ಚುನಾವಣೆ ಸಭೆಯಲ್ಲಿಕ್ಯಾಂಡಿ ಕ್ರಷ್ ಆಡಿದಸಿಎಂ ಬಘೇಲ್
KannadaprabhaNewsNetwork | Published : Oct 12 2023, 12:00 AM IST
ಚುನಾವಣೆ ಸಭೆಯಲ್ಲಿಕ್ಯಾಂಡಿ ಕ್ರಷ್ ಆಡಿದಸಿಎಂ ಬಘೇಲ್
ಸಾರಾಂಶ
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಆಯೋಜಿಸಲಾಗಿದ್ದ ಚುನಾವಣೆ ಸಭೆಯಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ‘ಕ್ಯಾಂಡಿ ಕ್ರಷ್’ ಆಟವಾಡಿದ್ದಾರೆ
ರಾಯ್‌ಪುರ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಆಯೋಜಿಸಲಾಗಿದ್ದ ಚುನಾವಣೆ ಸಭೆಯಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ‘ಕ್ಯಾಂಡಿ ಕ್ರಷ್’ ಆಟವಾಡಿದ್ದಾರೆ. ಈ ಕುರಿತ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ‘ಹೇಗಿದ್ದರೂ ರಾಜ್ಯದಲ್ಲಿ ಸೋಲು ಖಚಿತ. ಹೀಗಾಗಿ ಆಟಕ ಕಡೆಗಾನದರೂ ಗಮನ ಹರಿಸೋಣ ಎಂದು ಸಿಎಂ ಆಟವಾಡುತ್ತಿದ್ದಾರೆ’ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ. ಬಳಿಕ ಇದಕ್ಕೆ ಪ್ರತ್ಯುತ್ತರ ನೀಡಿರುವ ಬಘೇಲ್ ‘ಕ್ಯಾಂಡಿ ಕ್ರಷ್ ನನ್ನಿಷ್ಟದ ಆಟವಾಗಿದೆ. ಬಿಜೆಪಿಗೆ ಮಾತ್ರ ನಾನು, ನನ್ನ ಅಸ್ತಿತ್ವ ಮತ್ತು ಎಲ್ಲದರ ಬಗ್ಗೆಯೂ ಆಕ್ಷೇಪವಿದೆ. ರಾಜ್ಯದಲ್ಲಿ ಯಾರು ಇರಬೇಕು ಮತ್ತು ಯಾರು ಬೇಡ ಎಂಬುದನ್ನು ಜನರು ನಿರ್ಧರಿಸುತ್ತಾರೆ’ ಎಂದು ಟ್ವೀಟ್ ಮಾಡಿದ್ದಾರೆ. ಆಟದ ಎಷ್ಟನೇ ಹಂತದಲ್ಲಿದ್ದೀರಿ ಎಂಬ ನೆಟ್ಟಿಗರ ಪ್ರಶ್ನೆಗೆ ಉತ್ತರಿಸಿದ ಅವರು ‘ನಾನೀಗ ಆಟದ 4,400ನೇ ಹಂತದಲ್ಲಿದ್ದೇನೆ’ ಎಂದಿದ್ದಾರೆ.