ಪಶ್ಚಿಮ ಬಂಗಾಳದಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಕಾಂಗ್ರೆಸ್ ಸೋಮವಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಕಾಂಗ್ರೆಸ್ ಸೋಮವಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಅಲ್ಲದೆ ಕೋಲ್ಕತ್ತಾದ ಪಕ್ಷದ ಕಚೇರಿಯ ಹೊರಗೆ ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪೋಸ್ಟರ್‌ಗಳಿಗೆ ಮಸಿ ಬಳಿದ ಕೃತ್ಯದ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಘಟಕಕ್ಕೆ ತಿಳಿಸಿದೆ.

ಭಾನುವಾರ ಪಕ್ಷದ ಕಚೇರಿ ಬಳಲಿಯಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಫೋಟೊಗೆ ಇಲ್ಲಿನ ಕಿಡಿಗೇಡಿಗಳು ಮಸಿ ಬಳಿದು,ದ್ವಂಸಗೊಳಿಸಿದ್ದರು. ಇದಕ್ಕೆ ಪಕ್ಷ ಸಿಟ್ಟಿಗೆದ್ದಿದ್ದು, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರಿಗೆ ಕಡಕ್‌ ಎಚ್ಚರಿಕೆ ನೀಡಿದೆ.

ಇತ್ತೀಚೆಗೆ ಬಂಗಾಳದ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಅವರು ಇಂಡಿಯಾ ಕೂಡಕ್ಕೆ ಬಾಹ್ಯವಾಗಿ ಬೆಂಬಲ ನೀಡುವುದಾಗಿ ಹೇಳಿಕೆ ನಿಡಿದ್ದರು. ಇದನ್ನು ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಅವರು ವಿರೋಧಿಸಿ. ಇದಕ್ಕೆ ಪ್ರತಿಯಾಗಿ ಖರ್ಗೆ ಅಧಿರ್‌ ವಿರುದ್ಧ ಕಿಡಿ ಕಾರಿದ್ದರು. ಹೀಗಾಗಿ ಖರ್ಗೆ ಪೋಸ್ಟರ್‌ಗೆ ಮಸಿ ಹಚ್ಚಲಾಗಿತ್ತು.