250 ಜತೆ ಬಟ್ಟೆಯೇ ನನ್ನ ಮೇಲಿನ ದೊಡ್ಡ ಆರೋಪ: ಮೋದಿ

| Published : May 21 2024, 12:44 AM IST / Updated: May 21 2024, 04:32 AM IST

PM Modi
250 ಜತೆ ಬಟ್ಟೆಯೇ ನನ್ನ ಮೇಲಿನ ದೊಡ್ಡ ಆರೋಪ: ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

‘ಪ್ರತಿಪಕ್ಷಗಳು ತಮ್ಮ ಮೇಲೆ ಹೊರಿಸಿರುವ ದೊಡ್ಡ ಆರೋಪವೆಂದರೆ ಅದು ನನ್ನ ಬಳಿ 250 ಬಟ್ಟೆ ಇದೆ ಎಂದು. ಆದರೆ 250 ಕೋಟಿ ರು. ಲೂಟಿಕೋರರಿಗಿಂದ 250 ಬಟ್ಟೆ ಹೊಂದಿದವರು ಮೇಲು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭುವನೇಶ್ವರ: ‘ಪ್ರತಿಪಕ್ಷಗಳು ತಮ್ಮ ಮೇಲೆ ಹೊರಿಸಿರುವ ದೊಡ್ಡ ಆರೋಪವೆಂದರೆ ಅದು ನನ್ನ ಬಳಿ 250 ಬಟ್ಟೆ ಇದೆ ಎಂದು. ಆದರೆ 250 ಕೋಟಿ ರು. ಲೂಟಿಕೋರರಿಗಿಂದ 250 ಬಟ್ಟೆ ಹೊಂದಿದವರು ಮೇಲು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘ನನ್ನ ಬಳಿ 250 ಜೊತೆ ಬಟ್ಟೆ ಇರುವುದಾಗಿ ನಾನು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್‌ ನಾಯಕ ಅಮರಸಿಂಹ ಚೌಧರಿ ಆರೋಪಿಸಿದ್ದರು. ಬಳಿಕ ನಾನು ಜನರ ಮುಂದೆ 250 ಕೋಟಿ ರು. ಲೂಟಿ ಹೊಡೆಯುವವರು ಮತ್ತು 250 ಜೊತೆ ಬಟ್ಟೆ ಹೊಂದಿದವರಲ್ಲಿ ಯಾರು ಬೇಕು ಎಂದು ಪ್ರಶ್ನಿಸಿದೆ. ಆಗ ಜನರು 250 ಜೊತೆ ಬಟ್ಟೆ ಹೊಂದಿರುವವರೇ ಮೇಲು ಎಂದು ಉತ್ತರಿಸಿದರು. ಆದರೂ ನಾನು ಅಮರಸಿಂಹ ಅವರ ಆರೋಪವನ್ನು ಒಪ್ಪಿಕೊಳ್ಳುತ್ತೇನೆ’ ಎಂದು ವ್ಯಂಗ್ಯವಾಡಿದರು.

ಇತ್ತೀಚೆಗೆ ರಾಹುಲ್‌ ಗಾಂಧಿಯೂ ಸಹ ಪ್ರಧಾನಿಯಾಗಿ ಮೋದಿ 1.6 ಲಕ್ಷ ರು. ಪಗಾರ ಪಡೆದು ಹೆಚ್ಚಿನ ಪಾಲು ದುಬಾರಿ ವಸ್ತ್ರ ಖರೀದಿಗೇ ಬಳಸುತ್ತಾರೆ ಎಂದು ಆರೋಪಿಸಿದ್ದರು.