.ಬಿಜೆಪಿ ಮಹಿಳೆಯರಿಗೆ ಸ್ವಾಲಂಬಿ ಬದುಕು ಕಟ್ಟಿಕೊಟ್ಟಿದೆ

| Published : Apr 06 2024, 12:52 AM IST / Updated: Apr 06 2024, 04:23 AM IST

ಸಾರಾಂಶ

ರಾಜ್ಯದಲ್ಲಿ ೫ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಬಳಿಕ ಬೆಲೆ ಏರಿಕೆ, ರಿಜಿಸ್ಟ್ರೇಷನ್ ಸುಂಕ ಹೆಚ್ಚು ಮಾಡಿದೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ೪ ಲಕ್ಷ ಮನೆಗಳನ್ನು ನಾವು ಕೊಟ್ಟಿದ್ದೇವೆ ಅಂತ ಸುಳ್ಳು ಫೋಸ್ ಸಿದ್ದರಾಮಯ್ಯ ಕೊಡುತ್ತಾರೆ

 ಕೋಲಾರ : ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಯೋಜನೆಗಳ ಚಾಕೋಲೆಟ್ ಕೊಟ್ಟಿದೆ, ಆದರೆ ಬಿಜೆಪಿ ಮಹಿಳೆಯರ ಸ್ವಾವಲಂಬಿ ಜೀವನ ನಡೆಸಲು ಬದುಕನ್ನ ಕಟ್ಟಿಕೊಟ್ಟಿದೆ ಎಂದು ಬಿಜೆಪಿ ಎಂಎಲ್‌ಸಿ ಭಾರತಿ ಶೆಟ್ಟಿ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಮಹಿಳಾ ಪದಾಧಿಕಾರಿಗಳ ಸಭೆಗೆ ಆಗಮಿಸಿದ್ದ ವೇಳೆ ಮಾತನಾಡಿ ಕಾಂಗ್ರೇಸ್ ಪಕ್ಷದ ಬಳಿ ಏನು ಇಲ್ಲು ಸದ್ಯ ಸುಳ್ಳಿನ ಮೂಟೆಯಿದೆ ಅಸ್ಟೆ, ಸುಳ್ಳು ಹಾಗೂ ಸತ್ಯದ ನಡುವೆ ಈ ಚುನಾವಣೆ ನಡೆಯುತ್ತಿದೆ ಎಂದರು.ಮಹಿಳಾ ಸಬಲೀಕರಣಕ್ಕೆ ಒತ್ತು

ಕೋಲಾರದಲ್ಲಿ ಹೆಚ್ಚಿನ ಮಹಿಳಾ ಮತದಾರರು ಇದ್ದಾರೆ, ಐದು ಗ್ಯಾರಂಟಿ ಕೊಟ್ಟಿದ್ದೇವೆ ಅಂತ ಮಹಿಳಾ ಮತದಾರರನ್ನು ಕಾಂಗ್ರೆಸ್ ಸೆಳೆಯುತ್ತಿದೆ, ಆದರೆ ಮಹಿಳೆಯರಿಗಾಗಿ ಮೋದಿ ನೇತೃತ್ವದ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಹೆಚ್ಚಿನ ಒತ್ತು ನೀಡಿ ದೇಶದ ಇತಿಹಾಸದಲ್ಲೇ ಮಹಿಳೆಯರನ್ನು ಸಬಲೀಕರಣ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.ಎಸ್ಸಿ ಎಸ್ಟಿಯ 11 ಸಾವಿರ ಕೋಟಿ ಅನುದಾನವನ್ನು ಗ್ಯಾರೆಂಟಿ ಯೋಜನೆಗಳಿಗೆ ಈ ಕಾಂಗ್ರೇಸ್ ಸರ್ಕಾರ ತೆಗೆದುಕೊಂಡಿದ್ದಾರೆ, ಖರ್ಚಾಗದ ಮೊದಲೇ ಎಸ್ಸಿ ಎಸ್ಟಿ ಅನುದಾನವನ್ನು ಯಾವ ನೈತಿಕಥೆಯನ್ನು ಇಟ್ಟುಕೊಂಡು ತೆಗೆದಿದ್ದಾರೆ ಎಂದು ಪ್ರತಿಯೊಬ್ಬರು ಸರ್ಕಾರವನ್ನು ಪ್ರಶ್ನಿಸಬೇಕು, ಕಾಂಗ್ರೇಸ್ ಸರ್ಕಾರದ ೫ ಗ್ಯಾರೆಂಟಿಗಳನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ ಎಂದು ಸರ್ಕಾರದ ವಿರುದ್ದ ಹರಿಹಾಯ್ದರು. 

ಗ್ಯಾರಂಟಿಗಾಗಿ ತೆರಿಗೆ ಹೆಚ್ಚಳ

ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಬಳಿಕ ಬೆಲೆ ಏರಿಕೆ, ರಿಜಿಸ್ಟ್ರೇಷನ್ ಸುಂಕ ಹೆಚ್ಚು ಮಾಡಿದೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 4ಲಕ್ಷ ಮನೆಗಳನ್ನು ನಾವು ಕೊಟ್ಟಿದ್ದೇವೆ ಅಂತ ಸುಳ್ಳು ಫೋಸ್ ಸಿದ್ದರಾಮಯ್ಯ ಕೊಡುತ್ತಾರೆ ಪ್ರಧಾನ ಮಂತ್ರಿ ಅವಾಜ್ ಯೋಜನೆಯ ಮನೆಗೆ ಸಂಪೂರ್ಣ ಖರ್ಚನ್ನು ಕೇಂದ್ರ ಸರ್ಕಾರ ನೀಡುತ್ತಿದೆ ರಾಜ್ಯ ಸರ್ಕಾರದ ನಯಾ ಪೈಸೆ ಅನುದಾನ ಅದರಲ್ಲಿ ಇಲ್ಲ ಎಂದರು.ಬೊಮ್ಮಾಯಿ ಅವರು ಎಲ್ಲಾ ತಯಾರು ಮಾಡಿಟ್ಟಿದನ್ನು ಈಗ ನಾವೇ ಮಾಡಿದ್ದು ಅಂತ ಫೋಸ್ ಕೊಟ್ಟಿದ್ದಾರೆ, ಕಾಂಗ್ರೆಸ್ ಪಕ್ಷ ತುಷ್ಟಿಕರಣ ರಾಜಕಾರಣ ಮಾಡ್ತಿದೆ ಕಾಂಗ್ರೆಸ್ ಗೆ ಮತ ಹಾಕಲಿಲ್ಲ ಅಂದ್ರೆ ನಿಮಗೆ ೨ ಸಾವಿರ ಕೊಡೋದಿಲ್ಲ ಅಂತ ಫೋನ್ ಮೂಲಕ ಮಹಿಳೆಯರಿಗೆ ಬೆದರಿಕೆ ಹಾಕಲಾಗ್ತಿದೆ ರಾಜ್ಯ ಸರ್ಕಾರ ಹೆಚ್ಚಿಗೆ ಸಾಲ ಮಾಡಿ ನಮ್ಮ ಕರ್ನಾಟಕ ರಾಜ್ಯವನ್ನು ದಿವಾಳಿ ಮಾಡಿದ್ದಾರೆ ಎಂದು ಆರೋಪಿಸಿದರು.

₹1 ಲಕ್ಷ ಎಲ್ಲಿಂದ ತರ್ತಾರೆ?

ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ತಮ್ಮ ಪ್ರಣಾಳಿಕೆಯಲ್ಲಿ ಹೇಳುವ ಪ್ರಕಾರ ಮಹಿಳೆಯರಿಗೆ ವರ್ಷಕ್ಕೆ ೧ ಲಕ್ಷ ಹಣ ಎಲ್ಲಿಂದ ಕೊಡುತ್ತಾರೆ ಎಂದು ಪ್ರಶ್ನಿಸಿದರಲ್ಲದೆ ಕಾಂಗ್ರೇಸ್ ಪಕ್ಷ ಹೇಳಿದ್ದನ್ನೇ ಕೊಡುವ ಸ್ಥಿತಿಯಲ್ಲಿ ಇದನ್ನೇ ಮುಂದಿಟ್ಟು ಕೊಂಡು ಕೀಳು ಮಟ್ಟದ ರಾಜಕಾರಣಕ್ಕೆ ರಾಷ್ಟ್ರಿಯ ಪಕ್ಷ ಇಳಿಯುತ್ತಿದೆ ಎಂದರೆ ಅದನ್ನ ನಾವು ಕನಸ್ಸನಲ್ಲಿ ನೆನಪು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು. ಕಾಂಗ್ರೆಸ್ಸಿಗರು ಅಧಿಕಾರ ಪಡೆಯಲು ಸುಳ್ಳಿನ ಕಂತೆಯ ಮೂಟೆಯನ್ನು ಹೊತ್ತುಕೊಂಡು ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ, ಹಾಗಾಗಿ ರಾಜ್ಯ ಸರ್ಕಾರದ ೫ ಗ್ಯಾರೆಂಟಿಗಳಿಗೆ ಜನತೆ ಮರುಳಾಗದೇ ಕೋಲಾರ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯಾಗಿರುವ ಮಲ್ಲೇಶ್ ಬಾಬು ಅವರಿಗೆ ಕೋಲಾರ ಕ್ಷೇತ್ರದ ಪ್ರತಿಯೊಬ್ಬರ ತಾಯಂದಿರು ಆರ್ಶೀವದಿಸಬೇಕು ಎಂದು ಮನವಿ ಮಾಡಿದರು.