ಮೈತ್ರಿ ಅಭ್ಯರ್ಥಿ ಮಲ್ಲೇಶ ಬಾಬು ಗೆಲ್ಲಿಸಲು ಶ್ರಮಿಸಿ

| Published : Apr 22 2024, 02:00 AM IST / Updated: Apr 22 2024, 04:48 AM IST

ಸಾರಾಂಶ

ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶಬಾಬು ಇದೇ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ್ದು,  ಹಿಂದಿನ 2 ಬಾರಿ ಸೋತಿದ್ದು ಈ ಅನುಕಂಪ ಮಲ್ಲೇಶಬಾಬು ಅವರನ್ನು ಗೆಲ್ಲಿಸುವುದೇ?

 ಬಂಗಾರಪೇಟೆ:  ದೇಶದಲ್ಲಿ ಪ್ರಧಾನಮಂತ್ರಿ ಮೋದಿಯವರ ಅಲೆ ಹೆಚ್ಚಾಗಿರುವುದರಿಂದ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಎಂ.ಮಲ್ಲೇಶಬಾಬು ಸುಲಭವಾಗಿ ಎರಡು ಲಕ್ಷಗಳ ಅಂತರ ಮತಗಳಿಂದ ಗೆಲುವು ಸಾಧಿಸುವುದು ಗ್ಯಾರಂಟಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಹೇಳಿದರು.

ತಾಲೂಕಿನ ಮಾಗೊಂದಿ ಗ್ರಾಪಂ ವ್ಯಾಪ್ತಿಯ ತುಮಟಗೆರೆ ಗ್ರಾಮದಲ್ಲಿ ಮನೆ ಮನೆಗೂ ಪ್ರಚಾರ ಮಾಡಿ ಮಾತನಾಡಿದ ಅವರು, 500 ವರ್ಷಗಳ ಇತಿಹಾಸ ಇರುವ ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೃಪೆಯಿಂದ ಹಿಂದೂ ಸಂಪ್ರದಾಯವನ್ನು ಎತ್ತಿ ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ತಾವೇ ಅಭ್ಯರ್ಥಿಗಳೆಂದು ಎರಡೂ ಪಕ್ಷಗಳ ಮುಖಂಡರು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕೆಂದು ಮನವಿ ಮಾಡಿದರು.ಒಂದು ಲಕ್ಷ ಮತದಿಂದ ಗೆಲ್ಲಿಸಿ

ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶಬಾಬು ಇದೇ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ್ದು, ಈ ಕ್ಷೇತ್ರದಲ್ಲಿ ೨೦೧೮ ಹಾಗೂ ೨೦೨೩ರಲ್ಲಿ ನಡೆದ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಕಡಿಮೆ ಅಂತರ ಮತಗಳಿಂದ ಸೋತಿದ್ದಾರೆ. ಈ ಅನುಕಂಪವನ್ನು ತಪ್ಪದೇ ಮಲ್ಲೇಶಬಾಬು ಅವರ ಮೇಲೆ ಎಲ್ಲರೂ ಸಹಕಾರ ನೀಡಬೇಕಾಗಿದೆ. ಈ ಕ್ಷೇತ್ರದಲ್ಲಿ ೨ ಲಕ್ಷಕ್ಕೂ ಹೆಚ್ಚು ಮತದಾರರಿದ್ದು, ಮಲ್ಲೇಶಬಾಬು ಅವರಿಗೆ ಕನಿಷ್ಠ 1 ಲಕ್ಷ ಮತಗಳನ್ನು ನೀಡಬೇಕಾಗಿರುವುದರಿಂದ ಮತದಾರರು ಎಚ್ಚೆತ್ತುಕೊಂಡು ಮತ ಹಾಕುವಂತೆ ಕೋರಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಸುಳ್ಳು ಗ್ಯಾರಂಟಿಗಳ ಮೇಲೆ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಗ್ಯಾರಂಟಿಗಳ ಹೆಸರಿನಲ್ಲಿ ಗ್ಲಾಸ್ ತೋರಿಸಿ ಬಿಂದಿಗೆ ತೆಗೆದುಕೊಂಡುವ ಹೋಗುವ ಜನವಿರೋಧಿ ಸರ್ಕಾರವಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ಈ ರಾಜ್ಯದ ಜನರನ್ನು ಗ್ಯಾರಂಟಿಗಳೇ ಜೀವನ ನಡೆಸಿದೆಯೇ. ಈ ಹಿಂದೆ ಗ್ಯಾರಂಟಿಗಳು ಇಲ್ಲದೇಯೇ ಜನಸಾಮಾನ್ಯರು ಜೀವನ ನಡೆಸಿಲ್ಲವೇ ಎಂದು ಪ್ರಶ್ನಿಸಿದರು.

ಗ್ಯಾರಂಟಿ ಯಾರೂ ನಂಬಿಕೊಂಡಿಲ್ಲ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಬಂದ ನಂತರ ಜನಸಾಮಾನ್ಯರು ಉತ್ತಮ ಮಟ್ಟದ ಐಷರಾಮಿ ಜೀವನ ನಡೆಸುತ್ತಿದ್ದಾರೆಯೇ. ಈ ರಾಜ್ಯದಲ್ಲಿ ಗ್ಯಾರಂಟಿಗಳಿಂದ ಯಾರೂ ಜೀವನ ನಡೆಸುತ್ತಿಲ್ಲ. ಈ ಗ್ಯಾರಂಟಿಗಳು ಇಲ್ಲದೇ ಇದ್ದರೂ ಜೀವನ ನಡೆಸುವುದು ಸಾ‘ವಿದೆ ಎನ್ನುವುದನ್ನು ಲೋಕಸ‘ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ದ ಮೈತ್ರಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸುವುದರ ಮೂಲಕ ತಕ್ಕಪಾಠ ಕಲಿಸಬೇಕೆಂದರು.

ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಸಂಪಂಗಿರೆಡ್ಡಿ, ಪ್ರಧಾನ ಕಾರ್ಯದರ್ಶಿ ಹುಣಸನಹಳ್ಳಿ ಶ್ರೀನಿವಾಸ್, ಮುಖಂಡರಾದ ಮಾಗೊಂದಿ ರಾಮು, ಗ್ರಾಪಂ ಸದಸ್ಯ ನಾರಾಯಣಸ್ವಾಮಿ, ದೇವೇಗೌಡ, ರಾಮಚಂದ್ರಪ್ಪ, ಎಂ.ಪಿ.ಮಂಜುನಾಥ್, ಲೋಕೇಶ್, ಕೃಷ್ಣ, ಜಗದೀಶ್ ಮುಂತಾದವರಿದ್ದರು.