ಪಾಕಿಸ್ತಾನ್‌ ಪರ ಘೋಷಣೆ ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Feb 29 2024, 02:07 AM IST / Updated: Feb 29 2024, 08:20 AM IST

ಪಾಕಿಸ್ತಾನ್‌ ಪರ ಘೋಷಣೆ ಖಂಡಿಸಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ರೀತಿಯ ಪಿತೂರಿಗಳನ್ನು ಮಾಡುವ ಮೂಲಕ ಶಾಂತಿ ನೆಮ್ಮದಿ ಕದಡುತ್ತಿರುತ್ತಾರೆ. ದೇಶದಲ್ಲಿ ಡ್ರಗ್ಸ್‌ಗಳನ್ನು ಯಥೇಚ್ಚವಾಗಿ ಯುವಕರಿಗೆ ನೀಡುವ ಮೂಲಕ ನಶೆಯ ರಾಷ್ಟ್ರವಾಗಿಸಿ ಹಾಳು ಮಾಡುವ ಸಂಚು ರೂಪಿಸುತ್ತಿದ್ದಾರೆ. ಇಂತಹ ದೇಶದ್ರೋಹಿ ಚಟುವಟಿಕೆಗಳನ್ನು ಮಟ್ಟಹಾಕಬೇಕು

ಕನ್ನಡಪ್ರಭ ವಾರ್ತೆ ಕೋಲಾರ

ನಗರದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ವೃತ್ತದಲ್ಲಿ ಸಂಘಟಿತರಾಗಿ ಕಾಂಗ್ರೆಸ್‌ನ ನೂತನ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರ ಬೆಂಬಲಿಗರು ಮಂಗಳವಾರ ಬೆಂಗಳೂರಿನ ವಿಧಾನಸೌಧದಲ್ಲಿ ಆಚರಿಸಿದ ವಿಜಯೋತ್ಸವದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳು ಕೂಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ವಿಧಾನಸಭೆಯಿಂದ ರಾಜ್ಯಸಭೆಗೆ ೪ ಸ್ಥಾನಗಳ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ನಾಸೀರ್ ಹುಸೇನ್ ಅವರು ೪೭ ಮತಗಳನ್ನು ಪಡೆದು ಜಯಗಳಿಸಿದ್ದಾರೆ. 

ಈ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಫಲಿತಾಂಶಕ್ಕಾಗಿ ಜಮಾಯಿಸಿದ್ದ ನಾಸೀರ್ ಹುಸೇನ್ ಬೆಂಬಲಿಗರು ಜಯಘೋಘಣೆಯ ಸಂಭ್ರಮದಲ್ಲಿ ಪಾಕಿಸ್ತಾನ ಜಿಂದಾಬಾಂದ್ ಎಂದು ಘೋಷಣೆ ಕೂಗುವ ಮೂಲಕ ದೇಶಕ್ಕೆ ಅಪಮಾನ ಮಾಡಿದ್ದಾರೆಂದು ಆರೋಪಿಸಿದರು. ನಾಸೀರ್‌ ಹುಸೇನ್‌ ರಾಜೀನಾಮೆಗೆ ಆಗ್ರಹ

ಇದಕ್ಕೆ ಕಾರಣರಾದ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿ ಗಡಿಪಾರು ಮಾಡಬೇಕು, ರಾಜ್ಯಸಭೆಗೆ ನೊತನವಾಗಿ ಆಯ್ಕೆಯಾದ ನಾಸೀರ್ ಹುಸೇನ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ತಾನಿಗಳ ಪರ ಇರುವಂತ ದೇಶ ದ್ರೋಹಿಗಳ ಸಂಬಂಧ ಬೆಳೆಸಿರುವಂತ ನಾಸೀರ್ ಹುಸೇನ್ ಶಾಸಕಾಂಗದಲ್ಲಿ ಇರಲು ಅರ್ನಹರಾಗಿದ್ದಾರೆ. ಹಾಗಾಗಿ ಅವರು ಕೊಡಲೇ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಆಗ್ರಹಪಡಿಸಿದರು.

ಈಗಾಗಲೇ ಅಕ್ರಮವಾಗಿ ವಲಸೆ ಬಂದಿರುವಂತ ರಾಷ್ಟ್ರದ್ರೋಹಿಗಳನ್ನು ಪತ್ತೆ ಮಾಡಿ ಹೊರ ಅಟ್ಟದಿದ್ದಲ್ಲಿ ರಾಷ್ಟ್ರದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗುತ್ತದೆ. 

ಈ ರೀತಿಯ ಪಿತೂರಿಗಳನ್ನು ಮಾಡುವ ಮೂಲಕ ಶಾಂತಿ ನೆಮ್ಮದಿ ಕದಡುತ್ತಿರುತ್ತಾರೆ. ದೇಶದಲ್ಲಿ ಡ್ರಗ್ಸ್‌ಗಳನ್ನು ಯಥೇಚ್ಚವಾಗಿ ಯುವಕರಿಗೆ ನೀಡುವ ಮೂಲಕ ನಶೆಯ ರಾಷ್ಟ್ರವಾಗಿಸಿ ಹಾಳು ಮಾಡುವ ಸಂಚು ರೂಪಿಸುತ್ತಿದ್ದಾರೆ. 

ಇಂತಹ ದೇಶ ದ್ರೋಹಿ ಚಟುವಟಿಕೆಗಳನ್ನು ಕೊಡಲೇ ಪತ್ತೆ ಹಚ್ಚಿ ಗಡಿಪಾರು ಮಾಡದಿದ್ದರೆ ಮುಂದೆ ದೇಶಕ್ಕೆ ಭಾರಿ ಅನಾಹುತಗಳು ಸಂಭವಿಸುವಂತ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ ಎಂದು ಎಚ್ಚರಿಸಿದರು.

ಆರೋಪಿಗಳನ್ನು ಗಡಿಪಾರು ಮಾಡಿ: ಈಗಾಗಲೇ ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಕೆ.ಪಿ.ಸಿ.ಸಿ ಕಚೇರಿಗೆ ಮುತ್ತಿಗೆ ಹಾಕಿ ಅಕ್ರೋಶ ವ್ಯಕ್ತಪಡಿಸಿದ್ದಾರೆ, ಈ ಕುರಿತು ಇಂದು ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆಗಳು ಹಾಕಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. 

ಘೋಷಣೆ ಕೂಗಿರುವಂತ ರಾಷ್ಟ್ರ ದ್ರೋಹಿಯೆಂದು ಪರಿಗಣಿಸಿ ಅವರ ವಿರುದ್ದು ಪ್ರಕರಣ ದಾಖಲಿಸಿ ಗಡಿಪಾರು ಮಾಡಲೇಬೇಕೆಂದು ಆಗ್ರಹಪಡಿಸಿದರು.

ಪ್ರತಿಭಟನೆಕಾರರು ರಸ್ತೆಯಲ್ಲಿ ಧರಣಿ ಕುಳಿತು ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ, ಕಾಂಗ್ರೆಸ್ ಮುಖಂಡರ ಹಾಗೂ ನಾಸ್ಸೀರ್ ಹುಸೇನ್ ವಿರುದ್ಧ ದೇಶ ದ್ರೋಹಿಗಳೆಂದು ಘೋಷಣೆಗಳಿಗೆ ಕೂಗಿದ್ದಲ್ಲದೆ ಭಾವಚಿತ್ರಗಳಿಗೆ ಬೆಂಕಿ ಹಚ್ಚುವ ಮೂಲಕ ಅಕ್ರೋಶ ವ್ಯಾಕ್ತಪಡಿಸಿದರು. ಇದರಿಂದಾಗಿ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಯಿತು.

50 ಮಂದಿ ಬಂಧನ, ಬಿಡುಗಡೆ: ರಸ್ತೆತಡೆ ಕೈಬಿಡುವಂತೆ ಪೊಲೀಸರು ನೀಡಿದ ಸೂಚನೆ ಧಿಕ್ಕರಿಸಿ ರಸ್ತೆಯಲ್ಲಿ ಧರಣಿ ಕುಳಿತು ಸಂಚಾರಕ್ಕೆ ಭಂಗ ಉಂಟು ಮಾಡಿದ ಹಿನ್ನೆಲೆಯಲ್ಲಿ ೫೦ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ನಂತರ ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಕೆಯು.ಡಿ.ಎ. ಮಾಜಿ ಅಧ್ಯಕ್ಷ ವಿಜಯಕುಮಾರ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಜಿಲ್ಲಾ ಬಿಜೆಪಿ ಮಹಿಳಾ ಸಂಘಟನೆಯ ಮಮತಮ್ಮ, ಜಿಲ್ಲಾ ಕಾರ್ಯದರ್ಶಿ ರಾಜೇಶ್ ಸಿಂಗ್, ತಾಲ್ಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರ, ಶ್ರೀನಿವಾಸ್, ಸಾ.ಮಾ.ಬಾಬು, ಓಹೀಲೇಶ್, ಹಾರೋಹಳ್ಳಿ ವೆಂಕಟೇಶ್, ಮಂಜುನಾಥ್, ಅಪ್ಪಿನಾರಾಯಣಸ್ವಾಮಿ, ಶಿಳ್ಳೆಂಗೆರೆ ಮಹೇಶ್, ತಿಮ್ಮರಾಯಪ್ಪ, ಕೆಂಬೋಡಿ ನಾರಾಯಣಸ್ವಾಮಿ, ಆನಂದ್, ವಿಶ್ವನಾಥ್, ಇದ್ದರು.