ಬೇಗೂರು: ರಾಜಧನ ವಂಚಿಸಿದ ಮೂರು ಟಿಪ್ಪರ್‌ ವಶ

| Published : Dec 01 2023, 12:45 AM IST

ಸಾರಾಂಶ

ಕನ್ನಡಪ್ರಭ ಪತ್ರಿಕೆಯಲ್ಲಿ ಕ್ರಷರ್‌ ಮಾಲೀಕರ ಮುಲಾಜಿನಲ್ಲಿ ಚೆಕ್‌ ಪೋಸ್ಟ್‌ ಎಂದು ಪ್ರಕಟವಾದ ಸುದ್ದಿಯ ಹಿನ್ನೆಲೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ದಾಳಿ ನಡೆಸಿ ರಾಯಲ್ಟಿ ಹಾಗೂ ಎಂಡಿಪಿ ಇಲ್ಲದ ಟಿಪ್ಪರ್‌ ವಶ ಪಡಿಸಿಕೊಂಡಿದ್ದಾರೆ.ಗುಂಡ್ಲುಪೇಟೆ ಕಡೆಯಿಂದ ಬೇಗೂರು ಕಡೆಗೆ ಬರುತ್ತಿದ್ದ ರಾಕ್‌ ಲೈನ್‌ ಹೆಸರಿನ (ಕೆಎ ೦೯ ಎಎ ೬೭೮೩) ಟಿಪ್ಪರ್‌ ಅನ್ನು ಉಪ ನಿರ್ದೇಶಕಿ ಪದ್ಮಜ ತಡೆದು ತಪಾಸಣೆ ನಡೆಸಿದಾಗ ಟಿಪ್ಪರ್‌ನಲ್ಲಿದ್ದ ಬಿಳಿ ಕಲ್ಲಿಗೆ ಪರ್ಮಿಟ್‌ ಇಲ್ಲದ ಕಾರಣ ಟಿಪ್ಪರ್‌ ವಶಕ್ಕೆ ಪಡೆದು ಬೇಗೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ರಾಜಧನ ವಂಚನೆಯ ಕುರಿತು ನಿಜವಾದ ‘ಕನ್ನಡಪ್ರಭ’ದ ವರದಿ । ಓವರ್ ಲೋಡ್ ಹಾಗೂ ರಾಯಲ್ಟಿ, ಪರ್ಮಿಟ್ ಇಲ್ಲದ ಲಾರಿಗಳ ವಶ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕನ್ನಡಪ್ರಭ ಪತ್ರಿಕೆಯಲ್ಲಿ ಕ್ರಷರ್‌ ಮಾಲೀಕರ ಮುಲಾಜಿನಲ್ಲಿ ಚೆಕ್‌ ಪೋಸ್ಟ್‌ ಎಂದು ಪ್ರಕಟವಾದ ಸುದ್ದಿಯ ಹಿನ್ನೆಲೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ದಾಳಿ ನಡೆಸಿ ರಾಯಲ್ಟಿ ಹಾಗೂ ಎಂಡಿಪಿ ಇಲ್ಲದ ಟಿಪ್ಪರ್‌ ವಶ ಪಡಿಸಿಕೊಂಡಿದ್ದಾರೆ.

ಗುಂಡ್ಲುಪೇಟೆ ಕಡೆಯಿಂದ ಬೇಗೂರು ಕಡೆಗೆ ಬರುತ್ತಿದ್ದ ರಾಕ್‌ ಲೈನ್‌ ಹೆಸರಿನ (ಕೆಎ ೦೯ ಎಎ ೬೭೮೩) ಟಿಪ್ಪರ್‌ ಅನ್ನು ಉಪ ನಿರ್ದೇಶಕಿ ಪದ್ಮಜ ತಡೆದು ತಪಾಸಣೆ ನಡೆಸಿದಾಗ ಟಿಪ್ಪರ್‌ನಲ್ಲಿದ್ದ ಬಿಳಿ ಕಲ್ಲಿಗೆ ಪರ್ಮಿಟ್‌ ಇಲ್ಲದ ಕಾರಣ ಟಿಪ್ಪರ್‌ ವಶಕ್ಕೆ ಪಡೆದು ಬೇಗೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ನಂತರ ಬೇಗೂರು ಬಳಿ ನಂಜನಗೂಡು ಕಡೆಗೆ ತೆರಳುತ್ತಿದ್ದ (ಕೆಎ೧೧ ಸಿ ೪೨೭೬) ಟಿಪ್ಪರ್‌ನಲ್ಲಿ ಸುಮಾರು ೫೦ ಟನ್‌ಗೂ ಹೆಚ್ಚು ಎಂ.ಸ್ಯಾಂಡ್‌ ತುಂಬಿದ ಟಿಪ್ಪರ್‌ರನ್ನು ಉಪ ನಿರ್ದೇಶಕಿ ಪದ್ಮಜ ತಡೆದು ತಪಾಸಣೆ ನಡೆಸಿದಾಗ ೨೫ ಟನ್‌ ಎಂಡಿಪಿ ಇದ್ದ ಕಾರಣ ಓವರ್‌ ಲೋಡ್‌ ಎಂ.ಸ್ಯಾಂಡ್‌ ಇರುವುದನ್ನು ಕಂಡು ಟಿಪ್ಪರ್‌ನ್ನು ಬೇಗೂರು ಪೊಲೀಸರ ವಶಕ್ಕೆ ನೀಡಿದ್ದಾರೆ.

ಕನ್ನಡಪ್ರಭದೊಂದಿಗೆ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ, ಒಂದು ಟಿಪ್ಪರ್‌ ಸಾಗಿಸುತ್ತಿದ್ದ ಕಲ್ಲಿಗೆ ಪರ್ಮಿಟ್‌ ಇರಲಿಲ್ಲ. ಮತ್ತೊಂದು ಟಿಪ್ಪರ್‌ ಓವರ್‌ ಲೋಡ್‌ಗೆ ಎಂಡಿಪಿ ಇಲ್ಲದ ಕಾರಣ ಎರಡೂ ಟಿಪ್ಪರ್‌ ವಶಕ್ಕೆ ಪಡೆದು ಬೇಗೂರು ಪೊಲೀಸ್‌ ಠಾಣೆಗೆ ಒಪ್ಪಿಸಿದ್ದೇನೆ ಎಂದರು.

ಚೆಕ್‌ಪೋಸ್ಟ್‌ಗೂ ಭೇಟಿ:

ಹಿರೀಕಾಟಿ ಬಳಿಯ ಖನಿಜ ತನಿಖಾ ಠಾಣೆಯಲ್ಲಿ ಹೋಂ ಗಾರ್ಡ್‌ ತಪಾಸಣೆ ನಡೆಸುತ್ತಿದ್ದಾರೆ ಎಂದು ನ.೩೦ ರ ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಕ್ರಷರ್‌ ಮಾಲೀಕರ ಮುಲಾಜಿನಲ್ಲಿ ಚೆಕ್‌ ಪೋಸ್ಟ್‌ ಎಂದು ವರದಿ ಪ್ರಕಟಗೊಂಡ ಹಿನ್ನೆಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ಚೆಕ್‌ ಪೋಸ್ಟ್‌ಗೆ ಭೇಟಿ ನೀಡಿ ಕೆಲ ತಾಸು ತಪಾಸಣೆ ನಡೆಸಿದರು.

ಭೂ ವಿಜ್ಞಾನಿ ಹಿಡಿಯುತ್ತಿಲ್ಲ?:

ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು ‘ಕನ್ನಡಪ್ರಭ’ ಪತ್ರಿಕೆಯಲ್ಲಿ ವರದಿಗಳು ಬಂದ ಬಳಿಕವಾದರೂ ಟಿಪ್ಪರ್‌ಗಳ ತಪಾಸಣೆ ನಡೆಸಿ ಕೇಸು ಹಾಕುತ್ತಿದ್ದಾರೆ.

ಆದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿಗಳು ತಾಲೂಕಿಗೆ ಬಂದಾಗ ಓವರ್‌ ಲೋಡ್‌, ರಾಯಲ್ಟಿ/ಎಂಡಿಪಿ ಇಲ್ಲದೆ ತೆರಳುವ ಟಿಪ್ಪರ್‌ಗಳು ಹಿಡಿದಿದ್ದು ತೀರಾ ಅಪರೂಪ ಎನ್ನಬಹುದಾಗಿದೆ.

-

ಬಾಕ್ಸ್...

ಕನ್ನಡಪ್ರಭ ವರದಿ ನಿಜವಾಯ್ತು!

ಗುಂಡ್ಲುಪೇಟೆ: ಕನ್ನಡಪ್ರಭ ಪತ್ರಿಕೆಯಲ್ಲಿ ಕ್ವಾರಿಯ ರಾ ಮೆಟಿರಿಯಲ್‌, ಕ್ರಷರ್‌ ಉತ್ಪನ್ನಗಳ ಸಾಗಾಣಿಕೆಯಲ್ಲಿ ರಾಯಲ್ಟಿ/ಎಂಡಿಪಿ ವಂಚನೆಯಾಗುತ್ತಿದೆ ಎಂದು ನಿರಂತರ ವರದಿಯಾಗಿದ್ದು ನಿಜವಾಗುತ್ತಿದೆ. ಬಹುತೇಕ ಟಿಪ್ಪರ್‌ಗಳಲ್ಲಿ ರಾಯಲ್ಟಿ,ಎಂಡಿಪಿ ಇರಲ್ಲ. ಇದ್ದರೂ ಹೆಚ್ಚು ಟನ್‌ ಇದ್ದಾಗ ಕಡಿಮೆ ಟನ್‌ಗೆ ರಾಯಲ್ಟಿ, ಎಂಡಿಪಿ ಹಾಕಿ ಸರ್ಕಾರಕ್ಕೆ ರಾಜಧನ ವಂಚನೆಯಾಗುತ್ತಿದೆ ಎಂದು ವರದಿ ಪ್ರಕಟಗೊಂಡಿವೆ. ಆದರೆ ಬಹುತೇಕ ಕ್ವಾರಿಗಳಲ್ಲಿ ರಾ ಮೆಟಿರಿಯಲ್‌ಗೆ ರಾಯಲ್ಟಿ ಇಲ್ಲದೆ ಕ್ರಷರ್‌ಗೆ ಕಲ್ಲು ಸೇರುತ್ತಿವೆ. ಹಿರೀಕಾಟಿ ಬಳಿ ಚೆಕ್‌ ಪೋಸ್ಟ್‌ ಇದೆ. ಚೆಕ್‌ ಪೋಸ್ಟ್‌ಗಿಂತ ಹಿಂದಿರುವ ಕ್ರಷರ್‌ಗೆ ರಾಯಲ್ಟಿ ಇಲ್ಲದೆ ಕಲ್ಲು ಹೋಗುತ್ತಿದೆ, ಈ ಬಗ್ಗೆಯೂ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿಗೆ ಬರುವ ಇತರೆ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ.

--------------

೩೦ಜಿಪಿಟಿ೪

ಗುಂಡ್ಲುಪೇಟೆ ತಾಲೂಕಿನ ಬೇಗೂರು ಬಳಿ ರಾಯಲ್ಟಿ ಇಲ್ಲದ ಟಿಪ್ಪರ್‌ನ್ನು ಜಿಲ್ಲಾ ಗಣಿ ಮತ್ತು ಭೂ ವಿಜ್ಷಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ವಶಕ್ಕೆ ಪಡೆದಿರುವುದು.೩೦ಜಿಪಿಟಿ೫

ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಬಳಿ ಖನಿಜ ತನಿಖಾ ಠಾಣೆಯಲ್ಲಿ ಖನಿಜ ತನಿಖಾ ಠಾಣೆಯ ಮುಂದೆ ಗುರುವಾರ ಸಂಜೆ ತಪಾಸಣೆ ನಡೆಸುತ್ತಿರುವುದು.