ಸಾರಾಂಶ
ಕೋಲಾರ : ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಸಮಸ್ತ ಹಿಂದುಗಳ ಸಂಘಟನೆಗಳು ಖಂಡಿಸುತ್ತವೆ. ದೇಶದಲ್ಲಿ ಶಾಂತಿಯುತ ಪ್ರತಿಭಟನೆ ಮಾಡಲಾಗುತ್ತಿದೆ. ವಿಶ್ವಸಂಸ್ಥೆಯು ಬಾಂಗ್ಲಾ ದೇಶಕ್ಕೆ ಎಚ್ಚರಿಕೆ ನೀಡುವ ಕೆಲಸ ಮಾಡಬೇಕೆಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆಗ್ರಹಿಸಿದರು.ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹಿಂದೂಪರ ಸಂಘಟನೆಗಳು ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಸುತ್ತಿರುವ ಅಮಾನವೀಯ ಕೃತ್ಯಗಳನ್ನು ಖಂಡಿಸಿ ಮಾನವ ಸರಪಳಿ ಮೂಲಕ ಭಿತ್ತಿಫಲಕಗಳನ್ನು ಹಿಡಿದು ಘೋಷಣೆಗಳು ಕೂಗುತ್ತಾ ರಸ್ತೆ ತಡೆ ನಡೆಸಿದರು.
ವಿದೇಶಿ ಹಿಂದೂಗಳಿಗೆ ಬೆಂಬಲ
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಂಸದರು, ವಿಶ್ವಸಂಸ್ಥೆಯು ಬಾಂಗ್ಲಾದೇಶದ ಪ್ರಧಾನಿಗಳಿಗೆ ಹಿಂದುಗಳ ಮೇಲಿನ ದೌರ್ಜನ್ಯವನ್ನು ನಿಯಂತ್ರಿಸಲು ಎಚ್ಚರಿಕೆ ನೀಡಬೇಕು. ಹಿಂದೂಗಳನ್ನು ಹತ್ತಿಕ್ಕುವ ಕೆಲಸಗಳು ಎಲ್ಲೆ ನಡೆದರೂ ನಾವು ಸಹಿಸುವುದಿಲ್ಲ. ಹಿಂದೂಗಳ ಮೇಲಿನ ದಬ್ಬಾಳಿಕೆ ವಿರೋಧಿಸಿ ಪ್ರತಿಭಟಿಸುವ ಮೂಲಕ ಹಿಂದು ಸಂಘಟನೆಗಳು ವಿದೇಶಗಳಲ್ಲಿರುವ ಭಾರತೀಯರಿಗೆ ಹಾಗೂ ಬಾಂಗ್ಲ ದೇಸದ ಗಡಿಭಾಗದ ಹಿಂದುಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.
ಹಿಂದೂ ವಿರೋಧಿಗಳಿಗೆ ತಕ್ಕ ಉತ್ತರ
ಕರ್ನಾಟಕ ರಾಜ್ಯ ಸರ್ಕಾರವು ಹಿಂದೂಗಳಿಗೆ ಅಗುತ್ತಿರುವ ಅನ್ಯಾಯ ವಿರುದ್ದ ಧ್ವನಿ ಎತ್ತುವಂತಾಗಬೇಕು, ಹಿಂದುಗಳ ಪ್ರಾಣ, ಮಾನಗಳು ರಕ್ಷಿಸುವಂತ ಅವಶ್ಯಕತೆ ಇಲ್ಲದೆ ಏಜೆಂಟ್‌ಗಳಂತೆ ವರ್ತಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವಂತ ಸಂಶಯ ಉಂಟಾಗುತ್ತಿದೆ. ಭಾರತವು ಜಾತ್ಯತೀತ ರಾಷ್ಟ್ರವಾಗಿದೆ. ದೇಶದಲ್ಲಿ ಹಿಂದು ಮುಸ್ಲಿಂ ಕ್ರೈಸ್ತರು ಎಲ್ಲರೂ ಸಹ ಅಣ್ಣತಮ್ಮಂದಿರಂತೆ ಬಾಳ್ವೆ ನಡೆಸುತ್ತಾ ಸೌಹಾರ್ದತೆ ಪ್ರತೀಕವಾಗಿರುವ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ಹಿಂದು ವಿರೋಧಿಗಳಿಗೆ ತಕ್ಕ ಉತ್ತರ ನೀಡುವಂತಾಗಬೇಕು ಎಂದರು. ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ
ವಕ್ಪ್ ಬೋರ್ಡ ಕಾಯ್ದೆಗಳಿಗೆ ತಿದ್ದುಪಡಿಯ ಬಿಲ್‌ಗಳನ್ನು ತರಲಾಗಿದೆ. ಹಿಂದು ದೇವಾಲಯಗಳ ಆಸ್ತಿಗಳನ್ನು ಸರ್ಕಾರವು ಯಾವ ರೀತಿ ತನಗೆ ಸೇರಿದ್ದಾಗಿದೆ ಎಂದು ಹೇಳುತ್ತಿದೆಯೋ ಅದೇ ರೀತಿ ವಕ್ಪ್ ಬೋರ್ಡ್‌ನ ಆಸ್ತಿ ಪಾಸ್ತಿಗಳನ್ನು ತನ್ನದೆಂದು ಘೋಷಿಸುವಂತಾಗಬೇಕು. ಹಿಂದುಗಳಿಗೊಂದು ನ್ಯಾಯ ಮುಸ್ಲಿಂ ಸಮುದಾಯಕ್ಕೊಂದು ನ್ಯಾಯವೇ ಎಂದು ಪ್ರಶ್ನಿಸಿದ ಅವರು ಇದು ಜಾತ್ಯತೀತ ರಾಷ್ಟ್ರವಾಗಿದ್ದರು ಹಿಂದುಗಳೇ ಮೂಲ ವಾರಸುದಾರರು, ನಾವೇ ಭಾರತದ ಅಧಿಪತಿಗಳು ಎಂದು ಘೋಷಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣಗೋಪಾಲ್, ಕುಡಾ ಮಾಜಿ ಅಧ್ಯಕ್ಷ ವಿಜಯಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ವಿಜಯಕುಮಾರ್, ಕೆ.ಡಿ.ಪಿ. ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ ವಿ.ಹೆಚ್,ಪಿ ಮುಖಂಡರಾದ ಸತ್ಯನಾರಾಯಣ, ಭಜರಂಗದಳ ಬಾಬು, ಬಾಲಾಜಿ, ತಿಮ್ಮರಾಯಪ್ಪ, ಓಹಿಲೇಶ್, ಪುಟ್ಟಣ್ಣ, ಆನಂದ್ (ಅಪ್ಪಿ) ಜಯಂತಿ ಲಾಲ್, ಕೆ.ಎಸ್.ವೆಂಕಟಸ್ವಾಮಿ, ಹಾರೋಹಳ್ಳಿ ವೆಂಕಟೇಶ್ ಇದ್ದರು.