ಮಾಲೂರಿನಲ್ಲಿ ಕಾಂಗ್ರೆಸ್‌ ಬಲಿಷ್ಟ: ಶಾಸಕ

| Published : Apr 20 2024, 01:05 AM IST / Updated: Apr 20 2024, 05:33 AM IST

ಸಾರಾಂಶ

ಕಾಂಗ್ರೆಸ್‌ ದೇಶದ ಅಭಿವೃದ್ಧಿಗೆ ಹಲವು ರೀತಿಯ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ದೇಶವನ್ನು 60 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಆಳಿದ್ದು ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ನುಡಿದಂತೆ ೫ ಗ್ಯಾರಂಟಿಗಳನ್ನು ನೀಡಿದೆ.

 ಟೇಕಲ್ :  ಜೆಡಿಎಸ್, ಬಿಜೆಪಿ ಅಪವಿತ್ರ ಮೈತ್ರಿಯಿಂದ ಇಂದು ಮಾಲೂರು ತಾಲೂಕಿನಲ್ಲಿ ಹಲವಾರು ಪ್ರಭಾವಿ ಮುಖಂಡರು, ಗ್ರಾ.ಪಂ.ಸದಸ್ಯರು, ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು ತಾಲೂಕಿನಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಸ್ವಾಭಿಮಾನಿ ಪಕ್ಷಗಳು ಒಂದಾದರೂ ಇಂದು ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಿಷ್ಟವಾಗುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡರು ತಿಳಿಸಿದರು.

ಅವರು ಟೇಕಲ್‌ನ ಕೊಂಡಶೆಟ್ಟಹಳ್ಳಿ ಗ್ರಾಮದಲ್ಲಿ ಜೆಡಿಎಸ್, ಬಿಜೆಪಿ ತೊರೆದು ಗ್ರಾ.ಪಂ.ಸದಸ್ಯೆ ಕುಬ್ರಾ ನವಾಜ್‌ ಪಾಷ (ಗೋರು) ಹಾಗೂ ಅನೇಕ ಅವರ ಬೆಂಬಲಿಗರನ್ನು ಕಾಂಗ್ರೆಸ್ ಶಾಲು ಹೊದಿಸಿ ಭಾವುಟ ನೀಡಿ ಸ್ವಾಗತಿಸಿದರು. 

ಕಾಂಗ್ರೆಸ್‌ಗೆ ಇತಿಹಾಸವಿದೆಇಂದು ತಾಲೂಕಿನಲ್ಲಿ ಬಹುತೇಕ ಜೆಡಿಎಸ್, ಬಿಜೆಪಿ ಒಟ್ಟು ಕಾಂಗ್ರೆಸ್ ಮನೆ ಬರುತ್ತಿದ್ದು ಇದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸವಿದೆ ಸಂವಿಧಾನದ ಆಶಯದಡಿ ಕೇಂದ್ರದಲ್ಲಿ ಆಡಳಿತವನ್ನು ನಡೆಸಿದ್ದು ಬಡವರು ಧೀನ ದಲಿತರು, ಹಿಂದುಳಿದ ವರ್ಗಗಳು, ರೈತರು, ಮಹಿಳೆಯರು, ಕಾರ್ಮಿಕರು ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅಲ್ಲದೆ ದೇಶದ ಅಭಿವೃದ್ಧಿಗೆ ಹಲವು ರೀತಿಯ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ದೇಶವನ್ನು ೬೦ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಆಳಿದ್ದು ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ನುಡಿದಂತೆ ೫ ಗ್ಯಾರಂಟಿಗಳನ್ನು ನೀಡಿದ್ದು ಇಂದು ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ನ ಅಲೆ ಇದೆ ಎಂದರು.ಈ ಸಂದರ್ಭದಲ್ಲಿ ಜೆಡಿಎಸ್ ಬಿಜೆಪಿ ತೊರೆದು ಗ್ರಾ.ಪಂ.ಸದಸ್ಯೆ ಕುಬ್ರಾ ನವಾಜ್ ಪಾಷ (ಗೋರು) ನೇತೃತ್ವದಲ್ಲಿ ಇನಾಯತ್, ಚಾಂದ್‌ಬಾಯಿ, ನಸೀರ್, ಚಾನ್, ಶಬ್ದೀರ್, ರೋಷನ್, ಆಸಿಫ್ ಸೇರಿದಂತೆ ಇನ್ನೂ ಅನೇಕ ಮಂದಿ ಸೇರ್ಪಡೆಯಾದರು.

ಈ ವೇಳೆ ಕೃಷಿಕ ಸಮಾಜದ ಅಧ್ಯಕ್ಷ ಹೆಚ್. ಹನುಮಂತಪ್ಪ, ಹೆಚ್.ವಿ. ಚಂದ್ರಶೇಖರಗೌಡ, ಕೊಂಡಶೆಟ್ಟಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಅರ್ಚನಾ ಶ್ರೀನಿವಾಸ್, ಉಪಾಧ್ಯಕ್ಷರಾದ ಚಂದ್ರಶೇಖರ್, ಅಗರ ಪ್ರಕಾಶ್, ಪ್ರಗತಿ ಶ್ರೀನಿವಾಸ್, ವೆಂಕಟೇಶಗೌಡ, ಸತೀಶ್‌ಬಾಬು, ಗ್ರಾ.ಪಂ. ಮಾಜಿ ಅಧ್ಯಕ್ಷ ಸಾದತ್‌ ಉಲ್ಲಾಖಾನ್, ಮೂರ್ತಿ ಇನ್ನೂ ಅನೇಕ ಮಂದಿ ಮುಖಂಡರು ಉಪಸ್ಥಿತರಿದ್ದರು.