ಹಿಮಾಚಲ ಬಿಕ್ಕಟ್ಟು ಪರಿಹಾರ ಹೊಣೆ ಡಿಕೆಶಿಗೆ?

| Published : Feb 28 2024, 02:32 AM IST / Updated: Feb 28 2024, 11:41 AM IST

ಸಾರಾಂಶ

ಹಿಮಾಚಲಪ್ರದೇಶ ಕಾಂಗ್ರೆಸ್‌ನ 6 ಶಾಸಕರು ಹಾಗೂ 3 ಪಕ್ಷೇತರ ಸಹ ಶಾಸಕರು ಅಡ್ಡಮತದಾನ ಮಾಡಿರುವ ಕಾರಣ ಹಿಮಾಚಲ ಕಾಂಗ್ರೆಸ್‌ ಸರ್ಕಾರ ಪತನದ ಭೀತಿಯಲ್ಲಿದೆ.

ನವದೆಹಲಿ: ಹಿಮಾಚಲಪ್ರದೇಶ ಕಾಂಗ್ರೆಸ್‌ನ 6 ಶಾಸಕರು ಹಾಗೂ 3 ಪಕ್ಷೇತರ ಸಹ ಶಾಸಕರು ಅಡ್ಡಮತದಾನ ಮಾಡಿರುವ ಕಾರಣ ಹಿಮಾಚಲ ಕಾಂಗ್ರೆಸ್‌ ಸರ್ಕಾರ ಪತನದ ಭೀತಿಯಲ್ಲಿದೆ. 

ಹೀಗಾಗಿ ಪರಿಸ್ಥಿತಿ ನಿಭಾಯಿಸಿ ಬಿಕ್ಕಟ್ಟು ಬಗೆಹರಿಸುವ ಹೊಣೆಯನ್ನು ಕಾಂಗ್ರೆಸ್‌ ಹೈಕಮಾಂಡ್, ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್‌ ಹೂಡಾ ಅವರಿಗೆ ವಹಿಸಿದೆ ಎಂದು ಮೂಲಗಳು ಹೇಳಿವೆ.