ಸಾರಾಂಶ
-ಟಿಎಪಿಸಿಎಂಎಸ್ ಗೋದಾಮಿನಿಂದ 1600 ಕ್ವಿಂಟಾಲ್ ಅಕ್ಕಿ ಕಳವು
ಕನ್ನಡಪ್ರಭ ವಾರ್ತೆ ಚನ್ನಪಟ್ಟಣಅನ್ನಭಾಗ್ಯಕ್ಕೆಂದು ತಾಲೂಕಿಗೆ ವಿತರಿಸಲಾಗಿದ್ದ ಪಡಿತರ ಅಕ್ಕಿಯ ಪೈಕಿ ಸುಮಾರು 50 ಲಕ್ಷ ಮೌಲ್ಯದ 1600 ಕ್ವಿಂಟಲ್ ಅಕ್ಕಿ ಗೋದಾಮುನಿಂದಲೇ ಮಾಯವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಗೋದಾಮು ನಿರ್ವಹಣೆ ಮಾಡುತ್ತಿದ್ದ ನೌಕರರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಅನ್ನಭಾಗ್ಯ ಯೋಜನೆಗೆಂದು ಪ್ರತಿ ತಿಂಗಳು ಪೂರೈಸುವ ಪಡಿತರ ಅಕ್ಕಿಯನ್ನು ಸಾತನೂರು ರಸ್ತೆಯಲ್ಲಿನ ಟಿಎಪಿಸಿಎಂಎಸ್ ಗೋದಾಮಿನಲ್ಲಿ ಸಂಗ್ರಹಿಸಿ ಅಲ್ಲಿಂದ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲಾಗುತ್ತದೆ. ಡಿಸೆಂಬರ್ ಪಡಿತರ ಪೂರೈಕೆಗಾಗಿ ಬಂದಿದ್ದ ಅಕ್ಕಿಯಲ್ಲಿ ಸುಮಾರು 1600 ಕ್ವಿಂಟಲ್ ಅಕ್ಕಿಯನ್ನು ಗೋದಾಮಿನಿಂದ ಕಳವಾಗಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.ಏನಿದು ಪ್ರಕರಣ:
ಪ್ರತಿ ತಿಂಗಳು ತಾಲೂಕಿನ ಪಡಿತರ ಕುಟುಂಬಗಳಿಗೆ ಅಕ್ಕಿ ಪೂರೈಸಲು 2900 ಕ್ವಿಂಟಲ್ ಅಕ್ಕಿಯನ್ನು ಆಹಾರ ಇಲಾಖೆ ತಾಲೂಕಿಗೆ ಪೂರೈಸುತ್ತದೆ. ಅದು ಟಿಎಪಿಸಿಎಂಎಸ್ ಗೋದಾಮಿನಲ್ಲಿ ಸಂಗ್ರಹಿಸಿ ತಾಲೂಕಿನ 67 ನ್ಯಾಯಬೆಲೆ ಅಂಗಡಿಗಳಿಗೆ ಪೂರೈಸಲಾಗುತ್ತದೆ. ಗೋದಾಮಿನಲ್ಲಿ ಸಂಗ್ರಹವಾಗುವ ಅಕ್ಕಿಯ ಪೈಕಿ 50 ಲಕ್ಷ ಮೌಲ್ಯದ ಸುಮಾರು 1600 ಕ್ವಿಂಟಾಲ್ ಅಕ್ಕಿ ಗೋದಾಮಿನಿಂದ ಕಳುವಾಗಿರುವುದು ಗುರುವಾರ ನಡೆಸಿದ ಪರಿಶೀಲನೆ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ.ನೌಕರ ಬಂಧನ: ಟಿಎಪಿಸಿಎಂಎಸ್ ಗೋದಾಮಿನಲ್ಲಿ ಪಡಿತರ ಅಕ್ಕಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮಿನ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ವ್ಯವಸ್ಥಾಪಕ ಚಂದ್ರಶೇಖರ್ ಎಂಬುವವನನ್ನು ಆಹಾರ ಮತ್ತು ನಾಗರಿಕ ಇಲಾಖೆ ಅಧಿಕಾರಿಗಳ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.ಬಾಕ್ಸ್..............
1600 ಕ್ವಿಂಟಲ್ ಅಕ್ಕಿ ನಾಪತ್ತೆ: ರಮ್ಯಚನ್ನಪಟ್ಟಣ: ಟಿಎಪಿಸಿಎಂಎಸ್ ಗೋದಾಮಿನಲ್ಲಿ 1600 ಕ್ವಿಂಟಲ್ ಅಕ್ಕಿ ನಾಪತ್ತೆಯಾಗಿರುವ ವಿಚಾರವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ರಮ್ಯ ಸ್ಪಷ್ಟಪಡಿಸಿದ್ದಾರೆ.
ಟಿಎಪಿಸಿಎಂಎಸ್ ಗೋದಾಮಿನಲ್ಲಿ ಬುಧವಾರ ಸಂಜೆ ಅಕ್ಕಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ ತಿಂಗಳಿನಲ್ಲಿ ಹಂಚಿಕೆಯಾಗಬೇಕಿದ್ದ ಅಕ್ಕಿ ಪರಿಶೀಲನೆ ವೇಳೆ ಗೋದಾಮುನಿಂದ 1600 ಕ್ವಿಂಟಲ್‌ನಷ್ಟು ಅಕ್ಕಿ ದಾಸ್ತಾನು ನಾಪತ್ತೆಯಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದರು.ದೂರು ದಾಖಲು: ಗೋದಾಮುನಿಂದ ಅಪಾರ ಪ್ರಮಾಣದ ಅಕ್ಕಿ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಟಿಎಪಿಸಿಎಂಎಸ್ ಕಾರ್ಯದರ್ಶಿ ಮತ್ತು ಸಿಬ್ಬಂದಿ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಇಲಾಖಾ ಮಟ್ಟದಲ್ಲೂ ತನಿಖೆ ನಡೆಸಲಾಗುವುದು. ಚನ್ನಪಟ್ಟಣ ತಾಲೂಕು ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗೋದಾಮು ಅನುಮತಿ ರದ್ದು: ತಾಲೂಕಿನ ಪಡಿತರ ಧಾನ್ಯ ವಿತರಣೆಗೆ ಸಂಗ್ರಹಿಸುತ್ತಿದ್ದ ಗೋದಾಮನ್ನು ಸಂಪೂರ್ಣ ಟಿಎಪಿಸಿಎಂಎಸ್ ಸಂಸ್ಥೆಯೇ ನಿರ್ವಹಣೆ ಮಾಡುತಿತ್ತು. ಈ ಕಾರಣದಿಂದ ಇಲಾಖೆ ಗಮನಕ್ಕೆ ಇದು ಬಂದಿಲ್ಲ. ಗೋದಾಮಿನಲ್ಲಿ ದಾಸ್ತಾನು ಮಾಡುವುದನ್ನು ರದ್ದುಪಡಿಸಿ ಸರ್ಕಾರದ ಉಗ್ರಾಣ ನಿಮಗದಿಂದಲೇ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಪೊಟೋ೨೨ಸಿಪಿಟಿ೫:ಟಿಎಪಿಸಿಎಂ ಗೋದಾಮನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ರಮ್ಯ, ತಹಸೀಲ್ದಾರ್ ಮಹೇಂದ್ರ ಪರಿಶೀಲಿಸಿದರು.