ಮುಖಚಹರೆ ಹಾಗೂ ಕೂದಲಿನ ಬಣ್ಣದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಹೋಲುತ್ತಿದ್ದ ಹಾಗೂ ಅವರದೇ ಹೆಸರು ಪಡೆದ ಕಾರಣದಿಂದ ಭಾರೀ ವೈರಲ್‌ ಆಗಿದ್ದ ಬಾಂಗ್ಲಾದೇಶದ 700 ಕೆ.ಜಿ. ತೂಕದ ಎಮ್ಮೆಯನ್ನು ಬಕ್ರೀದ್‌ ಪ್ರಯುಕ್ತ ಕೊಡಲಾಗುವ ಬಲಿಯಿಂದ ರಕ್ಷಿಸಲಾಗಿದೆ. ಜತೆಗೆ ಅದನ್ನು ಢಾಕಾದ ಪ್ರಾಣಿ ಸಂಗ್ರಹಾಲಯದಲ್ಲಿ ಇಡಲು ನಿರ್ಧರಿಸಲಾಗಿದೆ.

ಢಾಕಾ: ಮುಖಚಹರೆ ಹಾಗೂ ಕೂದಲಿನ ಬಣ್ಣದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಹೋಲುತ್ತಿದ್ದ ಹಾಗೂ ಅವರದೇ ಹೆಸರು ಪಡೆದ ಕಾರಣದಿಂದ ಭಾರೀ ವೈರಲ್‌ ಆಗಿದ್ದ ಬಾಂಗ್ಲಾದೇಶದ 700 ಕೆ.ಜಿ. ತೂಕದ ಎಮ್ಮೆಯನ್ನು ಬಕ್ರೀದ್‌ ಪ್ರಯುಕ್ತ ಕೊಡಲಾಗುವ ಬಲಿಯಿಂದ ರಕ್ಷಿಸಲಾಗಿದೆ. ಜತೆಗೆ ಅದನ್ನು ಢಾಕಾದ ಪ್ರಾಣಿ ಸಂಗ್ರಹಾಲಯದಲ್ಲಿ ಇಡಲು ನಿರ್ಧರಿಸಲಾಗಿದೆ.

ವಧೆಗೂ ಕೆಲವೇ ಗಂಟೆಗಳ ಮುನ್ನ ಸರ್ಕಾರದ ಆದೇಶದಂತೆ ವಶ

ವಧೆಗೂ ಕೆಲವೇ ಗಂಟೆಗಳ ಮುನ್ನ ಸರ್ಕಾರದ ಆದೇಶದಂತೆ ಟ್ರಂಪ್‌ ಎಮ್ಮೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಅದರ ಮಾಲೀಕ, ‘ಟ್ರಂಪ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ. ಇದಕ್ಕೆ ಬದಲಾಗಿ ಹಣ ಅಥವಾ ಇನ್ನೊಂದು ಎಮ್ಮೆ, ಹಸು, ಎತ್ತನ್ನು ಕೊಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ’ ಎಂದರು.

ಅಪರೂಪದ ಎಮ್ಮೆಯನ್ನು ಜತನದಿಂದ ನೋಡಿಕೊಳ್ಳಲಾಗುವುದು

ಅತ್ತ ಟ್ರಂಪ್‌ನ ಮುಂದಿನ ವಾಸಸ್ಥಾನವಾಗಲಿರುವ ರಾಷ್ಟ್ರೀಯ ಮೃಗಾಲಯದ ಮೇಲ್ವಿಚಾರಕ ಮಾತನಾಡಿ, ‘ಈ ಅಪರೂಪದ ಎಮ್ಮೆಯನ್ನು ಜತನದಿಂದ ನೋಡಿಕೊಳ್ಳಲಾಗುವುದು. ಆಗಾಗಲೇ ಅದಕ್ಕಾಗಿ ಪ್ರತ್ಯೇಕ ಶೆಡ್‌ ಮತ್ತು ಆರೈಕೆದಾರರ ವ್ಯವಸ್ಥೆ ಮಾಡಲಾಗಿದೆ’ ಎಂದಿದ್ದಾರೆ. ಈ ಎಮ್ಮೆ ಇನ್ನೂ ಕಿರಿವಯಸ್ಸಿನದ್ದಾಗಿದ್ದು, ಹಲವು ವರ್ಷ ಬಾಳಲಿದೆ ಎನ್ನಲಾಗಿದೆ.

ಅತ್ತ ಬಾಂಗ್ಲಾದಲ್ಲಿ, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಹೋಲುವ ಎಮ್ಮೆಯೂ ಕಂಡುಬಂದಿದ್ದು, ಅದನ್ನೂ ಈದ್‌ ಹಿನ್ನೆಲೆಯಲ್ಲಿ ಬಲಿ ಕೊಡಲಾಗುವುದು ಎನ್ನಲಾಗಿತ್ತು. ಆದರೆ ಅದರ ಬಗ್ಗೆ ನಿಖರ ಮಾಹಿತಿ ಲಭಿಸಿಲ್ಲ.