ಸಾರಾಂಶ
ಸದಸ್ಯರ ನಿವೃತ್ತಿಯಿಂದ ತೆರವಾಗಲಿರುವ ಕರ್ನಾಟಕದ 4 ಸ್ಥಾನಗಳು ಸೇರಿದಂತೆ 15 ರಾಜ್ಯಗಳ ಒಟ್ಟು 56 ರಾಜ್ಯಸಭಾ ಸ್ಥಾನಗಳಿಗೆ ಫೆ.27ರಂದು ಚುನಾವಣೆ ನಡೆಯಲಿದೆ.
ನವದೆಹಲಿ: ಸದಸ್ಯರ ನಿವೃತ್ತಿಯಿಂದ ತೆರವಾಗಲಿರುವ ಕರ್ನಾಟಕದ 4 ಸ್ಥಾನಗಳು ಸೇರಿದಂತೆ 15 ರಾಜ್ಯಗಳ ಒಟ್ಟು 56 ರಾಜ್ಯಸಭಾ ಸ್ಥಾನಗಳಿಗೆ ಫೆ.27ರಂದು ಚುನಾವಣೆ ನಡೆಯಲಿದೆ.
ಮಾಜಿ ಪ್ರಧಾನಿ ಮನಮೋಹನ ಸಿಂಗ್, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಅಶ್ವಿನಿ ವೈಷ್ಣವ್, ಮನಸುಖ್ ಮಾಂಡವೀಯ, ಭೂಪೇಂದ್ರ ಯಾದವ್ ಸೇರಿ ಅನೇಕರು 56 ಸದಸ್ಯರು ನಿವೃತ್ತಿ ಆಗುತ್ತಿರುವ ಕಾರಣ ಚುನಾವಣೆ ನಡೆಯಲಿದೆ.
ಅದರನ್ವಯ ಫೆ.8ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಫೆ.15 ಕಡೆಯ ದಿನಾಂಕ, ಫೆ.16ರಂದು ನಾಮಪತ್ರ ಪರಿಶೀಲನೆ, ಫೆ.20 ನಾಮಪತ್ರ ಹಿಂಪಡೆಯಲು ಕಡೆಯ ದಿನ. ಫೆ.27ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆದು ಅಂದೇ ಸಂಜೆ 5 ಗಂಟೆ ಬಳಿಕ ಫಲಿತಾಂಶ ಪ್ರಕಟಿಸಲಾಗುವುದು.
243 ಬಲದ ರಾಜ್ಯಸಭೆಯಲ್ಲಿ ಪ್ರಸ್ತುತ ಎನ್‌ಡಿಎ ಬಲ 114 ಇದೆ. ಜೆಡಿಯು, ಎನ್‌ಸಿಪಿ (ಅಜಿತ್ ಪವಾರ್ ಬಣ) ಈ ಸಲ ಎನ್‌ಡಿಎ ಸೇರಿರುವ ಕಾರಣ ಎನ್‌ಡಿಎ ಬಲ ಈ ಚುನಾವಣೆ ಬಳಿಕ ಹೆಚ್ಚುವ ಸಾಧ್ಯತೆ ಇದೆ.