ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ: ಕೋಲಾರದಲ್ಲೂ ರಾಜ್ಯಾಧ್ಯಕ್ಷ ವಿಜಯೇಂದ್ರ ಘೋಷಣೆಗೆ ವಿರೋಧ

| N/A | Published : Feb 01 2025, 12:03 AM IST / Updated: Feb 01 2025, 04:22 AM IST

ಸಾರಾಂಶ

  ಎಲ್ಲಾ ಹಿರಿಯ ಮುಖಂಡರಿಗೂ ತಿಳಿಸಿ, ಅಧ್ಯಕ್ಷರ ಘೋಷಣೆ ಮಾಡಬೇಕಿತ್ತು, ಆದರೆ ರಾಜ್ಯಾಧ್ಯಕ್ಷ ವಿಜಯೇಂದ್ರ ತಮ್ಮ ಬೆಂಬಲಿಗಾರದ ತಮ್ಮೇಶ್ ಗೌಡರ ಅಣತಿಯಂತೆ ಜಿಲ್ಲಾಧ್ಯಕ್ಷರ ಆಯ್ಕೆಯನ್ನು ಏಕಾಪಕ್ಷೀಯವಾಗಿ ಘೋಷಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

 ಕೋಲಾರ : ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಹಾಗೂ ಹಿರಿಯ ಮುಖಂಡರನ್ನು ಕಡೆಗಣಿಸಿ, ಜಿಲ್ಲಾಧ್ಯಕ್ಷರ ಆಯ್ಕೆ ಮಾಡಿರುವುದು ಏಕ ಪಕ್ಷಿಯ ನಿರ್ಧಾರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕೆಂಬೋಡಿ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಜನವರಿ 16 ರಂದೇ ಚುನಾವಣೆ ನಡೆಸುವ ಬಗ್ಗೆ ಜಿಲ್ಲಾ ಮುಖಂಡರಿಗೆ ಹಾಗೂ ಪದಾಧಿಕಾರಿಗಳಿಗೆ ಪಕ್ಷದ ವೀಕ್ಷಕರು ಮಾಹಿತಿ ನೀಡಿದ್ದರೂ, ಸಹ ಪದಾಧಿಕಾರಿಗಳು ಯಾರಿಗೂ ತಿಳಿಸದೆ, ಕೆಲವೇ ಕೆಲವು ಹೊಸ ಕಾರ್ಯಕರ್ತರನ್ನು ಆಹ್ವಾನಿಸಲಾಗಿತ್ತು ಎಂದು ಟೀಕಿಸಿದರು.ಆಕಾಂಕ್ಷಿಗಳ ಪಟ್ಟಿ ನೀಡಿ

ಇದನ್ನು ಗಮನಿಸಿದ, ಚುನಾಣಾಧಿಕಾರಿ ಹಾಗೂ ಸಂಘ ಪರಿವಾರದ ಮುಖಂಡ ಶಿವಕುಮಾರ್ ಮಾತನಾಡಿ, ಹೊಸ ಮುಖಗಳು ಮಾತ್ರ ಇದ್ದು, ಹಳೆಯ ಕಾರ್ಯಕರ್ತರು ಎಲ್ಲಿ ಎಂದು ಪ್ರಶ್ನೆ ಮಾಡಿದ್ದರು. ಚುನಾವಣೆ ನಡೆಸಲು ಆಕಾಂಕ್ಷಿಗಳ ಪಟ್ಟಿ ನೀಡಲು ಸೂಚಿಸಿದರು. ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ಹೊಸ ಮತ್ತು ಹಳೆ ಕಾರ್ಯಕರ್ತರು ಇರಲೇಬೇಕು ಎಂದು ಹೇಳಿದ್ದರು.

ಇದಾದ ನಂತರ ಮಾಜಿ ಸಚಿವ ಅಶ್ವತ್ಥ್‌ ನಾರಾಯಣ್ ಆಕಾಂಕ್ಷಿಗಳ ಪಟ್ಟಿ ಬರೆದುಕೊಂಡು ಹೋಗಿದ್ದರು. ಜ.೨೯ ರಂದು ಬಿ.ವೈ.ವಿಜಯೇಂದ್ರ ಆಪ್ತರಾದ ಬಿ.ಪಿ.ವೆಂಕಟಮುನಿಯಪ್ಪ ಹಾಗೂ ವೈ.ಸಂಪಂಗಿ, ಜಿಲ್ಲಾಧ್ಯಕ್ಷ ವೇಣುಗೋಪಾಲ್ ತರತುರಿ ಪಕ್ಷದ ಜಿಲ್ಲಾ ಕಚೇರಿ ಸಭೆ ಸೇರಿಸಿ, ಜಿಲ್ಲಾಧ್ಯಕ್ಷರನ್ನು ಘೋಷಣೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ನಿಯಮಗಳ ಉಲ್ಲಂಘನೆ

ಪಕ್ಷದ ನಿಯಮಗಳ ಪ್ರಕಾರ ಆಕಾಂಕ್ಷಿಗಳೊಂದಿಗೆ ಚರ್ಚಿಸಿದ ನಂತರ ಎಲ್ಲಾ ಹಿರಿಯ ಮುಖಂಡರಿಗೂ ತಿಳಿಸಿ, ಅಧ್ಯಕ್ಷರ ಘೋಷಣೆ ಮಾಡಬೇಕಿತ್ತು, ಆದರೆ ರಾಜ್ಯಾಧ್ಯಕ್ಷ ವಿಜಯೇಂದ್ರ ತಮ್ಮ ಬೆಂಬಲಿಗಾರದ ತಮ್ಮೇಶ್ ಗೌಡರ ಅಣತಿಯಂತೆ ಜಿಲ್ಲಾಧ್ಯಕ್ಷರ ಆಯ್ಕೆಯನ್ನು ಏಕಾಪಕ್ಷೀಯವಾಗಿ ಘೋಷಿಸಲಾಗಿದೆ. ರಾಜ್ಯಾಧ್ಯಕ್ಷರು ಚುನಾವಣೆ ಅಧಿಕಾರಿ ಶಿವಕುಮಾರ್‌ರನ್ನು ಕತ್ತಲೆಯಲ್ಲಿ ಇಟ್ಟು, ಚುನಾವಣೆ ವ್ಯವಸ್ಥೆಯನ್ನೇ ಹಾಳುಗೆಡವಿ ್ಧ್ಯಕ್ಷರ ಆಯ್ಕೆ ಮಾಡಿರುವುದು ಪಕ್ಷದ ಸಿದ್ದಾಂತಕ್ಕೆ ವಿರುದ್ಧವಾಗಿದೆ.

ತಾವೂ ಸಹ ಆಕಾಂಕ್ಷಿಯಾಗಿದ್ದು, ಸೌಜನ್ಯಕ್ಕೂ ನನ್ನ ಬಳಿ ಚರ್ಚೆ ಮಾಡಿಲ್ಲ, ಜಿಲ್ಲಾಧ್ಯಕ್ಷರ ಆಯ್ಕೆ ಎಂದಿಗೂ ಒಮ್ಮತದ ಅಭ್ಯರ್ಥಿಯಾಗಿ ಇರಬೇಕೇ ವಿನಃ ಏಕ ಪಕ್ಷೀಯವಾಗಿ ಇರಬಾರದು, ಈಗಿರುವುದೆಲ್ಲ, ಹೊಂದಾಣಿಕೆ ರಾಜಕೀಯವಾಗಿದೆ. ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಸಹ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ, ಕಾರು, ಬಂಗಲೆ, ಇದ್ದವರಿಗೆ ಮಾತ್ರ ಹುದ್ದೆ ಕಾರ್ಯಕರ್ತರಿಗೆ ಕರಪತ್ರ ಹಾಗೂ ಬಾವುಟ ಎಂಬುವಂತೆ ಆಗಿದೆ ಎಂದು ಆರೋಪಿಸಿದರು.

ಪಕ್ಷಕ್ಕೆ ದ್ರೋಹ ಬಗೆಯಬೇಡಿ

ವಿಜಯೇಂದ್ರ ಅವರೇ ನಿಮ್ಮ ತಂದೆ ಯಡಿಯೂರಪ್ಪ ಬೆನ್ನಿಗೆ ಚೂರಿ ಹಾಕಿದವರನ್ನೇ ಈಗ ನಿಮ್ಮ ಸುತ್ತಲೂ ಇಟ್ಟುಕೊಂಡಿದ್ದೀರಿ. ಅವರು ಕಟ್ಟಿದ ಪಕ್ಷಕ್ಕೆ ದ್ರೋಹ ಬಗೆಯ ಬೇಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ತೇಜಸ್, ರಾಜು ಇದ್ದರು.