ಫಲಾನುಭವಿಗಳ ಮನೆಗಳಿಗೇ ಡೀಸಿ ಭೇಟಿ

| Published : Nov 23 2023, 01:45 AM IST

ಸಾರಾಂಶ

ಕನಕಪುರ: ನಗರದ ತಾಲೂಕು ಕಚೇರಿಯ ರೆಕಾರ್ಡ್ ರೂಂ ಹಾಗೂ ಫಲಾನುಭವಿಗಳ ಮನೆಗಳಿಗೆ ರಾಮನಗರ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನಲ್ಲಿ ಬರಪರಿಹಾರ ನಿಧಿ ಹಾಗೂ ಕೇಂದ್ರ ಸರ್ಕಾರದ ರೈತರ ಯೋಜನೆಯ ಹಣ ರೈತರ ಖಾತೆಗೆ ನೇರವಾಗಿ ವರ್ಗಾವಣೆಯಾಗುವ ಎಫ್ಐಡಿ ಯೋಜನೆಯ ಕಾರ್ಯಕ್ರಮಗಳ ಪ್ರಗತಿಯನ್ನು ಖುದ್ದು ಪರಿಶೀಲಿಸಲು ತಾಲೂಕಿಗೆ ಆಗಮಿಸಿದ್ದ ಅವರು, ಚಿಕ್ಕಮುದವಾಡಿ ಗ್ರಾಮದಲ್ಲಿ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಪರಿಶೀಲಿಸಿ, ಎಫ್ಐಡಿ ಯೋಜನೆಯಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ದಾಖಲೆಗಳನ್ನು ನೋಂದಾಯಿಸಿಕೊಳ್ಳುವಂತೆ ಸೂಚಿಸಿದರು.

- ಚಿಕ್ಕಮುದವಾಡಿ ಗ್ರಾಮದಲ್ಲಿ ಎಫ್ ಐಡಿ ಯೋಜನೆಯ ನೋಂದಣಿಗೆ ಸೂಚನೆ

ಕನಕಪುರ: ನಗರದ ತಾಲೂಕು ಕಚೇರಿಯ ರೆಕಾರ್ಡ್ ರೂಂ ಹಾಗೂ ಫಲಾನುಭವಿಗಳ ಮನೆಗಳಿಗೆ ರಾಮನಗರ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನಲ್ಲಿ ಬರಪರಿಹಾರ ನಿಧಿ ಹಾಗೂ ಕೇಂದ್ರ ಸರ್ಕಾರದ ರೈತರ ಯೋಜನೆಯ ಹಣ ರೈತರ ಖಾತೆಗೆ ನೇರವಾಗಿ ವರ್ಗಾವಣೆಯಾಗುವ ಎಫ್ಐಡಿ ಯೋಜನೆಯ ಕಾರ್ಯಕ್ರಮಗಳ ಪ್ರಗತಿಯನ್ನು ಖುದ್ದು ಪರಿಶೀಲಿಸಲು ತಾಲೂಕಿಗೆ ಆಗಮಿಸಿದ್ದ ಅವರು, ಚಿಕ್ಕಮುದವಾಡಿ ಗ್ರಾಮದಲ್ಲಿ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಪರಿಶೀಲಿಸಿ, ಎಫ್ಐಡಿ ಯೋಜನೆಯಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ದಾಖಲೆಗಳನ್ನು ನೋಂದಾಯಿಸಿಕೊಳ್ಳುವಂತೆ ಸೂಚಿಸಿದರು.

ನಂತರ ತಾಲೂಕು ಕಚೇರಿಗೆ ಭೇಟಿ ನೀಡಿ ರೆಕಾರ್ಡ್ ರೂಂ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ (ಎಫ್.ಆರ್.ಯು.ಐ.ಟಿ) ಮಾದರಿ ಆಧರಿಸಿ ಪ್ರತಿಯೊಬ್ಬ ರೈತನೂ ಐಡಿ ಕಾರ್ಡ್ ಪಡೆದುಕೊಳ್ಳಬಹುದು. ಇದು ಎಲ್ಲಾ ಸಮಗ್ರ ಮಾಹಿತಿ ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುತ್ತದೆ.

ಈ ನಿಟ್ಟಿನಲ್ಲಿ ರೈತರು ಪಹಣಿ, ಬ್ಯಾಂಕ್ ಪಾಸ್‍ ಬುಕ್, ಆಧಾರ್ ಕಾರ್ಡ್‍ಗಳನ್ನು ಗ್ರಾಮ ಒನ್ ಸೆಂಟರ್ ಗಳಲ್ಲಿ ದಾಖಲಿಸಿ, ಗುರುತಿನ ಚೀಟಿಗಳನ್ನು ಪಡೆದುಕೊಂಡರೆ ಬರಪರಿಹಾರ ನಿಧಿ ಹಣ ಪಡೆಯಲು ಸಹ ಅನುಕೂಲವಾಗುತ್ತದೆ. ಸರ್ಕಾರದ ಇತರ ಸೌಲಭ್ಯಗಳಿಗೆ ಈ ಗುರುತಿನ ಚೀಟಿ ಉಪಯೋಗವಾಗಲಿದೆ ಎಂದರು.ಕೆ ಕೆ ಪಿ ಸುದ್ದಿ 03:

ಕನಕಪುರ ತಾಲೂಕಿನ ಚಿಕ್ಕಮುದವಾಡಿಯಲ್ಲಿ ಸರ್ಕಾರದ ನೂತನ ಎಫ್.ಐ.ಡಿ ಯೋಜನೆಯ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಫಲಾನಭವಿಗಳ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ತಹಸೀಲ್ದಾರ್ ಸ್ಮೀತಾರಾಮು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.