ಉಕ್ರೇನ್‌ನಿಂದ ರಕ್ಷಿಸಲ್ಪಟ್ಟ ವಿದ್ಯಾರ್ಥಿಗಳು ನೀಡಿದ ಹಣದಿಂದ ಚುನಾವಣಾ ಠೇವಣಿ!

| Published : Mar 31 2024, 02:05 AM IST / Updated: Mar 31 2024, 06:14 AM IST

ಉಕ್ರೇನ್‌ನಿಂದ ರಕ್ಷಿಸಲ್ಪಟ್ಟ ವಿದ್ಯಾರ್ಥಿಗಳು ನೀಡಿದ ಹಣದಿಂದ ಚುನಾವಣಾ ಠೇವಣಿ!
Share this Article
  • FB
  • TW
  • Linkdin
  • Email

ಸಾರಾಂಶ

ಉಕ್ರೇನ್‌ ರಾಷ್ಟ್ರದಿಂದ ಭಾರತಕ್ಕೆ ಸುರಕ್ಷಿತವಾಗಿ ಮರಳಿ ಬಂದಿದ್ದ ವಿದ್ಯಾರ್ಥಿಗಳ ತಂಡವು ಸಚಿವ ವಿ ಮುರಳೀಧರನ್‌ ಅವರಿಗೆ ನಾಮಪತ್ರಕ್ಕೆ ಭದ್ರತಾ ಠೇವಣಿ ಸಲ್ಲಿಸಲು 25 ಸಾವಿರ ರು. ದೇಣಿಗೆ ನೀಡಿದರು.

ಅತ್ತಿಂಗಲ್‌(ಕೇರಳ): ಯುದ್ಧಪೀಡಿತ ಉಕ್ರೇನ್‌ ರಾಷ್ಟ್ರದಿಂದ ಆಪರೇಷನ್‌ ಗಂಗಾ ಯೋಜನೆಯ ಭಾಗವಾಗಿ ಭಾರತಕ್ಕೆ ಸುರಕ್ಷಿತವಾಗಿ ಮರಳಿ ಬಂದಿದ್ದ ವಿದ್ಯಾರ್ಥಿಗಳ ತಂಡವು ಕೃತಜ್ಞತಾ ಪೂರ್ವಕವಾಗಿ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ ಮುರಳೀಧರನ್‌ ಅವರಿಗೆ ನಾಮಪತ್ರಕ್ಕೆ ಭದ್ರತಾ ಠೇವಣಿ ಸಲ್ಲಿಸಲು 25 ಸಾವಿರ ರು. ದೇಣಿಗೆ ನೀಡಿದೆ.

ಈ ಹಣವನ್ನು ಉಕ್ರೇನ್‌ ವಿದ್ಯಾರ್ಥಿಗಳಾದ ಸೌರವ್‌ ಮತ್ತು ಸಾಯಿಶೃತಿ ನೇತೃತ್ವದಲ್ಲಿ ಸಂಗ್ರಹಿಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ದೇಣಿಗೆ ನೀಡಿದ್ದಾರೆ. ಇದಕ್ಕೆ ಮುರಳೀಧರನ್‌ ಧನ್ಯವಾದ ಅರ್ಪಿಸಿದ್ದಾರೆ.