ಜಗನ್‌ ಮೋಹನ್‌ ರೆಡ್ಡಿ ಅವರಿಗೆ ತಾಯಿ ವಿಜಯಮ್ಮ ಶಾಕ್‌

| Published : May 12 2024, 01:21 AM IST / Updated: May 12 2024, 04:44 AM IST

ಸಾರಾಂಶ

ಆಂಧ್ರಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ವೇಳೆ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರಿಗೆ ತಾಯಿ ವಿಜಯಮ್ಮ ಶಾಕ್‌ ನೀಡಿದ್ದಾರೆ.

ಕಡಪಾ: ಆಂಧ್ರಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ವೇಳೆ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರಿಗೆ ತಾಯಿ ವಿಜಯಮ್ಮ ಶಾಕ್‌ ನೀಡಿದ್ದಾರೆ. 

ಜಗನ್‌ ಬದಲು ಆಂಧ್ರ ಕಾಂಗ್ರೆಸ್‌ ಅಧ್ಯಕ್ಷೆ ಹಾಗೂ ಪುತ್ರಿ ವೈ.ಎಸ್. ಶರ್ಮಿಳಾಗೆ ಬೆಂಬಲ ಘೋಷಿಸಿದ್ದಾರೆ.ಶನಿವಾರ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಶರ್ಮಿಳಾ, ‘ವೈ.ಎಸ್. ರಾಜಶೇಖರ ರೆಡ್ಡಿ ಅವರನ್ನು ಮೆಚ್ಚುವ ಮತ್ತು ಪ್ರೀತಿಸುವವರಿಗೆ ನನ್ನ ಹೃತ್ಪೂರ್ವಕ ನಮನಗಳು. 

ಕಡಪ ಜನತೆಗೆ ನನ್ನ ಮನವಿ. ವೈಎಸ್‌ಆರ್‌ ಮಗಳು ಶರ್ಮಿಳಮ್ಮ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆಕೆಯನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸುವಂತೆ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ, ಇದರೊಂದಿಗೆ ವಿಜಯಮ್ಮ ಅವರು ತಮ್ಮ ಪುತ್ರಿ ಶರ್ಮಿಳಾಗೆ ಬೆಂಬಲ ಘೋಷಿಸುವ ಮೂಲಕ ಜಗನ್ ಗೆ ಶಾಕ್ ನೀಡಿದ್ದಾರೆ. ಶರ್ಮಿಳಾ ವಿರುದ್ಧ ವೈಎಸ್ಸಾರ್‌ ಕಾಂಗ್ರೆಸ್‌ನಿಂದ ಅವಿನಾಶ್ ರೆಡ್ಡಿ ಸ್ಪರ್ಧಿಸಿದ್ದಾರೆ.