ಶಿಕ್ಷಕರ ಸಮಸ್ಯೆ ಪರಿಹರಿಸಲು ಚುನಾವಣೆಗೆ ಸ್ಪರ್ಧೆ : ಲೋಕೇಶ್ ತಾಳಿಕಟ್ಟೆ

| Published : May 15 2024, 01:43 AM IST / Updated: May 16 2024, 04:29 AM IST

ಸಾರಾಂಶ

ಎಂಎಲ್‌ಸಿಗಳ ಬೇಜಾವ್ದಾರಿಯಿಂದಾಗಿ ಅನುದಾನಿತ ಶಿಕ್ಷಕರು ೧೭ ವರ್ಷ ವೇತನವಿಲ್ಲದೇ ಕೆಲಸ ಮಾಡಿದಂತಾಗಿದೆ. ಶಾಲೆಗಳು ಅನುದಾನಕ್ಕೆ ಒಳಪಡುವಷ್ಟರೊಳಗೆ ಅವರಿಗೆ ವಯಸ್ಸಾಗಿದ್ದು, ಕೆಲವು ಶಿಕ್ಷಕರಿಗೆ ಪಿಂಚಣಿ ಪಡೆಯಲು ಒಂದೆರಡು ವರ್ಷ ಸರ್ವೀಸ್ ಸಿಕ್ಕಿಲ್ಲ.

 ಕೋಲಾರ :  ಶಿಕ್ಷಕರನ್ನು ನಂಬಿಸಿ ಅಧಿಕಾರ ಪಡೆದ ಹಾಲಿ ಎಂಎಲ್‌ಸಿಗಳ ವಿಷ ವರ್ತುಲದಿಂದಾಗಿಯೇ ಸರ್ಕಾರಿ ಶಾಲಾ ಶಿಕ್ಷಕರ ವೇತನ ತಾರತಮ್ಯದ ಸಮಸ್ಯೆ ಹಾಗೂ ಅನುದಾನಿತ ಶಾಲೆ ಶಿಕ್ಷಕರ ಕಾಲ್ಪನಿಕ ವೇತನ ಸಮಸ್ಯೆ ನಿವಾರಣೆ ಸಾಧ್ಯವಾಗಿಲ್ಲ ಆದ್ದರಿಂದ ರೂಪ್ಸಾ ಸಂಘಟನೆಯಡಿ ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ತಾವು ಸ್ಪರ್ಧಿಸುತ್ತಿರುವುದಾಗಿ ಎಂದು ವಿಧಾನ ಪರಿಷತ್‌ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಉದ್ದೇಶಿತ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಟೀಕಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ಕಾಲ್ಪನಿಕ ವೇತನ ನೀಡಲು ಸುಪ್ರಿಂಕೋರ್ಟ್ ಆದೇಶ ನೀಡಿದ್ದರೂ ಅದು ಕಾರ್ಯಗತವಾಗಲಿಲ್ಲ, ನ್ಯಾಯಾಂಗ ನಿಂದನೆ ಪ್ರಕರಣದಡಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ದ ಪ್ರಕರಣ ಬಂದಾಗ ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷರೆಂದು ಹೇಳಿಕೊಂಡು ತಮ್ಮದೇ ಲೆಟರ್‌ಹೆಡ್‌ನಲ್ಲಿ ಕಾಲ್ಪನಿಕ ವೇತನ ನಮಗೆ ಬೇಡ ಎಂದು ನ್ಯಾಯಲಯಕ್ಕೆ ಪತ್ರವನ್ನು ಹಾಲಿ ಎಂಎಲ್‌ಸಿಗಳು ನೀಡಿದ್ದರು ಎಂದು ಆರೋಪಿಸಿದರು. 

ಎಂಎಲ್‌ಸಿಗಳ ಬೇಜಾವ್ದಾರಿಯಿಂದಾಗಿ ಅನುದಾನಿತ ಶಿಕ್ಷಕರು 17 ವರ್ಷ ವೇತನವಿಲ್ಲದೇ ಕೆಲಸ ಮಾಡಿದಂತಾಗಿದೆ. ಶಾಲೆಗಳು ಅನುದಾನಕ್ಕೆ ಒಳಪಡುವಷ್ಟರೊಳಗೆ ಅವರಿಗೆ ವಯಸ್ಸಾಗಿದ್ದು, ಕೆಲವು ಶಿಕ್ಷಕರಿಗೆ ಪಿಂಚಣಿ ಪಡೆಯಲು ಒಂದೆರಡು ವರ್ಷ ಸರ್ವೀಸ್ ಸಿಕ್ಕಿಲ್ಲ. ಎಂಎಲ್‌ಸಿಗಳು ನೀಡಿದ ಒಂದು ಪತ್ರದಿಂದಾಗಿ 40 ಸಾವಿರ ಅನುದಾನಿತ ಶಾಲಾ ಶಿಕ್ಷಕರು ಕೋಟ್ಯಾಂತರ ರೂ ವೇತನದಿಂದ ವಂಚಿತರಾದರು ಎಂದರು.ಖಾಸಗಿ ಶಾಲಾ ಶಿಕ್ಷಕರಿಗೂ ವಂಚನೆ

ಪಕ್ಕದ ಆಂಧ್ರ, ತಮಿಳುನಾಡು, ಕೇರಳದಲ್ಲಿ ಅನುದಾನರಹಿತ ಶಾಲಾ ಶಿಕ್ಷಕರಿಗೆ ಆರ್ಟಿಕಲ್ಬಿ32  ಅಡಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಸುಮಾರು4 ಲಕ್ಷದಷ್ಟಿರುವ ಶಿಕ್ಷಕರನ್ನು ಜೀತದಾಳುಗಳತೆ ದುಡಿಸಿಕೊಡಲಾಗುತ್ತಿದೆ, ಇವರಿಗೆ ನ್ಯಾಯ ಒದಗಿಸುವ ಆಲೋಚನೆಯೇ ಎಂಎಲ್‌ಸಿಗಳಿಗೆ ಬರಲಿಲ್ಲ ಎಂದ ಅವರು, ಈ ಶಿಕ್ಷಕರನ್ನು ಜೀತಮುಕ್ತಗೊಳಿಸುವ ಉದ್ದೇಶದಿಂದಲೇ ರೂಪ್ಸಾ ಖಾಸಗಿ ಶಾಲೆಗಳ ಸಂಘಟನೆ ತಲೆಯೆತ್ತಿದೆ ಎಂದರು.ರೂಪ್ಸಾ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎಸ್.ಮುನಿಯಪ್ಪ, ಜಿಲ್ಲಾ ಪದಾಧಿಕಾರಿ ನೂರ್‌ಜಹಾನ್, ಮಾಲೂರು ಪ್ರತಿನಿಧಿ ರವಿಕುಮಾರ್‌ ಅ‍ರು ಲೋಕೇಶ್ ತಾಳಿಕಟ್ಟೆ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.

ರೂಪ್ಸಾ ಸಂಘಟನೆಯ ಪ್ರಭಾಕರ್, ಬಂಗಾರಪೇಟೆ ಸರಸ್ವತಿ, ಮಾಲೂರು ತಾಲ್ಲೂಕು ಅಧ್ಯಕ್ಷ ಅಜಿತ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.