ನನ್ನ ಕ್ಷೇತ್ರದಲ್ಲಿ ಐಐಎಂ, ಎನ್‌ಐಎ, ಡ್ರಗ್ಸ್ ಘಟಕ : ಅಣ್ಣಾಮಲೈ ಪ್ರಣಾಳಿಕೆ

| Published : Apr 13 2024, 01:00 AM IST / Updated: Apr 13 2024, 04:44 AM IST

annamalai
ನನ್ನ ಕ್ಷೇತ್ರದಲ್ಲಿ ಐಐಎಂ, ಎನ್‌ಐಎ, ಡ್ರಗ್ಸ್ ಘಟಕ : ಅಣ್ಣಾಮಲೈ ಪ್ರಣಾಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಘಟಕಗಳ ಸ್ಥಾಪಿಸಲು ಶ್ರಮಿಸುತ್ತೇನೆ  

ಕೊಯಮತ್ತೂರು: ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಘಟಕಗಳ ಸ್ಥಾಪಿಸಲು ಶ್ರಮಿಸುತ್ತೇನೆ ಎಂದು ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.

ತಮ್ಮ ಕ್ಷೇತ್ರದ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿ ಸುದ್ದಿಗಾರರ ಜತೆ ಮಾತನಾಡಿದ ಅವರು, 500 ದಿನಗಳಲ್ಲಿ 100 ಆಶ್ವಾಸನೆಗಳ ಈಡೇರಿಕೆಗಾಗಿ ಪಕ್ಷ ಕೆಲಸ ಮಾಡಲಿದೆ ಭರವಸೆ ನೀಡಿದರು.

ನವೋದಯ ಶಾಲೆಗಳನ್ನು ತೆರೆಯುವುದು, ನೊಯ್ಯಲ್ ಮತ್ತು ಕೌಶಿಕಾ ನದಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವುದು. ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜ್ ಅವರ ಹೆಸರಿನ ರಾತ್ರಿಯಿಡೀ ಸಂಚಾರಿ ಫುಟ್‌ ವ್ಯಾನ್‌ಗಳ ಸೌಲಭ್ಯ ಒದಗಿಸುವುದು. ಪ್ರಸ್ತುತ ಇರುವ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಟರ್ಮಿನಲ್‌ ಆಗಿ ಪರಿವರ್ತಿಸುವುದು, ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ತೆರಯಲಾಗುವುದು ಎಂದು ಅಣ್ಣಾಮಲೈ ತಿಳಿಸಿದರು.