ಗೌರಿಬಿದನೂರು ನಗರಸಭೆಯ ಐವರು ಕಾಂಗ್ರೆಸ್‌ ಸದಸ್ಯರು ಮತ್ತು ಬೆಂಬಲಿಗರು ಕೆ.ಎಚ್.ಪಿ ಬಣಕ್ಕೆ ಸೇರ್ಪಡೆ

| Published : Jan 05 2025, 01:31 AM IST / Updated: Jan 05 2025, 05:44 AM IST

ಸಾರಾಂಶ

ನಗರದ ಹೊರವಲಯದಲ್ಲಿರುವ ಅಲಕಾಪುರಗೇಟ್ ಸಮೀಪದ ಸ್ಥಳೀಯ ಶಾಸಕರ ಕಚೇರಿಯ ಅವರಣದಲ್ಲಿ ಶನಿವಾರ ನಗರಸಭೆಯ ಐವರು ಕಾಂಗ್ರೆಸ್‌ ಸದಸ್ಯರು ಮತ್ತು ಬೆಂಬಲಿಗರು ಶಾಸಕ ಕೆ.ಎಚ್‌.ಪುಟ್ಟಸ್ವಾಮಿಗೌಡ ಸಮ್ಮುಖದಲ್ಲಿ ಕೆಎಚ್‌ಪಿ ಬಣಕ್ಕೆ ಸೇರ್ಪಡೆಯಾದರು.

  ಗೌರಿಬಿದನೂರು : ನಗರದ ಹೊರವಲಯದಲ್ಲಿರುವ ಅಲಕಾಪುರಗೇಟ್ ಸಮೀಪದ ಸ್ಥಳೀಯ ಶಾಸಕರ ಕಚೇರಿಯ ಅವರಣದಲ್ಲಿ ಶನಿವಾರ ನಗರಸಭೆಯ ಐವರು ಕಾಂಗ್ರೆಸ್‌ ಸದಸ್ಯರು ಮತ್ತು ಬೆಂಬಲಿಗರು ಶಾಸಕ ಕೆ.ಎಚ್‌.ಪುಟ್ಟಸ್ವಾಮಿಗೌಡ ಸಮ್ಮುಖದಲ್ಲಿ ಕೆಎಚ್‌ಪಿ ಬಣಕ್ಕೆ ಸೇರ್ಪಡೆಯಾದರು.

ನಗರಸಭೆ ಸದಸ್ಯರಾದ ಖಲೀಂಉಲ್ಲಾ, ಜಿ.ಎನ್.ರಾಮಪ್ಪ,ಗಿರೀಶ್,ಡಿ.ವಿ.ಮಂಜುಳಾ,ಶ್ರೀಕಾಂತ್ ರು ಕಾಂಗ್ರೆಸ್ ಪಕ್ಷವನ್ನು ತೊರೆದರು ಮತ್ತು ಮಡಿವಾಳ ಸಮಾಜದ ಪ್ರಬಾವಿ ಮುಖಂಡರಾದ ಸುದರ್ಶನ್ ಬಾಬು, ರಾಮು,ಕೆಂಪಣ್ಣ,ಅಶೋಕ್,ಚಂದ್ರಣ್ಣ,ವಿವೇಕ್ ಮತ್ತು ಬೆಂಬಲಿಗರು ಕೆಎಚ್‌ಪಿ ಸೇರಿದರು.

ಕೆಎಚ್‌ಪಿ ಮೈತ್ರಿ ಸದಸ್ಯ ಬಲ 18

ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿರುವ ಕೆಎಚ್‌ಪಿ- ಜೆಡಿಎಸ್‌ ಮೈತ್ರಿ ಕೂಟದ ಸದಸ್ಯ ಬಲ 18ಕ್ಕೆ ಏರಿದಂತಾಗಿದೆ. ಈ ಮುನ್ನ ಕಾಂಗ್ರೆಸ್‌ 14 ಸದಸ್ಯರನ್ನು ಹೊಂದಿತ್ತು. ಬಿಜೆಪಿಯ ಮೂವರು ಸದಸ್ಯರಿದ್ದಾರೆ.

ಈ ವೇಳೆ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಕೆ.ಎಚ್.ಪಿ ಬಣಕ್ಕೆ ಸೇರ್ಪಡೆಯಾಗುವ ಮುಖಂಡರಿಗೆ ಯಾವುದೇ ಆಮಿಷಗಳನ್ನು ನೀಡಿಲ್ಲ. ರಾಜಕಾರಣದಲ್ಲಿ ಇದು ಸಾಮಾನ್ಯವಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು 100 ಕೋಟಿರೂಗಳ ವಿಶೇಷ ಅನುದಾನ ತಂದಿದ್ದೇನೆ. ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇವರುಗಳು ಕೆಎಚ್‌ಪಿ ಬಣಕ್ಕೆ ಸೇರಿದ್ದಾರೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿಮ್ಮಮುಂದೆ ಪ್ರದರ್ಶನ ಮಾಡುತ್ತೇವೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಸವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಮಾಜಿಶಾಸಕಿ ಎನ್.ಜ್ಯೋತಿರೆಡ್ಡಿ, ಕೋಚಿಮುಲ್ ನಿರ್ದೇಶಕರು ಜೆ.ಕಾಂತರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮಿ ನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ಕೆ.ಹೆಚ್.ಪಿ.ಬಣದ ಮುಖಂಡರಾವ ಕೆ.ಆರ್.ಸಪ್ತಗಿರಿ, ಜಿ.ಬೊಮ್ಮಣ್ಣ, ಲಕ್ಷ್ಮಣರಾವ್, ಎಸ್. ಲಕ್ಷ್ಮೀನಾರಾಯಣಶೆಟ್ಟಿ, ಎ.ಎನ್.ವೇಣುಗೋಪಾಲ್, ಆರ್.ಆರ್.ರೆಡ್ಡಿ, ಅಬ್ದುಲ್ಲಾ, ಖಲೀಲ್, ರಾಜಕುಮಾರ್, ನಾಗಾರ್ಜುನ ಮತ್ತಿತರರು ಭಾಗವಹಿಸಿದ್ದರು.