ನೀತಿ ಸಂಹಿತೆ ಉಲ್ಲಂಘನೆ ಸಿ- ವಿಜಿಲ್‌ ಆ್ಯಪ್‌ನಲ್ಲಿ ಈವರೆಗೆ 79,000 ದೂರು

| Published : Mar 30 2024, 12:49 AM IST

ನೀತಿ ಸಂಹಿತೆ ಉಲ್ಲಂಘನೆ ಸಿ- ವಿಜಿಲ್‌ ಆ್ಯಪ್‌ನಲ್ಲಿ ಈವರೆಗೆ 79,000 ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಸಿ- ವಿಜಿಲ್‌ ಆ್ಯಪ್‌ನಲ್ಲಿ ಈವರೆಗೆ 79 ಸಾವಿರ ದೂರುಗಳನ್ನು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿಯಲ್ಲಿ ಸ್ವೀಕರಿಸಲಾಗಿದೆ ಎಂದು ಶುಕ್ರವಾರ ಚುನಾವಣಾ ಆಯೋಗ ತಿಳಿಸಿದೆ

ನವದೆಹಲಿ: ಸಿ- ವಿಜಿಲ್‌ ಆ್ಯಪ್‌ನಲ್ಲಿ ಈವರೆಗೆ 79 ಸಾವಿರ ದೂರುಗಳನ್ನು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿಯಲ್ಲಿ ಸ್ವೀಕರಿಸಲಾಗಿದೆ ಎಂದು ಶುಕ್ರವಾರ ಚುನಾವಣಾ ಆಯೋಗ ತಿಳಿಸಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ನಾಗರಿಕರು ಸಿ- ವಿಜಿಲ್‌ ಮೊಬೈಲ್‌ ಆ್ಯಪ್‌ ಮೂಲಕ ದೂರು ನೀಡಲು ಚುನಾವಣಾ ಆಯೋಗ ಅನುವು ಮಾಡಿಕೊಟ್ಟಿತ್ತು. ಈ ನಿಟ್ಟಿನಲ್ಲಿ ಸಿ-ವಿಜಿಲ್‌ ಆ್ಯಪ್‌ನಲ್ಲಿ 79 ಸಾವಿರ ದೂರುಗಳು ದಾಖಲಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದ್ದು, ಅದರಲ್ಲಿ 58,500 ದೂರುಗಳು ಅಕ್ರಮ ಪೋಸ್ಟರ್‌ಗಳ ವಿರುದ್ಧ ದಾಖಲಾಗಿವೆ. ಹಣ, ಉಡುಗೊರೆಗಳು ಮತ್ತು ಮದ್ಯ ವಿತರಣೆಗೆ ಸಂಬಂಧಿಸಿದಂತೆ 1,400 ಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದು ಹೇಳಿದೆ.