ಬಿಜೆಪಿ ಸೇರಲು ಬೆದರಿಕೆ ಎಂದ ಆತಿಶಿಗೆ ಬಿಜೆಪಿ ಮಾನಹಾನಿ ನೋಟಿಸ್‌

| Published : Apr 04 2024, 01:02 AM IST / Updated: Apr 04 2024, 05:19 AM IST

ಬಿಜೆಪಿ ಸೇರಲು ಬೆದರಿಕೆ ಎಂದ ಆತಿಶಿಗೆ ಬಿಜೆಪಿ ಮಾನಹಾನಿ ನೋಟಿಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಸೇರದಿದ್ದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಂತೆ ಜಾರಿ ನಿರ್ದೇಶನಾಲಯ ಮೂಲಕ ಆಮ್‌ಆದ್ಮಿ ಪಕ್ಷದ ನಾಲ್ವರು ಹಿರಿಯ ನಾಯಕರನ್ನು ಬಂಧಿಸಲಾಗುವುದು ಎಂಬ ಸಂದೇಶ ರವಾನಿಸಲಾಗಿದೆ ಎಂದು ಆರೋಪಿಸಿದ್ದ ದೆಹಲಿ ಸಚಿವೆ ಆತಿಷಿಗೆ ದೆಹಲಿ ಬಿಜೆಪಿ ಘಟಕ ನೋಟಿಸ್‌ ನೀಡಿದೆ.

ನವದೆಹಲಿ: ಬಿಜೆಪಿ ಸೇರದಿದ್ದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಂತೆ ಜಾರಿ ನಿರ್ದೇಶನಾಲಯ ಮೂಲಕ ಆಮ್‌ಆದ್ಮಿ ಪಕ್ಷದ ನಾಲ್ವರು ಹಿರಿಯ ನಾಯಕರನ್ನು ಬಂಧಿಸಲಾಗುವುದು ಎಂಬ ಸಂದೇಶ ರವಾನಿಸಲಾಗಿದೆ ಎಂದು ಆರೋಪಿಸಿದ್ದ ದೆಹಲಿ ಸಚಿವೆ ಆತಿಷಿಗೆ ದೆಹಲಿ ಬಿಜೆಪಿ ಘಟಕ ನೋಟಿಸ್‌ ನೀಡಿದೆ.

ಈ ಕುರಿತು ಸುದ್ದಿಗಾರರಿಗೆ ತಿಳಿಸಿದ ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ್‌, ‘ಆತಿಶಿಗೆ ತಮ್ಮ ಹೇಳಿಕೆಗೆ ಸೂಕ್ತ ದಾಖಲೆ ಒದಗಿಸುವಂತೆ ಸೂಚಿಸಿ ಮಾನಹಾನಿ ನೋಟಿಸ್‌ ಜಾರಿಗೊಳಿಸಿದ್ದೇವೆ. ಒಂದು ವೇಳೆ ಅವರ ಮೇಲೆ ಅವರು ಸಾಕ್ಷ್ಯ ನೀಡಲು ವಿಫಲರಾದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಇಲ್ಲವೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದಿದ್ದಾರೆ.