ಸಾರಾಂಶ
ಕಾಂಗ್ರೆಸ್ ಗೆಲುವಿಗೆ ಹಿಂದೂಗಳ ಮತ ಬೇಡ. ಕಾಂಗ್ರೆಸ್ ಎಂದರೆ ಮುಸ್ಲಿಂ ಸೋದರರ ಪಕ್ಷ ಎಂದು ತೆಲಂಗಾಣದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಹೈದರಾಬಾದ್: ಕಾಂಗ್ರೆಸ್ ಹಿಂದೂಗಳನ್ನು ಕಡೆಗಣಿಸಿ ಮುಸ್ಲಿಮರನ್ನು ಓಲೈಸುವ ರಾಜಕಾರಣ ಮಾಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯಾಗಿ ಬಿಜೆಪಿಯ ನಾಯಕರು ಆರೋಪ ಮಾಡುತ್ತಿರುವ ಹೊತ್ತಿನಲ್ಲೇ, ಕಾಂಗ್ರೆಸ್ ಗೆಲುವಿಗೆ ಹಿಂದೂಗಳ ಮತ ಬೇಡ. ಕಾಂಗ್ರೆಸ್ ಎಂದರೆ ಮುಸ್ಲಿಂ ಸೋದರರ ಪಕ್ಷ ಎಂದು ತೆಲಂಗಾಣದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಇಲ್ಲಿ ಪಕ್ಷದ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ತೆಲಂಗಾಣ ಕಾಂಗ್ರೆಸ್ ಸರ್ಕಾರದಲ್ಲಿನ ಕೃಷಿ ಸಚಿವ ತುಮ್ಮಲ ನಾಗೇಶ್ವರ ರಾವ್, ‘ಕಾಂಗ್ರೆಸ್‌ನ ಅರ್ಥವೇ ಮುಸ್ಲಿಂ ಸೋದರರ ಪಕ್ಷ ಎಂದು; ಇದು ಮುಸ್ಲಿಮರ ಪಕ್ಷ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀವು ಮತಹಾಕದೇ ಇದ್ದಲ್ಲಿ ನಾವು ತೆಲಂಗಾಣ ಮತ್ತು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇದೆಲ್ಲವೂ ಅಲ್ಲಾನ ಕೃಪೆ. ಕಾಂಗ್ರೆಸ್ ಗೆಲ್ಲಲು ಹಿಂದೂಗಳ ಮತ ಬೇಕಾಗಿಲ್ಲ ಎಂದು ಹೇಳಿದ್ದಾರೆ.
ನಾಗೇಶ್ವರ ರಾವ್ ಹೇಳಿಕೆಯನ್ನು ಹಲವು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದು, ಕಾಂಗ್ರೆಸ್‌ನ ನಿಜ ಬಣ್ಣ ಬದಲಾಗಿದೆ ಎಂದು ಹೇಳಿದ್ದಾರೆ.