ರಾಹುಲ್‌ ಅವಿದ್ಯಾವಂತ,ರಾಜಕೀಯದ ಬಗ್ಗೆ ತಿಳಿದಿಲ್ಲ:ಅಸ್ಸಾಂ ಸಿಎಂ ಹಿಮಂತ

| Published : Oct 19 2023, 12:45 AM IST

ರಾಹುಲ್‌ ಅವಿದ್ಯಾವಂತ,ರಾಜಕೀಯದ ಬಗ್ಗೆ ತಿಳಿದಿಲ್ಲ:ಅಸ್ಸಾಂ ಸಿಎಂ ಹಿಮಂತ
Share this Article
  • FB
  • TW
  • Linkdin
  • Email

ಸಾರಾಂಶ

ರಾಹುಲ್‌ ಗಾಂಧಿ ಅವಿದ್ಯಾವಂತ. ಅವರಿಗೆ ರಾಜಕೀಯದ ಗಂಧಗಾಳಿ ತಿಳಿದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಾಗ್ದಾಳಿ ನಡೆಸಿದ್ದಾರೆ.
ಗುವಾಹಟಿ: ರಾಹುಲ್‌ ಗಾಂಧಿ ಅವಿದ್ಯಾವಂತ. ಅವರಿಗೆ ರಾಜಕೀಯದ ಗಂಧಗಾಳಿ ತಿಳಿದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಾಗ್ದಾಳಿ ನಡೆಸಿದ್ದಾರೆ. ಮಿಜೋರಂನಲ್ಲಿ ಚುನಾವಣಾ ಪ್ರಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪುತ್ರ ಜಯ್‌ ಶಾ ಬಗ್ಗೆ ರಾಹುಲ್‌, ಜೈಶಾಗೆ ಕ್ರಿಕೆಟ್‌ ಬಗ್ಗೆ ಏನು ತಿಳಿದಿದೆ. ಇದಕ್ಕೆ ತಿರುಗೇಟು ನೀಡಿದ ಹಿಮಂತ,‘ರಾಹುಲ್‌ ಗಾಂಧಿ ಅವಿದ್ಯಾವಂತ. ರಾಜಕೀಯದ ಬಗ್ಗೆ ಗಂಧಗಾಳಿ ತಿಳಿದಿಲ್ಲ. ಇವರು ಬಿಜೆಪಿ ಬಗ್ಗೆ ಬೊಟ್ಟು ಮಾಡಿ ತೋರಿಸುವ ಬದಲು ತಮ್ಮ ಪಕ್ಷ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.