ಶತ್ರು ದೇಶಗಳೂ ಮೆಚ್ಚುವಂತ ಪ್ರಧಾನಿ ನರೇಂದ್ರ ಮೋದಿ

| Published : Mar 30 2024, 12:49 AM IST / Updated: Mar 30 2024, 09:07 AM IST

ಸಾರಾಂಶ

ಮೋದಿ ಆಡಳಿತ ಚುಕ್ಕಾಣಿ ಹಿಡಿದ ನಂತರ ಭಯೋತ್ಪಾದಕರು ಪಾತಾಳದಲ್ಲಿ ಅಡಗಿದ್ದರೂ ಹೆಡೆಮುರಿ ಕಟ್ಟಿ ಭಾರತಕ್ಕೆ ಕರೆ ತಂದು ಕಾನೂನು ಅಡಿ ಜೈಲಿಗೆ ತಳ್ಳುವಂತ ತಾಕತ್ತು ಕಾಣುತ್ತಿದ್ದೇವೆ. ಇಂದು ಭಾತರದ ವಿರುದ್ಧ ಕಣ್ಣೆತ್ತಿ ನೋಡುವಂತ ತಾಕತ್ತು ಯಾವ ದೇಶಕ್ಕೂ ಇಲ್ಲ

ಕನ್ನಡಪ್ರಭ ವಾರ್ತೆ ಕೋಲಾರಕಳೆದ ೨೦೧೩ರಲ್ಲಿ ವಿಶ್ವದಲ್ಲಿ ಆರ್ಥಿಕತೆಯಲ್ಲಿ ದಿವಾಳಿಯಾಗಿ ಅನಿಶ್ಚಿತ ಪರಿಸ್ಥಿತಿಯಲ್ಲಿದ್ದ ೫ ದೇಶಗಳಲ್ಲಿ ಭಾರತ ದೇಶವು ಒಂದಾಗಿತ್ತು. ನಂತದಲ್ಲಿ ಮೋದಿ ಅವರು ದೇಶದ ಆಡಳಿತ ಚುಕ್ಕಾಣಿ ಹಿಡಿದ ೧೦ ವರ್ಷದ ನಂತರ ವಿಶ್ವದಲ್ಲಿನ ಶ್ರೀಮಂತ ೫ ದೇಶಗಳಲ್ಲಿ ಭಾರತವು ಒಂದಾಗಿದೆ ಎಂದು ಭಾರತೀ ಜನತಾ ಪಕ್ಷದ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ತಿಳಿಸಿದರು.

ನಗರ ಹೊರವಲಯದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅ‍ವರು, ನಮ್ಮ ಶತ್ರು ದೇಶಗಳು ಸಹ ಮೋದಿಯಂತ ಪ್ರಧಾನಿ ನಮಗೆ ಬೇಕು ಎಂಬ ಹೇಳುತ್ತಿದ್ದಾರೆ. ವಿಶ್ವದ ಯಾವುದೇ ದೇಶಕ್ಕೆ ಮೋದಿ ಹೋದರೂ ರತ್ನಗಂಬಳಿ ಹಾಸಿ ಅಲ್ಲಿನ ಪ್ರಧಾನಿಗಳೇ ಖುದ್ದಾಗಿ ಸ್ವಾಗತಿಸಲು ಬರುವಂತ ವಿಶ್ವಗುರು ಗೌರವವನ್ನು ಹೊಂದಿದ್ದಾರೆ ಎಂದರು. ವಿದೇಶದಲ್ಲಿ ಅಡಗಿದ ಉಗ್ರರು

ಕಳೆದ ೨೦೧೩ಕ್ಕೆ ಮೊದಲು ಭಾರತದಲ್ಲಿ ಬಾಂಬ್ ಸ್ಫೋಟಗಳು ಎಲ್ಲೆಲ್ಲಿ ಆಗುತ್ತದೆಯೋ ಎಂಬುವುದೇ ತಿಳಿಯದೇ ಆತಂಕದ ಬದುಕು ಕಾಣುತ್ತಿದ್ದೆವು, ಭಯೋತ್ಪದಕರು ಭಾರತದಲ್ಲಿ ಬಾಂಬ್‌ಗಳನ್ನು ಸಿಡಿಸಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡು ವಿದೇಶಗಳಲ್ಲಿ ಅಡಗಿ ಕುಳಿತಿರುವುದು ತಿಳಿದರೂ ಅಸಹಾಯಕತೆಯಲ್ಲಿ ಕೈ ಕಟ್ಟಿ ಕುಳಿತಿರುವುದನ್ನು ಕಾಣುತ್ತಿದ್ದೆವು ಎಂದರು.ಆದರೆ ಬಿಜೆಪಿ ಸರ್ಕಾರದಲ್ಲಿ ಮೋದಿ ಆಡಳಿತ ಚುಕ್ಕಾಣಿ ಹಿಡಿದ ನಂತರ ಭಯೋತ್ಪಾದಕರು ಪಾತಾಳದಲ್ಲಿ ಅಡಗಿದ್ದರೂ ಹೆಡೆಮುರಿ ಕಟ್ಟಿ ಭಾರತಕ್ಕೆ ಕರೆ ತಂದು ಕಾನೂನು ಅಡಿ ಜೈಲಿಗೆ ತಳ್ಳುವಂತ ತಾಕತ್ತು ಮೋದಿಯಲ್ಲಿರುವುದನ್ನು ಕಾಣುತ್ತಿದ್ದೇವೆ. ಕೆನಾಡ, ಖಲಿಸ್ತಾನ ಮುಂತಾದ ಕಡೆಯ ಘಟನೆಗಳನ್ನು ನೆನಪಿಸಿದ ಅವರು ಇಂದು ಭಾತರದ ವಿರುದ್ಧ ಕಣ್ಣೆತ್ತಿ ನೋಡುವಂತ ತಾಕತ್ತು ಯಾವ ದೇಶಕ್ಕೂ ಇಲ್ಲ ಎಂದು ಅವರು ನುಡಿದರು.ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್ ಉಪಾಧ್ಯಕ್ಷ ಕೃಷ್ಣಮೂರ್ತಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ರೆಡ್ಡಿ, ಪದಾಧಿಕಾರಿಗಳಾದ ಆನಂದ್‌ಗೌಡ, ಲಕ್ಷ್ಮಣಗೌಡ, ಶಿವಣ್ಣ, ನಾರಾಯಣಶೆಟ್ಟಿ, ಹನುಮಣ್ಣ, ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ, ಓಹಿಲೇಶ್, ರಾಜು, ನಾಮಾಲ್ ಮಂಜು ಇದ್ದರು.