ಸಾರಾಂಶ
‘ಬರೆದಿಟ್ಟುಕೊಳ್ಳಿ, ಈ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗುವುದಿಲ್ಲ’ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಬರೆದಿಟ್ಟುಕೊಳ್ಳಿ, ಈ ಬಾರಿ ಎನ್‌ಡಿಎ ಹಿಂದಿನ ಎಲ್ಲಾ ದಾಖಲೆ ಮುರಿದು 400 ಸೀಟಿಗಿಂತ ಹೆಚ್ಚು ಗೆಲ್ಲಲಿದೆ ಎಂದು ಹೇಳಿದ್ದಾರೆ.
ಫೂಲ್‌ಬನಿ/ಬಾಲಂಗಿರ್ (ಒಡಿಶಾ) : ‘ಬರೆದಿಟ್ಟುಕೊಳ್ಳಿ, ಈ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗುವುದಿಲ್ಲ’ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಬರೆದಿಟ್ಟುಕೊಳ್ಳಿ, ಈ ಬಾರಿ ಎನ್‌ಡಿಎ ಹಿಂದಿನ ಎಲ್ಲಾ ದಾಖಲೆ ಮುರಿದು 400 ಸೀಟಿಗಿಂತ ಹೆಚ್ಚು ಗೆಲ್ಲಲಿದೆ. ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಅಧಿಕೃತ ವಿಪಕ್ಷವಾಗಲು ಅಗತ್ಯವಿರುವ 50 ಸೀಟುಗಳನ್ನು ಕೂಡ ಗೆಲ್ಲುವುದಿಲ್ಲ. 53ರ ಹರೆಯದ ರಾಹುಲ್ ಗಾಂಧಿ ವಯಸ್ಸಿನಷ್ಟೂ ಸ್ಥಾನ ಬರಲ್ಲ’ ಎಂದು ಹೇಳಿದ್ದಾರೆ.
ಒಡಿಶಾದಲ್ಲಿ ಶನಿವಾರ ಪ್ರಚಾರ ಸಮಾವೇಶಗಳಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷ ಈ ಬಾರಿ ಶೇ.10ರಷ್ಟು ಸೀಟು ಕೂಡ ಗೆಲ್ಲುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಅದಕ್ಕೆ 50 ಸೀಟು ಕೂಡ ಸಿಗುವುದಿಲ್ಲ. ಹೀಗಾಗಿ ಅಧಿಕೃತ ಪ್ರತಿಪಕ್ಷದ ಸ್ಥಾನವಾಗುವ ಯೋಗ್ಯತೆಯನ್ನೂ ಪಡೆಯುವುದಿಲ್ಲ. ಕಾಂಗ್ರೆಸ್‌ನ ಶೆಹಜಾದ 2014ರ ಚುನಾವಣೆಯಿಂದಲೂ ಒಂದೇ ಭಾಷಣ ಓದುತ್ತಿದ್ದಾರೆ. ಆದರೆ, ಬರೆದಿಟ್ಟುಕೊಳ್ಳಿ... ಈ ಬಾರಿ ಎನ್‌ಡಿಎ ಹಿಂದಿನ ಎಲ್ಲಾ ದಾಖಲೆ ಮುರಿದು 400 ಸೀಟು ಗೆಲ್ಲಲಿದೆ’ ಎಂದು ಹೇಳಿದರು.
ಅಲ್ಲದೆ, ವಿಪಕ್ಷ ನಾಯಕ ಸ್ಥಾನ ಸಿಗದು ಎಂಬ ಖಚಿತತೆ ಕಾರಣ ಕಾಂಗ್ರೆಸ್ ಪಕ್ಷ ಸಣ್ಣಪುಟ್ಟ ಪಕ್ಷಗಳನ್ನು ತನ್ನಲ್ಲಿ ವಿಲೀನ ಮಾಡಿಕೊಂಡು ಬಲ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ. ಈ ಮೂಲಕ ಲೋಕಸಭೆ ಪ್ರತಿಪಕ್ಷ ಪಟ್ಟವನ್ನಾದರೂ ಸಂಪಾದಿಸೋಣ ಎಂದು ಯತ್ನಿಸುತ್ತಿದೆ ಎಂದರು.