ಎಚ್ಡಿಕೆ ಅರೆಸ್ಟ್‌ ಮಾಡಲು ಕಾನ್‌ಸ್ಟೇಬಲ್ ಸಾಕು : ಎಚ್ಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು

| Published : Aug 22 2024, 05:28 AM IST

Siddaramaiah
ಎಚ್ಡಿಕೆ ಅರೆಸ್ಟ್‌ ಮಾಡಲು ಕಾನ್‌ಸ್ಟೇಬಲ್ ಸಾಕು : ಎಚ್ಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯನ್ನು ಅರೆಸ್ಟ್ ಮಾಡಲು ಸಿದ್ಧರಾಮಯ್ಯ ಯಾಕ್ರಿ ಬೇಕು?. ಒಬ್ಬ ಪೊಲೀಸ್ ಕಾನ್‌ಸ್ಟೇಬಲ್ ಸಾಕು. ನಾನು ಅವರನ್ನು ಅರೆಸ್ಟ್ ಮಾಡ್ತೀನಾ?. ಪೊಲೀಸರು ಅರೆಸ್ಟ್ ಮಾಡ್ತಾರೆ.

ವಿಜಯಪುರ :  ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯನ್ನು ಅರೆಸ್ಟ್ ಮಾಡಲು ಸಿದ್ಧರಾಮಯ್ಯ ಯಾಕ್ರಿ ಬೇಕು?. ಒಬ್ಬ ಪೊಲೀಸ್ ಕಾನ್‌ಸ್ಟೇಬಲ್ ಸಾಕು. ನಾನು ಅವರನ್ನು ಅರೆಸ್ಟ್ ಮಾಡ್ತೀನಾ?. ಪೊಲೀಸರು ಅರೆಸ್ಟ್ ಮಾಡ್ತಾರೆ. ಬಂಧಿಸುವ ಅಗತ್ಯ ಬಿದ್ದರೆ ಮುಲಾಜಿಲ್ಲದೆ ಅವರನ್ನು ಬಂಧಿಸ್ತಾರೆ ಎಂದು ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘ಇಂತಹ ನೂರು ಸಿದ್ಧರಾಮಯ್ಯ ಬಂದರೂ ನನ್ನನ್ನು ಅರೆಸ್ಟ್ ಮಾಡಲು ಆಗಲ್ಲ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಸಿಎಂ, ಕುಮಾರಸ್ವಾಮಿಯನ್ನು ಅರೆಸ್ಟ್ ಮಾಡಲು ಸಿದ್ಧರಾಮಯ್ಯ ಯಾಕ್ರಿ ಬೇಕು?. ಒಬ್ಬ ಪೊಲೀಸ್ ಕಾನ್‌ಸ್ಟೇಬಲ್ ಸಾಕು. ನಾನು ಅವರನ್ನು ಅರೆಸ್ಟ್ ಮಾಡ್ತೀನಾ?. ಪೊಲೀಸರು ಅರೆಸ್ಟ್ ಮಾಡ್ತಾರೆ. ಬಂಧಿಸುವ ಅಗತ್ಯ ಬಿದ್ದರೆ ಮುಲಾಜಿಲ್ಲದೆ ಬಂಧಿಸ್ತಾರೆ ಎಂದರು.

ನಾನು ಯಾವ ದಾಖಲೆ ತಿದ್ದಿಲ್ಲ

ಮುಡಾ ದಾಖಲೆಗೆ ವೈಟ್ನರ್ ಹಚ್ಚಿ ದಾಖಲೆ ತಿದ್ದುಪಡಿ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು ಯಾವುದೇ ದಾಖಲೆ ತಿದ್ದುಪಡಿ ಮಾಡಿಲ್ಲ. ದಾಖಲೆ ತಿದ್ದುಪಡಿ ಆಗಿದ್ದು 2014ರ ಲೆಟರ್ ಮೇಲೆ. ಆದರೆ, ನಿವೇಶನ ಮಂಜೂರಾಗಿದ್ದು 2021ರ ಲೆಟರ್ ಮೇಲೆ. ಕುಮಾರಸ್ವಾಮಿ ಹೇಳಿದ ಹಾಗೆ ನಾವು ಯಾವ ದಾಖಲೆಯನ್ನೂ ತಿದ್ದಿಲ್ಲ. ನಿವೇಶನ ಹಂಚಿಕೆ ವೇಳೆ ಮುಡಾ ಬಿಜೆಪಿ ಕೈಯಲ್ಲಿತ್ತು. ಅದೇ ಪಾರ್ಟಿಯವರೇ ಚೇರಮನ್ ಇದ್ದರು. ನಿವೇಶನ ಅಲಾಟ್ ಆಗಿದ್ದಕ್ಕೆ ಯಾರು ಜವಾಬ್ದಾರರು?. ಆಗ ಸಿಎಂ ಆಗಿದ್ದವರು ಯಾರು?. ಮಿಸ್ಟರ್ ಬೊಮ್ಮಾಯಿ ಆ್ಯಂಡ್‌ ಬಿಜೆಪಿ ಸರ್ಕಾರ‌ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಅವರದ್ದು ಯಾವಾಗಲೂ ಹಿಟ್ ಆ್ಯಂಡ್‌ ರನ್ ಪ್ರವೃತ್ತಿ. ನನ್ನ ಮೇಲೆ ಏನಾದರೂ ವಿಚಾರಣೆ ಆಗಿದೆಯಾ?. ಕಂಪ್ಲೇಟ್ ಇದೆಯಾ?. ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.

--------

ಅಸೆಂಬ್ಲಿಯಲ್ಲಿ ಎಂತದ್ದೋ ಪೆನ್ ತಂದು ತೋರಿಸಿದರಲ್ಲಾ? ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ, ಏನಾಯ್ತು ಪೆನಡ್ರೈವ್?. ಅವರು ಯಾವುದೇ ಆರೋಪಗಳನ್ನು ಕೊನೆವರೆಗೂ ಒಯ್ದಿಲ್ಲ. ನನ್ನ ಬಳಿ ದಾಖಲೆಗಳಿವೆ ಅಂತೀರಲ್ಲಾ, ದಾಖಲೆ‌ ಇದ್ದರೆ ಬಿಡುಗಡೆ ಮಾಡಪ್ಪಾ ಎಂದು ಕುಮಾರಸ್ವಾಮಿಗೆ ಸವಾಲೆಸೆದರು.

ಟಿಬಿ ಡ್ಯಾಂಗೆ ಪೂಜೆ ಮಾಡಬೇಕೆನ್ನುವಷ್ಟರಲ್ಲಿ ಚೈನ್‌ ಕಟ್‌ ಆಯ್ತು:

ಈ ಮೊದಲು ಟಿಬಿ ಡ್ಯಾಂ ಭರ್ತಿಯಾಗಿದ್ದರಿಂದ ಡ್ಯಾಂ ಪೂಜೆ ಮಾಡಲು ಸಿದ್ಧವಾಗಿದ್ದೆವು. ಅಷ್ಟರಲ್ಲಿ ಡ್ಯಾಂನ 19ನೇ ಗೇಟ್ ಚೈನ್ ಕಟ್ ಆಗಿ, ಗೇಟ್ ಕಳಚಿದ್ದರಿಂದ ಬಾಗಿನ ಅರ್ಪಣೆ ಆಗಲಿಲ್ಲ. ಗೇಟ್ ತುಂಡಾಗಿದ್ದರಿಂದ 60 ಟಿಎಂಸಿ ನೀರು ಪೋಲಾಗಬಹುದು ಎಂದುಕೊಂಡಿದ್ದೆವು. ಅದೃಷ್ಟವಶಾತ್ ಸುಮಾರು 35 ಟಿಎಂಸಿ ನೀರು ಮಾತ್ರ ಹರಿದುಹೋಗಿದೆ. ಇಂದು 78 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಂಗೆ ಇರುವ 130 ಟಿಎಂಸಿ ಸಾಮರ್ಥ್ಯದಲ್ಲಿ ಹೂಳು ಇರುವುದರಿಂದ ಈಗ 105 ಟಿಎಂಸಿ ಸಾಮರ್ಥ್ಯ ಇದೆ. ಒಂದು ಬೆಳೆ ಮಾಡಲು 90 ಟಿಎಂಸಿ ನೀರು ಬೇಕು. ಇದರಿಂದ ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳಿಗೆ ಅನುಕೂಲ ಆಗಲಿದೆ ಎಂದರು.

ಆಲಮಟ್ಟಿ ಡ್ಯಾಂ ಎತ್ತರಿಸಲು ನೋಟಿಫಿಕೇಷನ್ ಮಾಡಬೇಕಿದ್ದು, ಅದನ್ನು ಕೇಂದ್ರ ನೋಟಿಫಿಕೇಷನ್ ಮಾಡಿಲ್ಲ. ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದವರನ್ನು ಕರೆದು ಕೇಂದ್ರದವರು ಇದನ್ನು ಇತ್ಯರ್ಥ ಮಾಡಲು ಸಾಧ್ಯವಿದೆ. ಇಲ್ಲವಾದರೆ ನೋಟಿಫಿಕೇಷನ್ ಆಗದೆ ಡ್ಯಾಂ ಎತ್ತರ ಮಾಡಲು ಆಗಲ್ಲ ಎಂದು ಹೇಳಿದರು.

ಕುಡಿಯುವ ನೀರಿಗೆ, ವಿದ್ಯುತ್ ಉತ್ಪಾದನೆಗೆ ತೊಂದರೆ ಆಗಲ್ಲ:

ಈ ಬಾರಿ ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ. ನೀರಾವರಿಗೆ, ಕುಡಿಯುವ ನೀರಿಗೆ, ವಿದ್ಯುತ್ ಉತ್ಪಾದನೆಗೆ ಯಾವುದೇ ತೊಂದರೆ ಆಗಲ್ಲ. ಎಲ್ಲಾ ಕೆರೆಗಳು ಭರ್ತಿಯಾಗಿವೆ. ಇನ್ನುಳಿದ ಕೆಲ ಕೆರೆಗಳನ್ನು ಭರ್ತಿ ಮಾಡಲಾಗುವುದು. ಇದರಿಂದ ಅಂತರ್ಜಲ ಮಟ್ಟ ಏರಿಕೆ ಆಗುತ್ತದೆ. ಹೀಗಾಗಿ ರೈತರು ಖುಷಿಯಾಗಿದ್ದಾರೆ ಎಂದರು.

ರೈತರ ಬೆಳೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಯಂತೆ ಖರೀದಿ ಕೇಂದ್ರ ತೆರೆಯಬೇಕು. ಕೇಂದ್ರ ತೆರೆಯುವ ಕುರಿತು ಕೇಂದ್ರಕ್ಕೆ ಶೀಘ್ರವೇ ಪತ್ರ ಬರೆಯುತ್ತೇವೆ ಎಂದು ತಿಳಿಸಿದರು.