ಬಂಗಾರಪೇಟೆ ಟಿಕೆಟ್: ಅಶೋಕ್‌ ಹೇಳಿಕೆಗೆ ಆಕ್ಷೇಪ

| Published : Apr 12 2024, 01:01 AM IST / Updated: Apr 12 2024, 04:24 AM IST

R Ashok

ಸಾರಾಂಶ

ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ನಾವು ಸಾಕಷ್ಟು ಶ್ರಮ ಹಾಕಿದ್ದೇವೆ. ಅಲ್ಲದೆ ಕಳೆದ ಬಾರಿ ಟಿಕೆಟ್‌ ತ್ಯಾಗ ಮಾಡಿದ್ವಿ, ಇಂತಹ ಸ್ಥಿಯಲ್ಲಿ ೨೦೨೮ ಯಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ನಾನು ಆಕಾಂಕ್ಷಿ ಹೀಗಿರುವಾಗ ನೀವು ಏಕಾಏಕಿ ಮುನಿಸ್ವಾಮಿ ಹೆಸರು ಘೋಷಣೆ ಮಾಡಿದ್ದು ಸರಿಯಿಲ್ಲ

  ಬಂಗಾರಪೇಟೆ : ಲೋಕಸಭೆ ಟಿಕೆಟ್ ಸ್ಥಾನವನ್ನು ತ್ಯಾಗ ಮಾಡಿದ ಸಂಸದ ಎಸ್.ಮುನಿಸ್ವಾಮಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಂಗಾರಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಚಾರ ಸಭೆಯಲ್ಲಿ ಘೋಷಣೆ ಮಾಡಿದಕ್ಕೆ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮತ್ತು ಅವರ ಪುತ್ರ ಬಿ.ವಿ.ಮಹೇಶ್ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು.ತಾಲೂಕಿನ ಅನಿಗಾನಹಳ್ಳಿ ಗ್ರಾಮದಲ್ಲಿ ನಡೆದ ಲೋಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಅಶೋಕ್ ಶಾಪೂರ ಗ್ರಾಮದಲ್ಲಿ ಸಂಸದ ಮುನಿಸ್ವಾಮಿರನ್ನು ವಿಧಾನಸಭೆಗೆ ಘೋಷಣೆ ಮಾಡಿದಕ್ಕೆ ಮಾಜಿ ಶಾಸಕ ವೆಂಕಟಮುಮಿಯಪ್ಪ ಮತ್ತು ಅವರ ಪುತ್ರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ವಿರೋಧವ್ಯ ಕ್ತಪಡಿಸಿದರು.

ಪಕ್ಷ ಸಂಘಟನೆಗೆ ಶ್ರಮಿಸಿದ್ದೇವೆ

ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ನಾವು ಸಾಕಷ್ಟು ಶ್ರಮ ಹಾಕಿದ್ದೇವೆ. ಅಲ್ಲದೆ ಕಳೆದ ಬಾರಿ ಟಿಕೆಟ್‌ ತ್ಯಾಗ ಮಾಡಿದ್ವಿ, ಇಂತಹ ಸ್ಥಿಯಲ್ಲಿ ೨೦೨೮ ಯಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ನಾನು ಆಕಾಂಕ್ಷಿ ಹೀಗಿರುವಾಗ ನೀವು ಏಕಾಏಕಿ ಮುನಿಸ್ವಾಮಿ ಹೆಸರು ಘೋಷಣೆ ಮಾಡಿದ್ದು ಸರಿಯಿಲ್ಲ ಆಕ್ಷೇಪ ವ್ಯಕ್ತಪಡಿಸಿದರು. 

ಹೇಳಿಕೆ ವಾಪಸ್‌ ಪಡೆದ ಅಶೋಕ್‌

ಆಗ ಅಶೋಕ್ ವಾಸ್ತವ ಸ್ಥಿತಿ ಅರಿಯದೆ ಘೋಷಣೆ ಮಾಡಿದ್ದನ್ನು ವಾಪಸ್ ಪಡೆಯುವುದಾಗಿ ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆದರು. 

ಕ್ಷೇತ್ರದಿಂದ ನಾನೇ ಸ್ಪರ್ಧಿಸುವೆ  : ಬಳಿಕ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಮಾತನಾಡಿ, ಕೆಲವರು ಪಕ್ಷದಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ ಅದಕ್ಕೆ ನಾನು ಸೊಪ್ಪು ಹಾಕಲ್ಲ, ಮುಂದಿನ ವಿಧಾನಸಭೆ ಚುನಾವಣೆಗೆ ನಾನು ಬಂಗಾರಪೇಟೆ ಕ್ಷೇತ್ರದಿಂದ ಸ್ಪರ್ಧೆ ಖಚಿತ. ನಾನು ಕ್ಷೇತ್ರದಲ್ಲಿ ಪಕ್ಷ ಕಟ್ಟಿರುವೆ. ಯಾರೋ ಕಟ್ಟಿದ ಮನೆಯಲ್ಲಿ ನಾನು ರಾಜಕೀಯ ನೆಲೆ ಕಂಡುಕೊಳ್ಳಲು ಹೊರಟಿಲ್ಲ. ನಾನು ಯಾರ ವಿರುದ್ದವೂ ಸ್ಪರ್ಧೆ ಮಾಡ್ತಿಲ್ಲ ಪಕ್ಷ ಕಟ್ಟಿರುವೆ ಸ್ಪರ್ಧೆ ಮಾಡಿಯೇ ತೀರುವೆ ಎಂದರು.ಸಂಸದ ಮುನಿಸ್ವಾಮಿ ಎಲ್ಲಾ ಕಡೆ ಪಕ್ಷದಲ್ಲಿ ಗುಂಪುಗಾರಿಕೆ ಮಾಡುತ್ತಿದ್ದಾರೆ, ಕೋಲಾರದಲ್ಲಿ ದಲಿತರ ಸ್ವಾಭಿಮಾನಿ ಸಮಾವೇಶಕ್ಕೆ ನನ್ನನ್ನು ಹಾಗೂ ನಮ್ಮ ತಂದೆ ವೆಂಕಟಮುನಿಯಪ್ಪರನ್ನೂ ಸಮಾವೇಶಕ್ಕೆ ಕರೆಯದೆ ಕಡೆಗಣಿಸಿದ್ದಾರೆಂದು ಸಂಸದರ ವಿರುದ್ದ ಕಿಡಿಕಾರಿದರು.