ಚುನಾವಣಾ ಬಾಂಡ್ ಮೂಲಕ ಸುಲಿಗೆ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಕೆಳಗಿಳಿಸಿ ರಾಜೀನಾಮೆ ಕೇಳಿ

| Published : Sep 28 2024, 05:54 AM IST

siddaramaiah

ಸಾರಾಂಶ

ಚುನಾವಣಾ ಬಾಂಡ್ ಮೂಲಕ ಸುಲಿಗೆ ಸಂಬಂಧ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮೇಲೂ ಎಫ್‌ಐಆರ್ ಆಗಿದೆ. ಈಗ ಅವರು ರಾಜೀನಾಮೆ ಕೊಡ್ತಾರಾ?

ಬೆಂಗಳೂರು :  ಚುನಾವಣಾ ಬಾಂಡ್ ಮೂಲಕ ಸುಲಿಗೆ ಸಂಬಂಧ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮೇಲೂ ಎಫ್‌ಐಆರ್ ಆಗಿದೆ. ಈಗ ಅವರು ರಾಜೀನಾಮೆ ಕೊಡ್ತಾರಾ? ಬಿಜೆಪಿಯವರು ಮೊದಲು ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲಿ. ಆ ಮೇಲೆ ನನ್ನ ರಾಜೀನಾಮೆ ಕೇಳಲಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇದೀಗ ಎಫ್‌ಐಆರ್ ದಾಖಲಿಸಲಾಗಿದ್ದು ನಂ. ೧ ಆರೋಪಿ ಎಂದು ಉಲ್ಲೇಖ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಯಬೇಕು ಎಂದು ವಿಪಕ್ಷಗಳು ಆಗ್ರಹಿಸಿದ್ದು ಈ ನಿಟ್ಟಿನಲ್ಲಿ ಚುನಾವಣಾ ಬಾಂಡ್ ವಿಚಾರದ ಆರೋಪಿ ಆಗಿರುವ ನಿರ್ಮಲಾ ಅವರೂ ಕೆಳಕ್ಕೆ ಇಳಿಯಲಿ ಎಂದು ತಿರುಗೇಟು ನೀಡಿದ್ದಾರೆ.