ಕಾಂಗ್ರೆಸ್‌ಗೆ ಚುನಾವಣೆ ಮುನ್ನ ಮತ್ತೊಂದು ಶಾಕ್ : ವಕ್ತಾರ ಬಿಜೆಪಿಗೆ

| Published : Apr 05 2024, 01:05 AM IST / Updated: Apr 05 2024, 04:49 AM IST

ಕಾಂಗ್ರೆಸ್‌ಗೆ ಚುನಾವಣೆ ಮುನ್ನ ಮತ್ತೊಂದು ಶಾಕ್ : ವಕ್ತಾರ ಬಿಜೆಪಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆಗೂ ಮುನ್ನ ಮತ್ತೊಂದು ಶಾಕ್ ಆಗಿದೆ. ಪಕ್ಷದ ಪ್ರಮುಖ ವಕ್ತಾರರಲ್ಲಿ ಒಬ್ಬರಾಗಿ ಕಾಂಗ್ರೆಸ್‌ ನಿಲುವುಗಳನ್ನು ಪತ್ರಕರ್ತರ ಮುಂದೆ ಪ್ರತಿಪಾದಿಸುತ್ತಿದ್ದ ಗೌರವ ವಲ್ಲಭ್‌ ಅವರು ಗುರುವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

ನವದೆಹಲಿ: ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆಗೂ ಮುನ್ನ ಮತ್ತೊಂದು ಶಾಕ್ ಆಗಿದೆ. ಪಕ್ಷದ ಪ್ರಮುಖ ವಕ್ತಾರರಲ್ಲಿ ಒಬ್ಬರಾಗಿ ಕಾಂಗ್ರೆಸ್‌ ನಿಲುವುಗಳನ್ನು ಪತ್ರಕರ್ತರ ಮುಂದೆ ಪ್ರತಿಪಾದಿಸುತ್ತಿದ್ದ ಗೌರವ ವಲ್ಲಭ್‌ ಅವರು ಗುರುವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

ಬೆಳಗ್ಗೆ ರಾಜೀನಾಮೆ ಘೋಷಿಸಿದ್ದ ಅವರು, ಮಧ್ಯಾಹ್ನ ಬಿಜೆಪಿ ಕಚೇರಿಗೆ ಬಂದು ಕೇಸರಿ ಪಕ್ಷ ಸೇರಿದರು. ಇದೇ ವೇಳೆ ಬಿಹಾರ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಅನಿಲ್‌ ಶರ್ಮಾ, ಆರ್‌ಜೆಡಿ ನಾಯಕ ಉಪೇಂದ್ರ ಪ್ರಸಾದ್‌ ಕೂಡ ಬಿಜೆಪಿ ಸೇರಿದರು.ತಮ್ಮ ಬಿಜೆಪಿ ಸೇರ್ಪಡೆಗೆ ಕಾರಣ ನೋಡಿರುವ ವಲ್ಲಭ್, ‘ಇಂದು ಕಾಂಗ್ರೆಸ್ ಪಕ್ಷ ಮುನ್ನಡೆಯುತ್ತಿರುವ ಹಾದಿ ಸರಿಯಿಲ್ಲ. ದಿಕ್ಕು ತಪ್ಪುತ್ತಿದೆ. ಹೀಗಾಗಿ ಅಲ್ಲಿರಲು ನನಗೆ ನೆಮ್ಮದಿಯಾಗುತ್ತಿಲ್ಲ. 

ನಾನು ಸನಾತನ ಧರ್ಮದ ವಿರುದ್ಧ ಘೋಷಣೆಗಳನ್ನು ಕೂಗಲಾರೆ ಅಥವಾ ದೇಶದ ಸಂಪತ್ತಿನ ಸೃಷ್ಟಿಕರ್ತರನ್ನು (ಹಿಂದೂ ಧರ್ಮದ ನಾಯಕರನ್ನು) ಬೆಳಗ್ಗೆ ಮತ್ತು ಸಂಜೆ ನಿಂದಿಸಲಾರೆ. ಅದಕ್ಕಾಗಿಯೇ ನಾನು ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳಿಗೆ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದರು.ಅಲ್ಲದೆ, ‘ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಗುರಿಯತ್ತ ಆಕರ್ಷಿತನಾಗಿ ಬಿಜೆಪಿ ಸೇರುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.ಈ ಹಿಂದೆ ಕಾಂಗ್ರಸ್‌ನಿಂದ ಅಶೋಕ್ ತನ್ವರ್, ಜಿಮ್ಮಿ ಶೇರ್‌ಗಿಲ್‌, ಕಿರಣ್ ಕುಮಾರ್ ರೆಡ್ಡಿ, ಪ್ರಣೀತ್ ಕೌರ್, ನವೀನ್ ಜಿಂದಾಲ್, ಜಿತಿನ್ ಪ್ರಸಾದ, ಅನಿಲ್ ಕೆ ಆಂಟನಿ, ರಂಜಿತ್ ಸಿಂಗ್‌ ಟಾಲಾ, ವಿಜೇಂದರ್ ಸಿಂಗ್ ಬಿಜೆಪಿ ಸೇರಿದ್ದರು. ಈಗ ಮತ್ತೊಬ್ಬರ ಸೇರ್ಪಡೆ ಆಗಿದೆ.