ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ: ಬಿಜೆಪಿ ಅನೈತಿಕ ರಾಜಕಾರಣ ಮಾಡಿದೆ ಎಂದು ಕಾಂಗ್ರೆಸ್‌ ಆರೋಪ

| Published : Sep 15 2024, 01:54 AM IST / Updated: Sep 15 2024, 04:19 AM IST

ಸಾರಾಂಶ

ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಅನೈತಿಕ ರಾಜಕಾರಣ ಮಾಡಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಕಾಂಗ್ರೆಸ್‌ ಸದಸ್ಯರನ್ನು ಹಣ ಮತ್ತು ಬಲ ಪ್ರಯೋಗದ ಮೂಲಕ ಬೆದರಿಸಲಾಗಿದೆ ಎಂದು ಕೆ.ಎನ್‌.ಕೇಶವರೆಡ್ಡಿ ಹೇಳಿದ್ದಾರೆ.

  ಚಿಕ್ಕಬಳ್ಳಾಪುರ : ನಗರ ಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗರು ನಡೆದುಕೊಂಡ ರೀತಿ ಖಂಡನೀಯ. ಕಾಂಗ್ರೆಸ್‌ ಸದಸ್ಯರನ್ನು ಸದಸ್ಯರನ್ನು ಹಣ ಬಲದಿಂದ ಹೊರ ರಾಜ್ಯಗಳಿಗೆ ಪ್ರವಾಸ ಕರೆದುಕೊಂಡು ಹೋಗಿ ಬೌಸ್ಸರ್‌ಗಳಿಂದ ಬೆದರಿಸಿ ಚುನಾವಣೆಯಲ್ಲಿ ಮತ ಹಾಕಿಸಿಕೊಂಡಿದ್ದಾರೆ. ಈ ರೀತಿಯ ಬೆದರಿಕೆ ರಾಜಕಾರಣ ಸರಿ ಅಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಟೀಕಿಸಿದರು.

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿ, ಚುನಾವಣೆ ಪ್ರಕ್ರಿಯಲ್ಲಿ ಯಾವುದೇ ಪಕ್ಷದ ಅಧ್ಯಕ್ಷ ಮತ್ತು ಆ ಪಕ್ಷದ ತಿರ್ಮಾನದಂತೆ ತಾವು ಇಂತಹ ವ್ಯಕ್ತಿಗೆ ಮತ ವನ್ನು ಚಲಾವಣೆ ಮಾಡಬೇಕು ಎಂದು ಆ ಪಕ್ಷದ ಸದಸ್ಯರಿಗೆ ಹೇಳುವ ಅಧಿಕಾರ ಇದೆ. ಅವರ ಮನೆಗೆ ವಿಪ್ ಪತ್ರ ಅಂಟಿಸುವ ಪ್ರಕ್ರಿಯೆ ಸಾಮಾನ್ಯ. ಅವರು ಮೊದಲು ಸಂಸ್ಕೃತಿ ಮೊದಲು ಕಲಿಬೇಕು . ಎಂಲ್ಸಿಗಳಿಗೆ ಮತದಾನ ಹಕ್ಕಿದೆ

ಎಂಎಲ್‌ಸಿ ವೈ.ಎ.ನಾರಾಯಣ ಸ್ವಾಮಿ ಅವರು ಚಿತ್ರದುರ್ಗ, ದಾವಣೆಗೆರೆ, ತುಮಕೂರು,ಮತ್ತು ಚಿಕ್ಕಬಳ್ಳಾಪುರದಲ್ಲಿ ಮತ ಹಾಕಿದ್ದರು . ಅದೇರೀತಿ ಎಂಎಲ್ ಸಿ ಅನಿಲ್ ಕುಮಾರ್ ತಮ್ಮ ಕ್ಷೇತ್ರ ವ್ಯಾಪ್ತಿಯ ಚಿಕ್ಕಬಳ್ಳಾಪುರದಲ್ಲಿ ಮತ ಹಾಕಲು ಬಂದಿದ್ದರು. ಎಂಎಲ್‌ಸಿ ಸೀತಾರಾಮ್ ಅವರು ಮಗ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆಗ ಇಲ್ಲಿಯ ಮತದಾರರ ಪಟ್ಟಿಯಲ್ಲಿ ಅವರ ಹೆಸರಿತ್ತು ಅದಕ್ಕೆ ಅವರು ಮತ ಚಲಾಯಿಸಲು ಬಂದಿದ್ದರು ಎಂದರು.

ಚುನಾವಣಾ ವೇಳೆ ಸಂಸದರು ಪೊಲೀಸ್ ಅಧಿಕಾರಿಗಳನ್ನು ಏಕ ವಚನದಲ್ಲಿ ಮಾತಾನಾಡುತ್ತಾರೆ. ಕಾಂಗ್ರೆಸ್ ನವರು ಕಾನೂನು ಕೈಗೆ ತೆಗೆದು ಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಜಿಲ್ಲೆಯ ಅಭಿವೃದ್ದಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ, ಶಾಸಕರು, ಮಂತ್ರಿಗಳು ಸಹಕಾರ ನೀಡುತ್ತಾರೆ .2023ರ ವರೆಗೆ ಕ್ಷೇತ್ರದಲ್ಲಿ ಆಂಟ್ರಾಸಿಟಿ ಕೇಸ್ ಗಳು ಹಾಕಿಸುವುದು ಸಣ್ಣ ಪುಟ್ಟ ಗಲಾಟೆ ಅದರೂ ರೌಡಿ ಶೀಟರ್ ಗಳನ್ನು ಹಾಕಿಸುವ ಇತಿಹಾಸ ಅವರದಾಗಿತ್ತು. ಈಗ ಅಂತಹ ಯಾವುದೇ ರೀತಿಯ ತೊಂದರೆಯಿಲ್ಲದೇ ಜನತೆ ಅರಾಮವಾಗಿದ್ದಾರೆ ಎಂದು ಹೇಳಿದರು .ನಮ್ಮವರೇ ಬೆನ್ನಿಗೆ ಚೂರಿ ಹಾಕಿದರು

ನಗರ ಸಭೆ ಸದಸ್ಯ ನರಸಿಂಹ ಮೂರ್ತಿ ಮಾತಾನಾಡಿ, ಶಾಸಕರು ಮೊದಲೇ ಹೇಳಿದ್ದರು ನನ್ನ ಹತ್ರ ಯಾವುದೇ ಕಪ್ಪು ಹಣ ಇಲ್ಲ ಎಂದು. ಪಕ್ಷ ನಿಷ್ಟರಾಗಿರುತ್ತೇವೆ ಎಂದ ನಮ್ಮ ಸದಸ್ಯರು ನಮ್ಮಗೆ ಬೇನ್ನಿಗೆ ಚೂರಿ ಹಾಕಿದ್ದರು. ಇದರಲ್ಲಿ ಶಾಸಕರ ಹುನ್ನಾರ ಇಲ್ಲ ನಮ್ಮ ಮೇಲೆ ವಿಶ್ವಾಸ ಇಟ್ಟು ಪ್ರಯತ್ನ ಪೋತ್ಸಾಹ ಕೊಟ್ಟಿದ್ದಾರೆ. ಸಂಸದರು ನಮ್ಮ ಸದಸ್ಯರ ಕೈಗಳನ್ನು ಹಿಡಿದು ಕೊಂಡು ಕುಳಿತು ಕೊಂಡಿದ್ದರು. ಕಾಂಗ್ರೆಸ್ ಸದಸ್ಯರು ಬೆದರಿಸಿ ಅವರ ಕೈಯಿಂದ ಓಟು ಹಾಕಿಸಿದ್ದರೆ ಅವರಿಗೆ ಇಲ್ಲ ಸಲ್ಲದ ಆಸೆಗಳನ್ನು ತೋರಿಸಿದ್ದರೆ, ನಮಗೇ ಮತ ಬೀಳುತ್ತಿತ್ತು. ನಮ್ಮ ಶಾಸಕರು ಅಡ್ಡ ರಾಜಿಕೀಯ ಮಾಡುವುದಿಲ್ಲ ಎಂದರು.

ನಂದಿ ಆಂಜಿನಪ್ಪ ಮಾತಾನಾಡಿ, ಸಂಸದರು ರಾಜಕೀಯವಾಗಿ ಬೆಳೆಯಲು ಸಿದ್ದರಾಮಯ್ಯ ,ವೀರಪ್ಪ ಮೊಯ್ಲಿ, ಪರಮೇಶ್ವರ್,ಆರ್.ವಿ .ದೇಶ ಪಾಂಡೆ ಇವರು ಮೊದಲು ಕಾರಣಕರ್ತರು ಎಂದು ಗಂಟಾಘೋಷವಾಗಿ ಹೇಳುತ್ತೇನೆ .ಇದಕ್ಕೆ ಏನು ಉತ್ತರ ಕೊಡುತ್ತಾರೋ ಕೊಡಲಿ ಎಂದರು.

ಸುದ್ದಿಗೋಷ್ಟಿಯಲ್ಲಿ ನಗರ ಸಭೆ ಸದಸ್ಯರಾದ ಎಸ್.ಎಂ.ರಪೀಕ್, ಕಣಿತಹಳ್ಳಿ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಜಯರಾಂ, ಮುಖಂಡರಾದ ಮಿಲ್ಟನ್ ವೆಂಕಟೇಶ್.ಕೆ.ಎಂ.ಮುನೇಗೌಡ, ಮತ್ತಿತರು ಇದ್ದರು.