1 ದೇಶ, 2 ಪ್ರಧಾನಿ, 2 ಸಂವಿಧಾನ, 2 ಧ್ವಜ ಕಾಂಗ್ರೆಸ್‌ ನೀತಿ : ಅರವಿಂದ ಲಿಂಬಾವಳಿ

| Published : Apr 06 2024, 12:54 AM IST / Updated: Apr 06 2024, 04:20 AM IST

1 ದೇಶ, 2 ಪ್ರಧಾನಿ, 2 ಸಂವಿಧಾನ, 2 ಧ್ವಜ ಕಾಂಗ್ರೆಸ್‌ ನೀತಿ : ಅರವಿಂದ ಲಿಂಬಾವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಈಗ ದೇಶದ ರಕ್ಷಣೆಗೋಸ್ಕರ ಈ ಚುನಾವಣೆ ನಡೆಯುತ್ತಿದೆ. ಇದು ಗ್ರಾಮಪಂಚಾಯತಿ ಚುನಾವಣೆ ಅಲ್ಲ. ಮಹತ್ವದ ಹಾಗೂ ದೇಶದ ಹಣೆಬರಹವನ್ನು ಬರೆಯುವ ಲೋಕಸಭಾ ಚುನಾವಣೆ.

 ಚಿಂತಾಮಣಿ :  ಕಾಂಗ್ರೆಸ್‌ ಒಂದು ದೇಶ ಇಬ್ಬರು ಪ್ರಧಾನಿ, ಎರಡು ಸಂವಿಧಾನ ಎಂಬ ನಿಲುವನ್ನು ಹೊಂದಿರುವ ಪಕ್ಷವಾಗಿದೆ ಎಂದು ಬಿಜೆಪಿಯ ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದರು.

ಚಿಂತಾಮಣಿ ನಗರ ಕೆಎಂಡಿ ಕಲ್ಯಾಣಮಂಟಪದಲ್ಲಿ ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಹಾಗೂ ಮುಖಂಡರುಗಳ ಹಾಗೂ ಜನಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ರವರ ವಿರೋಧದ ನಡುವೆಯು ೩೭೦ ಕಾಯ್ದೆಯನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡಿ ಎರಡು ಧ್ವಜಗಳನ್ನು ಮಾಡಿದ್ದು ಕಾಂಗ್ರೆಸ್‌ ಎಂದು ಟೀಕಿಸಿದರು.

ಈ ಮೊದಲು ಆಡಳಿತ ನಡೆಸಿದ ಕಾಂಗ್ರೆಸ್‌ನ ದ್ವಂದ್ವ ನಿಲುವಿನಿಂದಾಗಿ ಕಾಶ್ಮೀರಕ್ಕೊಂದು ಧ್ವಜ, ಭಾರತಕ್ಕೊಂದು ಧ್ವಜ ಆಯಿತು. ಅಂತೆಯೇ ಅಲ್ಲಿನ ಆಡಳಿತಕ್ಕೆ ಒಂದು ಸಂವಿಧಾನ, ದೇಶದ ಆಡಳಿತಕ್ಕೆ ಮತ್ತೊಂದು ಸಂವಿಧಾನಯೆಂಬಂತಾಗಿದ್ದು ಇದಕ್ಕೆಲ್ಲ ಕಾಂಗ್ರೆಸ್‌ಸ್ ದುರಾಡಳಿತವೇ ಕಾರಣವೆಂದರು. ಹಣೆಬರಹ ಬರೆಯುವ ಚುನಾವಣೆ

ಪಾಕಿಸ್ತಾನ, ಚೀನಾ ದೇಶಗಳೊಂದಿಗೆ ಯಾವುದೇ ಕಾರಣಕ್ಕೂ ಮೋದಿ ಕೈ ಜೋಡಿಸಲಿಲ್ಲ, ಈಗ ದೇಶದ ರಕ್ಷಣೆಗೋಸ್ಕರ ಈ ಚುನಾವಣೆ ನಡೆಯುತ್ತಿದೆ. ಇದು ಗ್ರಾಮಪಂಚಾಯತಿ ಚುನಾವಣೆ ಅಲ್ಲ. ಮಹತ್ವದ ಹಾಗೂ ದೇಶದ ಹಣೆಬರಹವನ್ನು ಬರೆಯುವ ಲೋಕಸಭಾ ಚುನಾವಣೆ. ಪ್ರಧಾನಿ ಮೋದಿ ಸಾಧನೆಗಳನ್ನು ಪ್ರತಿಯೊಬ್ಬ ಮತದಾರನ ಮನಸ್ಸಿಗೆ ನಾಟುವಂತೆ ತಿಳಿ ಹೇಳಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬುರಿಗೆ ಮತ ದೊರಕುವಂತೆ ಮಾಡಬೇಕೆಂದರು. ಅಭಿವೃದ್ಧಿಗಾಗಿ ಮೈತ್ರಿ

ದೇಶದ ಭದ್ರತೆ, ಸುರಕ್ಷತೆ ಹಾಗೂ ಅಭಿವೃದ್ಧಿ ಹಿನ್ನಲೆಯಲ್ಲಿ ವರಿಷ್ಠರು ಜೆಡಿಎಸ್‌ನೊಂದಿಗೆ ಮೈತ್ರಿಯನ್ನು ಮಾಡಿಕೊಂಡಿದ್ದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅನುಭವ ಈಗಿನ ಪರಿಸ್ಥಿತಿಗೆ ಅತ್ಯಗತ್ಯವಾಗಿದ್ದು ಅವರ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರ ಮಾರ್ಗದರ್ಶನದಲ್ಲಿ ಸಮನ್ವಯ ಸಮಿತಿ ರಚನೆಯಾಗಿದ್ದು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತ ಹಾಗೂ ಮುಖಂಡರು ರಾಜ್ಯದ ೨೮ ಕ್ಷೇತ್ರಗಳನ್ನು ಗೆಲ್ಲಿಸಿಕೊಳ್ಳುವವರೆಗೂ ನಾವುಗಳು ಕಾರ್ಯೋನ್ಮುಖರಾಗಬೇಕಾಗಿದೆಯೆಂದರು.

ಈ ಸಂದರ್ಭದಲ್ಲಿ ಅಭ್ಯರ್ಥಿ ಮಲ್ಲೇಶ್‌ಬಾಬು, ವೈ.ಎನ್.ನಾರಾಯಣಸ್ವಾಮಿ, ಸಂಸದ ಮುನಿಸ್ವಾಮಿ, ಜೆ.ಕೆ.ಕೃಷ್ಣಾರೆಡ್ಡಿ, ಶಿಡ್ಲಘಟ್ಟ ರಾಜಣ್ಣ, ಸಮೃದ್ಧಿ ಮಂಜುನಾಥ್, ನಂದೀಶ್‌ರೆಡ್ಡಿ, ಜಿ.ಎನ್. ವೇಣುಗೋಪಾಲ್, ಸೀಕಲ್ ರಾಮಚಂದ್ರಗೌಡ, ಸತ್ಯನಾರಾಯಣಮಹೇಶ್, ಮುನಿರಾಜು, ವಾಣಿಕೃಷ್ಣಾರೆಡ್ಡಿ, ರಾಜಣ್ಣ, ಮಂಜುನಾಥಚಾರಿ, ಎಂ.ಆರ್.ಬಾಬು, ಅಂಕಣ್ಣ, ಮಹೇಶ್ ಬೈ, ಸಿ.ಆರ್. ವೆಂಕಟೇಶ್, ಶಿವಾರೆಡ್ಡಿ, ದೇವಳಂ ಶಂಕರ್, ಮಂಜುನಾಥ್, ಗೌಸ್‌ಪಾಷಾ, ಪಾಲೇಪಲ್ಲಿ ಶಿವಾರೆಡ್ಡಿ, ನಗರಸಭಾ, ಗ್ರಾ.ಪಂ.ಸದಸ್ಯರು ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.