ಸಾರಾಂಶ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರದ ಉದ್ಘಾಟನೆಗೆ ಪರ ವಿರೋಧಗಳ ನಡುವೆ ಕಾಂಗ್ರೆಸ್‌ನ ಹಿರಿಯ ನಾಯಕ ಕರಣ್‌ಸಿಂಗ್ ಅವರು ರಾಮ ಮಂದಿರದ ಪರ ತನ್ನ ನಿಲುವು ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ ‘ರಾಮ ಮಂದಿರದ ಪರ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮೇಲೆ ಉದ್ಘಾಟನೆಗೆ ತೆರಳಲು ಹಿಂಜರಿಗೆ ಬೇಡ’ ಎಂದು ಹೇಳಿದ್ದಾರೆ.
ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರದ ಉದ್ಘಾಟನೆಗೆ ಪರ ವಿರೋಧಗಳ ನಡುವೆ ಕಾಂಗ್ರೆಸ್‌ನ ಹಿರಿಯ ನಾಯಕ ಕರಣ್‌ಸಿಂಗ್ ಅವರು ರಾಮ ಮಂದಿರದ ಪರ ತನ್ನ ನಿಲುವು ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ ‘ರಾಮ ಮಂದಿರದ ಪರ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮೇಲೆ ಉದ್ಘಾಟನೆಗೆ ತೆರಳಲು ಹಿಂಜರಿಗೆ ಬೇಡ’ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು,‘ರಾಮ ಮಂದಿರ ಉದ್ಘಾಟನೆಯ ಸುಂದರ ಆಮಂತ್ರಣ ನನಗೂ ಬಂದಿದೆ. ರಾಮ ಮಂದಿರ ಉದ್ಘಾಟನೆ ಕೋಟ್ಯಾಂತರ ಹಿಂದುಗಳ ಕನಸಾಗಿದ್ದು, ಇದರೊಂದು ಐತಿಹಾಸಿಕ ಘಳಿಗೆಯಾಗಲಿದೆ. ನಾನು ವೈಯಕ್ತಿವಾಗಿ 11 ಲಕ್ಷ ರು. ಕಾಣಿಕೆ ನೀಡಿದ್ದೇನೆ. ಆದರೆ ನನ್ನ ಆರೋಗ್ಯ ಸಮಸ್ಯೆಯಿಂದಾಗಿ ನಾನು ಭಾಗಿಯಾಗಲು ಸಾಧ್ಯವಿಲ್ಲ. ಆದರೆ ನಮ್ಮ ಸಂಸ್ಥೆ ಆಚರಿಸಲಿದೆ’ ಎಂದು ಸಂತಸ ವ್ಯಕ್ತಪಡಿಸಿದರು.ರಾಮನ ಮೇಲೆ ಭಕ್ತಿ ಇದ್ದರೆ ಎಂದಾದರೂ ಅಯೋಧ್ಯೆಗೆ ಹೋಗಬಹುದು: ಖರ್ಗೆ
ನವದೆಹಲಿ: ರಾಮಮಂದಿರ ಉದ್ಘಾಟನೆ ಬಹಿಷ್ಕರಿಸಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ಕಾಗಿ ಪ್ರತಿಕ್ರಿಯಿಸಿದ್ದು, ‘ಪ್ರಭು ರಾಮನ ಮೇಲೆ ಭಕ್ತಿ ಇದ್ದವರು ಎಂದಾದರೂ ಅಯೋಧ್ಯೆಗೆ ಭೇಟಿ ನೀಡುತ್ತಾರೆ’ ಎಂದು ಹೇಳಿದ್ದಾರೆ.ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,‘ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸುವ ಕುರಿತು ನಾನು ಜ.6ರಂದೇ ಸ್ಪಷ್ಟನೆ ನೀಡಿದ್ದೇನೆ. ರಾಮನ ಮೇಲೆ ಭಕ್ತಿ ಇರುವವರು ಎಂದಾದರೂ ಅಯೋಧ್ಯೆಗೆ ಭೇಟಿ ನೀಡುತ್ತಾರೆ. ಆದರೆ ಬಿಜೆಪಿ ವಿನಾಕಾರಣ ಮಂದಿರ ರಾಜಕಾರಣ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಸಂಚು ಹೂಡಿದೆ. ನಾವು ಯಾವ ಧರ್ಮವನ್ನು, ಗುರುಗಳನ್ನು ಅವಮಾನ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.