ನಾಗಮಂಗಲದಲ್ಲಿ ನಡೆದ ಹಿಂಸಾಚಾರದ ಘಟನೆ : ಮುಸ್ಲಿಮರ ವಿರುದ್ಧ ಸಿ.ಟಿ.ರವಿ ಆಕ್ರೋಶ

| Published : Sep 15 2024, 01:59 AM IST / Updated: Sep 15 2024, 04:17 AM IST

ct ravi

ಸಾರಾಂಶ

ನಾಗಮಂಗಲದಲ್ಲಿ ಕಲ್ಲು ತಲ್ವಾರ್‌ ಝಳಪಿಸಿದ್ದು, ಕಲ್ಲು ತೂರಿದ್ದು ಮುಸ್ಲಿಮರೇ ಹೊರತು ಹಿಂದೂಗಳಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಣೇಶನ ಮೆರವಣಿಗೆ ಶಾಂತಿಯುತವಾಗಿತ್ತು ಮತ್ತು ಹಿಂದೂಗಳು ಯಾವುದೇ ಹಿಂಸಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಚಿಕ್ಕಮಗಳೂರು: ನಾಗಮಂಗಲದಲ್ಲಿ ಕಲ್ಲು ತಲ್ವಾರ್‌ ಝಳಪಿಸಿದ್ದು, ಕಲ್ಲು ತೂರಿದ್ದು ಮುಸ್ಲಿಮರೇ ಹೊರತು ಹಿಂದೂಗಳಲ್ಲ ಎಂದು‌ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಗಮಂಗಲದಲ್ಲಿ ಗಣೇಶನ ಮೆರವಣಿಗೆ ಶಾಂತಿಯುತವಾಗಿತ್ತು. ಮೆರವಣಿಗೆಯಲ್ಲಿದ್ದವರು ತಲ್ವಾರ್, ಪೆಟ್ರೋಲ್ ಬಾಂಬ್, ಕಲ್ಲು ಇಟ್ಟುಕೊಂಡಿರಲಿಲ್ಲ. 

ಹಿಂದೂಗಳು ಯಾವ ಮುಸ್ಲಿಮರ ಮೇಲೆಯೂ ತಲ್ವಾರ್ ಝಳಪಿಸಿಲ್ಲ, ಮಸೀದಿ ಮೇಲೆ ಕಲ್ಲು ತೂರಿಲ್ಲ. ತಲ್ವಾರ್ ಝಳಪಿಸಿದ್ದು, ಕಲ್ಲು ತೂರಿ ಪೆಟ್ರೋಲ್ ಬಾಂಬ್ ಹಾಕಿದ್ದು ಮತಾಂಧ ಮುಸ್ಲಿಮರು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ರಾಜ್ಯ ಸರ್ಕಾರ ಗಣಪತಿ ಕೂರಿಸಿದವರನ್ನು ಪ್ರಮುಖ ಆರೋಪಿಗಳನ್ನಾಗಿ ಮಾಡಿದೆ. ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದು, ಮತಾಂಧ ಶಕ್ತಿಗಳು ಬೆಳೆಯಲು ಅನುಕೂಲ ಮಾಡಿಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.