ಬ್ರಹ್ಮಗಂಟು ಧಾರಾವಾಹಿ ನಟಿ ಶೋಭಿತಾ ಆತ್ಮಹತ್ಯೆ - ಹೈದರಾಬಾದ್‌ನಲ್ಲಿ ಸಾವಿಗೆ ಶರಣು

| Published : Dec 02 2024, 10:31 AM IST

Shobitha shivanna

ಸಾರಾಂಶ

ಕನ್ನಡದ ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ಖಳನಟಿಯಾಗಿ ಖ್ಯಾತಿ ಗಳಿಸಿದ್ದ ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ನಟಿ ಶೋಭಿತಾ ಶಿವಣ್ಣ ಅವರು ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೈದರಾಬಾದ್‌: ಕನ್ನಡದ ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ಖಳನಟಿಯಾಗಿ ಖ್ಯಾತಿ ಗಳಿಸಿದ್ದ ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ನಟಿ ಶೋಭಿತಾ ಶಿವಣ್ಣ ಅವರು ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶೋಭಿತಾ ಶನಿವಾರವೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ವರದಿಗಳು ತಿಳಿಸಿವೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯಕ್ಕೆ ಶೋಭಿತಾ ಕುಟುಂಬಸ್ಥರು ಹೈದರಾಬಾದ್‌ಗೆ ತೆರಳಿದ್ದಾರೆ. ಮರಣೋತ್ತರ ಪರಿಕ್ಷೆ ಬಳಿಕ ಮೃತದೇಹವನ್ನು ಸಕಲೇಶಪುರಕ್ಕೆ ತರುವ ಸಾಧ್ಯತೆಯಿದೆ ಎನ್ನಲಾಗಿದೆ.

2023ರ ಮೇ ತಿಂಗಳಲ್ಲಿ ಶೋಭಿತಾ ಅವರಿಗೆ ಮದುವೆಯಾಗಿತ್ತು. ಆನಂತರ ಅವರು ತಮ್ಮ ಪತಿ ಜೊತೆಗೆ ಹೈದರಾಬಾದ್‌ನಲ್ಲಿ ವಾಸವಾಗಿದ್ದರು. ಮದುವೆಯ ಬಳಿಕ ಚಿತ್ರರಂಗದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರಲಿಲ್ಲ.

ಶೋಭಿತಾ ಕನ್ನಡದ ಎರಡೊಂದ್ಲ ಮೂರು, ಎಟಿಎಂ, ಒಂದು ಕಥೆ ಹೇಳು, ಜಾಕ್‌ಪಾಟ್, ಅಪಾರ್ಟ್‌ಮೆಂಟ್ ಟು ಮರ್ಡರ್, ಮತ್ತು ವಂದನಾ ಸಿನಿಮಾ ಹಾಗೂ ಮಂಗಳಗೌರಿ, ಕೋಗಿಲೆ, ಕೃಷ್ಣ ರುಕ್ಮಿಣಿ, ಬ್ರಹ್ಮಗಂಟು ಸೇರಿದಂತೆ ಒಟ್ಟು 12 ಧಾರಾವಾಹಿಗಳಲ್ಲಿ ನಟಿಸಿದ್ದಾರೆ.