ಪ್ರಚಾರಕ್ಕಿಳಿದ ಡಾ.ಸುಧಾಕರ್‌, ಜೆಡಿಎಸ್‌ ಮತಗಳ ಮೇಲೆ ಕಣ್ಣು

| Published : Mar 30 2024, 12:48 AM IST

ಸಾರಾಂಶ

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ದೊಡ್ಡಬಳ್ಳಾಪುರ ಮತ್ತು ಯಲಹಂಕ ವಿಧಾನ ಸಭೆ ಕ್ಷೇತ್ರಗಳು ಬಿಜೆಪಿ ಶಾಸಕರಿದ್ದರೂ ಸುಧಾಕರ್‌ಗೆ ಬೆಂಬಲಿಸುವ ಸಾಧ್ಯತೆ ಇಲ್ಲ. ಈ ಸಮಸ್ಯೆ ಸರಿಪಡಿಸುವ ಹೊಣೆ ಈದ ಪಕ್ಷದ ವರಿಷ್ಠರ ಮೇಲಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಕಮಲ-ದಳ ಮೈತ್ರಿ ಅಭ್ಯರ್ಥಿಯಾಗಿ ಡಾ.ಕೆ.ಸುಧಾಕರ್ ಕಣಕ್ಕಿಳಿಯುತ್ತಿದ್ದು, ಅಧಿಕೃತವಾಗಿ ಪ್ರಚಾರವನ್ನು ಆರಂಭಿಸಿದ್ದಾರೆ. ಟಿಕೆಟ್ ಘೋಷನೆ ಬೆನ್ನಲ್ಲೆ ಬಿಜೆಪಿಯಲ್ಲಿ ಕೆಲವರಿಗೆ ಉಂಟಾಗಿರುವ ಅಸಮಧಾನಿತ ಮುಖಂಡರ ಸಮಾಧಾನ ಪಡಿಸುವು ಕೆಲಸ ಪಕ್ಷದ ವರಿಷ್ಟರಿಗೆ ಬಿಟ್ಟು, ಮೈತ್ರಿ ಪಕ್ಷ ಜೆಡಿಎಸ್ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡು ಸಭೆಯ ಮೇಲೆ ಸಭೆ ನಡೆಸುತ್ತಿದ್ದಾರೆ.ಜೆಡಿಎಸ್‌ ಜತೆ ನಿರಂತರ ಸಂಪರ್ಕ

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ದೊಡ್ಡಬಳ್ಳಾಪುರ ಮತ್ತು ಯಲಹಂಕ ವಿಧಾನ ಸಭೆ ಕ್ಷೇತ್ರಗಳು ಬಿಜೆಪಿ ಶಾಸಕರಿದ್ದು ಉಳಿದ ತಾಲೂಕುಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ ಸುಧಾಕರ್‌ಗೆ ದೊಡ್ಡಬಳ್ಳಾಪುರ ಮತ್ತು ಯಲಹಂಕದಲ್ಲಿ ಮುಖಂಡರಿಂದ ನಿರೀಕ್ಷಿತ ಬೆಂಬಲ ಸಿಗುವುದಿಲ್ಲ ಎಂಬ ಆತಂಕದಿಂದ ಮೈತ್ರಿ ಪಕ್ಷ ಜೆಡಿಎಸ್ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ‌‌.ಇದಕ್ಕೆ ಪ್ರಮುಖ ಕಾರಣ ಬಿಜೆಪಿ ಮುಖಂಡರು, ಕಾರ್ಯಕರ್ತರು ಎಷ್ಟೇ ವಿರೋಧಿಸಿದರು ಮೋದಿಗಾಗಿ ಬಿಜೆಪಿಗೆ ಮತ ನೀಡದೆ ಬೇರೆ ದಾರಿಯಿಲ್ಲವಾಗಿದೆ‌. ಇದನ್ನರಿತಿರುವ ಸುಧಾಕರ್ ಬಿಜೆಪಿ ಮತಗಳು ಹೇಗೂ ಖಚಿತ. ಇವರು ವಿರೋಧ ಮಾಡ್ತಾನೇ ಇರಲಿ, ತಾವು ಜೆಡಿಎಸ್ ಮತಗಳ ಭೇಟೆಯಾಡಿದರೆ ಚುನಾವಣೆಯಲ್ಲಿ ಗೆಲುವು ಸುಲಭವಾಗಲಿದೆ ಎಂಬ ಪ್ಲಾನ್ ಸುಧಾಕರ್ ಅವರದ್ದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.ಎಚ್ಡಿಕೆ, ಮುಖಂಡರ ಜತೆ ಸಭೆ

ಇದಕ್ಕೆ ಇಂಬು ನೀಡುವಂತೆ ಗುರುವಾರ ಸಂಜೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜೆ.ಪಿ.ನಗರದ ನಿವಾಸದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮುಖಂಡರ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಡಾ.ಕೆ.ಸುಧಾಕರ್, ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶಂಪುರ್, ನಿಖಿಲ್ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಗೌರಿಬಿದನೂರು ನರಸಿಂಹಮೂರ್ತಿ, ಚಿಕ್ಕಬಳ್ಳಾಪುರ ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ, ಸೇರಿದಂತೆ ಹಿರಿಯ ನಾಯಕರು ಸಭೆಯಲ್ಲಿ ಇದ್ದರು.

ಕಾಂಗ್ರೆಸ್‌ ಕಿತ್ತಾಟದ ಲಾಭ

ಮತ್ತೊಂದೆಡೆ ಕಾಂಗ್ರೆಸ್ ಟಿಕೆಟ್ ಕಗ್ಗಂಟು ಸುಧಾಕರ್ ಗೆ ವರವಾಗಿದೆ. ರಕ್ಷಾ ರಾಮಯ್ಯ ಅಭ್ಯರ್ಥಿಯಾದರೆ ಸುಧಾಕರ್ ಗೆ ಪ್ರಬಲವಾದ ಪೈಪೋಟಿ ಎದುರಾಗಲಿದೆ. ಆದರೆ ವೀರಪ್ಪ ಮೊಯ್ಲಿ ಪರ ಕೆಲ ಹಿರಿಯ ಕಾಂಗ್ರೆಸ್ ಮುಖಂಡರು ವಕಾಲತ್ತು ವಹಿಸುತ್ತಿರುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಸುಧಾಕರ್ ಗೆ ಕೈಕೊಟ್ಡ ಅದೃಷ್ಟ ಲೋಕಸಭೆ ಚುನಾವಣೆಗೆ ಕೈಹಿಡಿಯುತ್ತ ಕಾದು ನೋಡಬೇಕಿದೆ.