ಪತಿಯಿಂದ ನಿರಂತರ ದೌರ್ಜನ್ಯದ ಆರೋಪ: ಪೊಲೀಸ್ ಠಾಣೆ ಮಟ್ಟಿಲೇರಿದ ಪತ್ನಿ

| Published : Nov 22 2023, 01:00 AM IST

ಸಾರಾಂಶ

ತನ್ನನ್ನು ರೂಂನಲ್ಲಿ ಕೂಡಿ ಹಾಕಿ ಅತ್ತೆ, ಮಕ್ಕಳ ಜೊತೆ ನಿದ್ರಿಸುತ್ತಿದ್ದ ಪತಿ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೊದಲಕೋಟೆ ಗ್ರಾಮದ ಪ್ರತಾಪ್ ಹಾಗೂ ತುಮಕೂರು ಮೂಲದ ಅಶ್ವಿನಿ ಎಂಬುವವರು ನೆಲಮಂಗಲದ ಖಾಸಗಿ ಕಲ್ಯಾಣ ಮಂಟಪದಲ್ಲಿ 2019ರಲ್ಲಿ ಮದುವೆಯಾಗಿದ್ದರು. ಮದುವೆಗೂ ಮೊದಲು ನಾನು ಸ್ಕ್ರಾಪ್ ಡೀಲರ್ ಆಗಿದ್ದು, ಲಕ್ಷ ಲಕ್ಷ ಹಣ ಬರುತ್ತದೆ ಅಂತ ಪ್ರತಾಪ್ ನಂಬಿಸಿದ್ದನು. ಮದುವೆಯಾದ ಬಳಿಕವೇ ಪ್ರತಾಪ್ ಸ್ಕ್ರಾಪ್ ಡೀಲರ್ ಬಳಿ ಕೆಲಸ ಮಾಡುತ್ತಿದ್ದ ಎಂದು ಪತ್ನಿ ಆಶ್ವಿನಿ ಆರೋಪಿಸಿದ್ದಾರೆ.

ದಾಬಸ್‌ಪೇಟೆ: ತನ್ನನ್ನು ರೂಂನಲ್ಲಿ ಕೂಡಿ ಹಾಕಿ ಅತ್ತೆ, ಮಕ್ಕಳ ಜೊತೆ ನಿದ್ರಿಸುತ್ತಿದ್ದ ಪತಿ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೊದಲಕೋಟೆ ಗ್ರಾಮದ ಪ್ರತಾಪ್ ಹಾಗೂ ತುಮಕೂರು ಮೂಲದ ಅಶ್ವಿನಿ ಎಂಬುವವರು ನೆಲಮಂಗಲದ ಖಾಸಗಿ ಕಲ್ಯಾಣ ಮಂಟಪದಲ್ಲಿ 2019ರಲ್ಲಿ ಮದುವೆಯಾಗಿದ್ದರು. ಮದುವೆಗೂ ಮೊದಲು ನಾನು ಸ್ಕ್ರಾಪ್ ಡೀಲರ್ ಆಗಿದ್ದು, ಲಕ್ಷ ಲಕ್ಷ ಹಣ ಬರುತ್ತದೆ ಅಂತ ಪ್ರತಾಪ್ ನಂಬಿಸಿದ್ದನು. ಮದುವೆಯಾದ ಬಳಿಕವೇ ಪ್ರತಾಪ್ ಸ್ಕ್ರಾಪ್ ಡೀಲರ್ ಬಳಿ ಕೆಲಸ ಮಾಡುತ್ತಿದ್ದ ಎಂದು ಪತ್ನಿ ಆಶ್ವಿನಿ ಆರೋಪಿಸಿದ್ದಾರೆ.

ವರದಕ್ಷಿಣೆ ತರುವಂತೆ ಗಂಡ ಸದಾ ಪೀಡಿಸುತ್ತಿದ್ದು, ಇದರೊಂದಿಗೆ ಅತ್ತೆ ಮಗಳೊಂದಿಗಿನ ಸಲುಗೆಯ ಬಗ್ಗೆ ಪ್ರಶ್ನಿಸಿದಕ್ಕೆ ಮನಬಂದಂತೆ ಬೈದು, ಥಳಿಸಿದ್ದಾನೆ. ತನ್ನ ಚಾರಿತ್ರ‍್ಯದ ಬಗ್ಗೆ ಪ್ರತಾಪ್ ಸಂಶಯಪಡಲು ಆರಂಭಿಸಿದ್ದಾನೆ. ಅಲ್ಲದೆ, ಚಿನ್ನ, ಬೆಳ್ಳಿ ಆಭರಣಗಳ ಜೊತೆ ಸ್ಕೂಟರ್, ಎರಡು ಮೊಬೈಲ್, ಲ್ಯಾಪ್‌ಟಾಪ್‌ನ್ನು ಬಲವಂತವಾಗಿ ಕಿತ್ತುಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.

ಆಶ್ವಿನಿಯನ್ನು ಯತಿರಾಜ್ ಮತ್ತು ಗೀತಾ ಮೂರು ತಿಂಗಳ ಕಾಲ ಮನೆಯಿಂದ ಹೊರಗೆ ಹೋಗಲು ಬಿಡದೆ ಗೃಹಬಂಧನದಲ್ಲಿಟ್ಟಿದ್ದರು. ಅಲ್ಲದೆ, ಪತಿ ಪ್ರತಾಪ್, ಗೀತಾ, ಯತಿರಾಜ್ ಮತ್ತು ಇವರ ಮಕ್ಕಳು ಹಲ್ಲೆ ಮಾಡುತ್ತಿದ್ದರು. ನಂತರ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ ಅವಮಾನಿಸಿ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಪತಿ ಮತ್ತು ಕುಟುಂಬಸ್ಥರ ಕಿರುಕುಳ ತಾಳಲಾಗದೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ ಅಶ್ಚಿನಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.