''ರೆಬೆಲ್ಸ್‌'' ಎಂದು ಕರೆಯಬೇಡಿ: ವಿಜಯೇಂದ್ರ - ಯತ್ನಾಳ್‌ ಟೀಂಗೆ ಬಿಜೆಪಿ ರಾಜ್ಯಾಧ್ಯಕ್ಷ ಟಾಂಗ್‌

| N/A | Published : Feb 20 2025, 07:51 AM IST

BY vijayendraa

ಸಾರಾಂಶ

ತಮ್ಮ ವಿರುದ್ಧ ಚಟುವಟಿಕೆ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರ ಮುಖಂಡರನ್ನು ‘ರೆಬೆಲ್ಸ್‌’ (ಬಂಡಾಯಗಾರರು) ಎಂಬುದಾಗಿ ಕರೆಯಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟಾಂಗ್ ನೀಡಿದ್ದಾರೆ.

 ಬೆಂಗಳೂರು : ತಮ್ಮ ವಿರುದ್ಧ ಚಟುವಟಿಕೆ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರ ಮುಖಂಡರನ್ನು ‘ರೆಬೆಲ್ಸ್‌’ (ಬಂಡಾಯಗಾರರು) ಎಂಬುದಾಗಿ ಕರೆಯಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟಾಂಗ್ ನೀಡಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪಕ್ಷದ ರೆಬೆಲ್ಸ್‌ ಗುರುವಾರ ಸಭೆ ನಡೆಸಲು ಮುಂದಾಗಿದ್ದಾರಲ್ಲ ಎಂಬ ಪ್ರಶ್ನೆಗೆ ವಿಜಯೇಂದ್ರ ಪ್ರತಿಕ್ರಿಯಿಸಿದರು.

ದಯವಿಟ್ಟು ರೆಬೆಲ್ಸ್ ಎಂದು ಕರೆಯಬೇಡಿ. ಅಲ್ಲಿ ಪಕ್ಷ ಸಂಘಟನೆ ಬಗ್ಗೆಯೂ ಚರ್ಚೆಯಾಗುತ್ತದೆ. ಹೀಗಾಗಿ, ಅವರನ್ನು ರೆಬೆಲ್ಸ್ ಎನ್ನುವ ಮೂಲಕ ಸೀಮಿತಗೊಳಿಸಬೇಡಿ ಎಂದರು.