ಸಮಸ್ಯೆ ಕೇಳದೆ ಅಧಿವೇಶನದಲ್ಲಿ ರಾಜಕಾರಣ ಮಾಡಿದ ಬಿಜೆಪಿ: ಸಚಿವ ತಿಮ್ಮಾಪುರ ಕಿಡಿ

| Published : Dec 16 2023, 02:01 AM IST

ಸಮಸ್ಯೆ ಕೇಳದೆ ಅಧಿವೇಶನದಲ್ಲಿ ರಾಜಕಾರಣ ಮಾಡಿದ ಬಿಜೆಪಿ: ಸಚಿವ ತಿಮ್ಮಾಪುರ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ರೈತರ ಕೆಲಸ, ನೀರಾವರಿ ಕೆಲಸ ಆಗಬೇಕು ಎಂದು ಕೇಳಲಿಲ್ಲ. ಸದನದ ಸಮಯವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ ಎಂದು ಸಚಿವ ಆರ್‌.ಬಿ.ತಿಮ್ಮಾಪುರ ಕಿಡಿಕಾರಿದರು.

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಚಳಿಗಾಲದ ಅಧಿವೇಶನ ನಡೆಸಿದ್ದೇವೆ. ದುರ್ದೈವ ಎಂದರೆ ಇಲ್ಲಿನ ಸಮಸ್ಯೆಗಳನ್ನು ಕೇಳದೇ ಬಿಜೆಪಿ ರಾಜಕಾರಣ ಮಾಡಿದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಕಿಡಿಕಾರಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ರೈತರ ಕೆಲಸ, ನೀರಾವರಿ ಕೆಲಸ ಆಗಬೇಕು ಎಂದು ಕೇಳಲಿಲ್ಲ. ಸದನದ ಸಮಯವನ್ನು ಸಂಪೂರ್ಣವಾಗಿ ಹಾಳು ಮಾಡಿದರು. ನಮ್ಮ ಕಾರ್ಯಕರ್ತರನ್ನು ಬಡಿದರು, ಪೊಲೀಸರನ್ನು ಬೈಯ್ದದ್ದನ್ನು ಬಿಟ್ಟು ಏನೂ ಮಾಡಲಿಲ್ಲ. ಅವರ ರಾಜಕೀಯ ತೀಟೆಗಾಗಿ ಅಧಿವೇಶನ ಉಪಯೋಗ ಮಾಡಿಕೊಂಡರು ಎಂದು ವಾಗ್ದಾಳಿ ನಡೆಸಿದರು. ಸಿಎಂ ಸೇರಿ ಐವರನ್ನು ರಾಕ್ಷಸ ಗಣದವರು ಎಂಬ ಕೆ.ಎಸ್‌.ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪನ ಕಣ್ಣಲ್ಲಿ ನಮ್ಮವರು ರಾಕ್ಷಸ ರೀತಿ ಕಾಣುತ್ತಾರೆ. ರಾಜ್ಯದ ಜನರು ರಾಕ್ಷಸರನ್ನು ಆಯ್ಕೆ ಮಾಡಿ ಕಳಿಸುತ್ತಾರಾ? ಮಾತು ನಡವಳಿಕೆ ಹೇಗಿರಬೇಕು ಈಶ್ವರಪ್ಪನವರಿಗೆ ಗೊತ್ತಿಲ್ಲ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.