಿರೋ, ಅಲ್ಲಿಯವರೆಗೂ ನಮ್ಮ ಸಂಸ್ಥೆಯು ನಿಮಗೆ ಸಹಾಯ ಮಾಡುತ್ತದೆ’ ಆದ್ದರಿಂದ ಎಲ್ಲಾ ಮಕ್ಕಳು ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆದು ಸಮಾಜದಲ್ಲಿ ಉನ್ನತ ಹುದ್ದೆಯನ್ನು ಪಡೆದುಕೊಳ್ಳಬೇಕೆಂಬುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ನಾವು ನೀಡುತ್ತಿರುವ ವಿದ್ಯಾರ್ಥಿ ವೇತನವು ಸುಪ್ರಜೀತ್ ಫೌಂಡೇಶನ್ ನೀಡುತ್ತಿದ್ದು, ಎಲ್ಲರೂ ಈ ಸಹಾಯಧನವನ್ನು ವಿದ್ಯಾಭ್ಯಾಸಕ್ಕಾಗಿ ಮಾತ್ರ ಉಪಯೋಗಿಸಬೇಕು ಹಾಗೂ ಮುಂದಿನ ವರ್ಷದಿಂದ ನಾವು ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಅದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಸುಪ್ರಜಿತ್ ಫೌಂಡೇಶನ್ ಸಂಸ್ಥಾಪಕ ಕೆ. ಅಜಿತ್ ಕುಮಾರ್ ರೈ ಮಾತನಾಡಿ, ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ಸಹಯೋಗದೊಂದಿಗೆ ಚಾಮರಾಜನಗರ ಜಿಲ್ಲೆಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದೆ. ಈ ಸಹಾಯಧನವು ನಮ್ಮ ಕಂಪನಿಯ ಸೋಶಿಯಲ್ ಕಾರ್ಪೊರೇಟ್ ರೆಸ್ಪಾನ್ಸಿಬಿಲಿಟಿ ಕಾರ್ಯಕ್ರಮದಡಿ ವಿತರಿಸಲಾಗುತ್ತಿದ್ದು, ಅದನ್ನು ಬೇರೆ ಕೆಲಸಗಳಿಗೆ ವ್ಯಯಿಸದೇ ವಿದ್ಯಾಭ್ಯಾಸಕ್ಕಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ನಂತರ ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್, ಕಾರ್ಯದರ್ಶಿ ವಿಠ್ಠಲ್ ದಾಸ್ ಕಾಮತ್ ರವರು ಮಾತನಾಡುತ್ತಾ ವಿದ್ಯಾರ್ಥಿ ವೇತನವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಬೇಕು ಹಾಗೂ ಎಲ್ಲಾ ಮಕ್ಕಳು ಜೀವನದಲ್ಲಿ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಒಳ್ಳೆಯ ಪ್ರಜೆಗಳಾಗಬೇಕು. ಕಾರ್ಯಕ್ರಮದಲ್ಲಿ ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಸಂಸ್ಥೆಯ ಮಾರ್ಗದರ್ಶಕರಾದ ವೆಂಕಟೇಶ್ ಮೂರ್ತಿ,ಸುಪ್ರಜಿತ್ ಫೌಂಡೇಶನ್ ಸಂಯೋಜಕ ರವಿಕುಮಾರ್, ಕಾರ್ಯದರ್ಶಿ ಭಾರ್ಗವಿ, ರವಿಶಂಕರ್, ದಿನೇಶ್, ಅಂಜಲಿ, ಆಶಾ, ಪ್ರಸಾದ್ ಕೈಲಾಜೆ, ರವೀಂದ್ರ ಎನ್, ಗೋಪಾಲಕೃಷ್ಣ, ಅರುಣ, ಮಧುಸೂದನ್, ಚೇತನ್ ಮನೋಜ್ ಕುಮಾರ್ ಮುಂತಾದವರು ಭಾಗವಹಿಸಿದ್ದರು. --------------------- 11ಸಿಎಚ್‌ಎನ್19 ಬೆಂಗಳೂರಿನ ಅಕ್ಸಲರೇಟ್ ಇಂಡಿಯಾ ಫೌಂಡೆಶನ್ ಟ್ರಸ್ಟ್ , ಸುಪ್ರಜಿತ್ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ಕೋವಿಡ್ ನಿಂದ ಏಕಪೋಷಕ ಮತ್ತು ದ್ವಿಪೋಷಕ ರನ್ನು ಕಳೆದುಕೊಂಡ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.