ಜೂ.4ಕ್ಕೆ ಮುನ್ನ ಷೇರು ಖರೀದಿಮಾಡಿ, ಬಳಿಕ ಅದು ಭಾರೀ ಏರಿಕೆ ಕಾಣುತ್ತೆ: ಅಮಿತ್‌ ಶಾ

| Published : May 14 2024, 01:01 AM IST / Updated: May 14 2024, 04:38 AM IST

Amith Shah
ಜೂ.4ಕ್ಕೆ ಮುನ್ನ ಷೇರು ಖರೀದಿಮಾಡಿ, ಬಳಿಕ ಅದು ಭಾರೀ ಏರಿಕೆ ಕಾಣುತ್ತೆ: ಅಮಿತ್‌ ಶಾ
Share this Article
  • FB
  • TW
  • Linkdin
  • Email

ಸಾರಾಂಶ

ಷೇರಿನಲ್ಲಿ ಹೂಡಿಕೆ ಮಾಡುವವರು ಜೂ.4ಕ್ಕೆ ಮಾಡುವ ಮುನ್ನವೇ ಖರೀದಿ ಮಾಡುವುದು ಒಳಿತು. ಕಾರಣ ಜೂ.4ರ ಬಳಿಕ ಅದು ಭಾರೀ ಏರಿಕೆ ಕಾಣಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭವಿಷ್ಯ ನುಡಿದಿದ್ದಾರೆ.

ನವದೆಹಲಿ: ಷೇರಿನಲ್ಲಿ ಹೂಡಿಕೆ ಮಾಡುವವರು ಜೂ.4ಕ್ಕೆ ಮಾಡುವ ಮುನ್ನವೇ ಖರೀದಿ ಮಾಡುವುದು ಒಳಿತು. ಕಾರಣ ಜೂ.4ರ ಬಳಿಕ ಅದು ಭಾರೀ ಏರಿಕೆ ಕಾಣಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭವಿಷ್ಯ ನುಡಿದಿದ್ದಾರೆ.

 ಖಾಸಗಿ ಸುದ್ದಿವಾಹಿನಿಯೊಂದರ ಸಂದರ್ಶನದ ವೇಳೆ ಚುನಾವಣಾ ಫಲಿತಾಂಶದ ಕುರಿತು ಅನಿಶ್ಚಿತತೆ ಎದುರಾಗಿರುವ ಕಾರಣಕ್ಕಾಗಿ ಕಳೆದ ಕೆಲ ದಿನಗಳಿಂದ ಷೇರುಪೇಟೆ ಭಾರೀ ಇಳಿಕೆ ಕಾಣುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾ, ‘ಷೇರುಪೇಟೆಗೂ ಫಲಿತಾಂಶಕ್ಕೂ ನಂಟು ಕಲ್ಪಿಸಬಾರದು. 

ಆದರೆ ಸ್ಥಿರ ಸರ್ಕಾರ ಬಂದಾಗ ಷೇರುಪೇಟೆ ಏರುವುದು ನಿರೀಕ್ಷಿತ. ಇದೇ ಕಾರಣಕ್ಕಾಗಿ ಜೂ.4ರಂದು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಭರ್ಜರಿ ಗೆಲುವು ಸಾಧಿಸಿದ ಬಳಿಕ ಷೇರುಪೇಟೆ ಭಾರೀ ಏರಿಕೆ ಕಾಣಲಿದೆ ಎಂದರು.