ಸಾರಾಂಶ
ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಗಳಿಸಿದ್ದು ಈ ವಿಜಯೋತ್ಸವದ ಪಾಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲ್ಲುತ್ತದೆ ಎಂದು ಆಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಚಿಂತಾಮಣಿ : ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಗಳಿಸಿದ್ದು ಈ ವಿಜಯೋತ್ಸವದ ಪಾಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲ್ಲುತ್ತದೆ ಎಂದು ಆಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರಸಭಾ ಸದಸ್ಯ ಜೈ ಭೀಮ್ ಮುರಳಿ ಮನೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೈಗೊಂಡ ಯೋಜನೆಗಳು ಬಡಬಗ್ಗರ ಕೈ ಹಿಡಿದ ಪರಿಣಾಮ ಉಪ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತೆಂದು ಹೇಳಿದರು.
ಆರೋಪಗಳಿಗೆ ಕೊಟ್ಟ ಉತ್ತರ
ಉಪಚುನಾವಣೆ ವೇಳೆ ಇಲ್ಲಸಲ್ಲದ ಹಲವು ಆರೋಪಗಳನ್ನು ವಿರೋಧ ಪಕ್ಷದವರು ಕಾಂಗ್ರೇಸ್ ಪಕ್ಷದ ಮೇಲೆ ಆರೋಪಿಸಿದರೂ ಸಹ ರಾಜ್ಯದ ಜನತೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿರುವುದು ವಿರೋಧಿಗಳ ಸುಳ್ಳು ಆರೋಪಗಳಿಗೆ ಜನತೆ ಕೊಟ್ಟ ತಿರುಗೇಟು ಆ ಫಲಿತಾಂಶ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಇಲ್ಲದಿದ್ದರೂ ಕೂಡ ಜೆಡಿಎಸ್, ಬಿಜೆಪಿ ಸಿಎಂ ರಾಜೀನಾಮೇಗೆ ಒತ್ತಾಯಿಸುತ್ತಿದ್ದಾರೆ ಎಂದರು.
ರಾಜ್ಯದ ಜನ ಕಾಂಗ್ರೇಸ್ ಸರ್ಕಾರದ ಪರ ಇದ್ದಾರೆಂದು ಈ ಉಪ ಚನಾವಣೆಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ವಿರೋದ ಪಕ್ಷಗಳು ಇನ್ನು ಮುಂದಾದರೂ ಕ್ರಿಯಾಶೀಲರಾಗಿ ಕೆಲಸ ಮಾಡಿ ಸರ್ಕಾರದ ತಪ್ಪು ಒಪ್ಪುಗಳನ್ನು ಎತ್ತಿ ತೋರಿಸಲಿ. ಅದು ಬಿಟ್ಟು ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ರಾಜಕಾರಣದ ಗುಣಮಟ್ಟವನ್ನು ಕಡಿಮೆ ಮಾಡುವ ಕೆಲಸವನ್ನು ನಿಲ್ಲಿಸಲಿ ಎಂದರು.
ಈ ಸಂದರ್ಭದಲ್ಲಿ ಜೆ.ವಿ.ನಾರಾಯಣಸ್ವಾಮಿ, ಮುದ್ದುಕೃಷ್ಣಯಾದವ್, ಡಾ.ಶ್ರೀನಿವಾಸ್, ಅತಾವುಲ್ಲಾ, ಖಾದರ್ ಪಾಷ, ಗ್ಯಾಸ್ ಶ್ರೀನಿವಾಸ್, ಪೋಟೊ ನಾರಾಯಣಪ್ಪ, ಜೈಬೀಮ್ ಮುರಳಿ ಇದ್ದರು.