ಸಾರಾಂಶ
ಬೆಂಗಳೂರು : ಬಿಜೆಪಿಯ ಎರಡು ಗುಂಪುಗಳ ನಡುವಣ ತಿಕ್ಕಾಟಕ್ಕೆ ಧರ್ಮಸ್ಥಳವನ್ನು ದುರುಪಯೋಗ ಮಾಡಿಕೊಂಡು ಬಲಿಪಶು ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪಾದಿಸಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳ ವಿಚಾರದಲ್ಲಿ ಸತ್ಯಾಂಶ ಒದಗಿಸಿರುವವರು ನಾವು. ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ಮಾಡುತ್ತಿರುವವರು ಬಿಜೆಪಿಯವರು. ಬುರುಡೆ ಗಿರಾಕಿ ಯಾರು? ಬಿಜೆಪಿ ಕಾರ್ಯಕರ್ತರಲ್ಲವೇ? ಧರ್ಮಸ್ಥಳಕ್ಕೆ ಅಪಮಾನ ಆಗಿದ್ದರೆ ಅದು ಬಿಜೆಪಿ ನಾಯಕರು ಹಾಗೂ ಅದರ ಸಂಘಟನೆಯವರಿಂದ ಮಾತ್ರ ಎಂದು ದೂರಿದರು.
ಧರ್ಮಸ್ಥಳದಲ್ಲಿ ಶವ ಹೂಳಲಾಗಿದೆ ಎಂಬ ಆರೋಪ ಸಂಬಂಧ ಎಸ್‌ಐಟಿ ತಂಡ ಉತ್ಖನನ ನಡೆಸುತ್ತಿರುವ ವೇಳೆ ಈ ಆರೋಪದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎಂದ ಡಿಕೆಶಿ ಹೇಳಿದ್ದರು. ಬಳಿಕ ಇದು ಬಿಜೆಪಿಯ ಎರಡು ಗುಂಪುಗಳ ಕಿತ್ತಾಟ ಎಂದೂ ಆರೋಪಿಸಿದ್ದರು.
ಡಿಕೆಶಿ ಹೇಳಿದ್ದೇನು?
- ಬಿಜೆಪಿಯ ಎರಡು ಗುಂಪುಗಳ ನಡುವಣ ತಿಕ್ಕಾಟಕ್ಕೆ ಧರ್ಮಸ್ಥಳ ಕ್ಷೇತ್ರದ ದುರುಪಯೋಗ
- ಶ್ರೀಕ್ಷೇತ್ರದ ವಿಚಾರದಲ್ಲಿ ಷಡ್ಯಂತ್ರ ಮಾಡುತ್ತಿರುವುದು, ಬಲಿಪಶು ಮಾಡುತ್ತಿರುವುದು ಬಿಜೆಪಿ
- ಬುರುಡೆ ಗಿರಾಕಿ ಯಾರು? ಬಿಜೆಪಿಯ ಕಾರ್ಯಕರ್ತರಲ್ಲವೇ? ಬಿಜೆಪಿಗರಿಂದಲೇ ಅಪಮಾನ
- ಧರ್ಮಸ್ಥಳ ವಿಚಾರದಲ್ಲಿ ಸತ್ಯಾಂಶ ಒದಗಿಸುತ್ತಿರುವವರು ನಾವು: ಉಪಮುಖ್ಯಮಂತ್ರಿ ಹೇಳಿಕೆ
)
)
;Resize=(128,128))
;Resize=(128,128))
;Resize=(128,128))
;Resize=(128,128))