ಕಮಿಷನ್‌ಗೆ ಎಚ್ಡಿಕೆ ಸಾಕ್ಷ್ಯ ಸಮೇತ ಆರೋಪ ಸಾಬೀತುಪಡಿಸಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲ್‌

| Published : Jan 06 2025, 01:03 AM IST / Updated: Jan 06 2025, 04:03 AM IST

ಸಾರಾಂಶ

ರಾಜ್ಯ ಸರ್ಕಾರದಲ್ಲಿ ಶೇ.60ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಕೇವಲ ಆರೋಪ ಮಾಡುವುದಲ್ಲ. ಸಾಕ್ಷ್ಯಾಧಾರ, ದಾಖಲೆ ಸಮೇತ ಆರೋಪ ಮಾಡಿ, ಅದನ್ನು ಸಾಬೀತುಪಡಿಸಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗವಾಗಿ ಸವಾಲು ಹಾಕಿದ್ದಾರೆ.

  ದಾವಣಗೆರೆ : ರಾಜ್ಯ ಸರ್ಕಾರದಲ್ಲಿ ಶೇ.60ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಕೇವಲ ಆರೋಪ ಮಾಡುವುದಲ್ಲ. ಸಾಕ್ಷ್ಯಾಧಾರ, ದಾಖಲೆ ಸಮೇತ ಆರೋಪ ಮಾಡಿ, ಅದನ್ನು ಸಾಬೀತುಪಡಿಸಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್‌ ಅವಧಿಯಲ್ಲಿ ಶೇ.60ರಷ್ಟು ಲಂಚ ಪಡೆಯಲಾಗುತ್ತಿದೆ ಎಂಬ ಎಚ್ಡಿಕೆ ಹೇಳಿಕೆಗೆ ಕಿಡಿಕಾರಿದ ಸಿಎಂ, ಸರ್ಕಾರದ ವಿರುದ್ಧ ಆಧಾರವೇ ಇಲ್ಲದೆ ಆರೋಪ ಮಾಡಬಾರದು. ಆರೋಪವನ್ನು ಮಾಡಿದರೆ ಅದನ್ನು ಸಾಬೀತು ಮಾಡಬೇಕು. ದಾಖಲಾತಿಗಳ ಸಮೇತ ಆರೋಪ ಮಾಡಲಿ, ಅದನ್ನು ಸಾಬೀತುಪಡಿಸಲಿ ಎಂದರು.

ಪೂರಕ ದಾಖಲೆ ಇಟ್ಟುಕೊಂಡು ಆರೋಪ ಮಾಡಬೇಕು. ವಿಪಕ್ಷಗಳು ತಾವು ಮಾಡಿದ ಆರೋಪ ಸಾಬೀತು ಮಾಡಬೇಕು ಎಂದು ಕಿವಿಮಾತು ಹೇಳಿದರು.