ಸಾರಾಂಶ
ಲಖನೌ: ಗಾಂಧಿ ಕುಟುಂಬದ ಸದಸ್ಯೆ ಹಾಗೂ ನಾಲ್ಕು ಬಾರಿ ಸಂಸದರಾಗಿದ್ದ ಮನೇಕಾ ಗಾಂಧಿ ಈ ಬಾರಿ ಉತ್ತರ ಪ್ರದೇಶದ ಸುಲ್ತಾನ್‌ಪುರ್ ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ.
ಸಮಾಜವಾದಿ ಪಕ್ಷದ ಅಭ್ಯರ್ಥಿ ರಾಮ್ ಭುವಲ್ ನಿಶಾದ್ ಅವರು 43,174 ಮತ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ನಿಶಾದ್ ಒಟ್ಟು 4,44,330 ಮತಗಳನ್ನು ಪಡೆದಿದ್ದರೆ, ಮನೇಕಾ ಗಾಂಧಿ ಅವರು 4,01,156 ಮತಗಳನ್ನು ಪಡೆದಿದ್ದರು. ಮನೇಕಾ ಗಾಂಧಿ ಅವರ ಮಗ ವರುಣ್ ಗಾಂಧಿ ಅವರಿಗೆ ಈ ಬಾರಿ ಬಿಜೆಪಿ ಪಿಲಿಭೀತ್‌ನಿಂದ ಟಿಕೆಟ್ ನಿರಾಕರಿಸಿತ್ತು. ಅದರ ಬೆನ್ನಲ್ಲೇ ಮನೇಕಾ ಕುಟುಂಬಕ್ಕೆ ಈ ಆಘಾತ ಎದುರಾಗಿದೆ.
6 ಸ್ವತಂತ್ರ ಅಭ್ಯರ್ಥಿಗಳು ಜಯಭೇರಿ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ 6 ಸ್ವತಂತ್ರ ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದಾರೆ. ಇದರಲ್ಲಿ ಖಲಿಸ್ತಾನಿ ಉಗ್ರ ಅಮೃತಪಾಲ್ ಸಿಂಗ್ ಕೂಡ ಪಂಜಾಬ್‌ನ ಖಡೂರ್ ಸಾಹೀಬ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ.
ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಿರುದ್ಧ ಸ್ವತಂತ್ರ ಅಭ್ಯರ್ಥಿ ರಶೀದ್ ಶೇಖ್ ಅವರು 2.04 ಲಕ್ಷ ಮತಗಳಿಂದ ಜಯಭೇರಿ ಸಾಧಿಸಿದ್ದಾರೆ.ಮತ್ತೊಂದೆಡೆ ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ಸರಬ್‌ಜಿತ್ ಸಿಂಗ್ ಖಾಲ್ಸಾ, ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವಿಶಾಲ್ ಪಟೇಲ್ ಜಯಿಸಿದ್ದಾರೆ.
ಕಳೆದ ಬಾರಿ ಬಿಜೆಪಿ ಕೈಯಲ್ಲಿದ್ದ ಲಡಾಖ್ ಈ ಬಾರಿ ಮೊಹಮ್ಮದ್ ಹನೀಫ್ ಜಹಾನ್ ಗೆದ್ದಿದ್ದಾರೆ. ಇತ್ತ ದಿಯೂ ದಾಮನ್‌ನಲ್ಲಿ ಉಮೇಶ್ ಭಾಯ್ ಪಟೇಲ್ ಎಂಬುವರು ಗೆಲುವು ಸಾಧಿಸಿದ್ದಾರೆ.