ಇಂದು ಪಿಎಗಳೇ ಕಾಂಗ್ರೆಸ್‌ ನಡೆಸುತ್ತಿದ್ದಾರೆ ಮಾಜಿ ಕಾಂಗ್ರೆಸ್ಸಿಗ ವಲ್ಲಭ್‌

| Published : Apr 08 2024, 01:03 AM IST / Updated: Apr 08 2024, 05:05 AM IST

ಇಂದು ಪಿಎಗಳೇ ಕಾಂಗ್ರೆಸ್‌ ನಡೆಸುತ್ತಿದ್ದಾರೆ ಮಾಜಿ ಕಾಂಗ್ರೆಸ್ಸಿಗ ವಲ್ಲಭ್‌
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಚುನಾವಣೆಗೆ ಸ್ಪರ್ಧಿಸದ ಮಾಜಿ ಕೇಂದ್ರ ಸಚಿವರ ಪಿಎಗಳು ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎಂದು ಇತ್ತೀಚೆಗೆ ಪಕ್ಷ ತೊರೆದು ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್‌ ವಕ್ತಾರ ಗೌರವ ವಲ್ಲಭ್‌ ಆರೋಪಿಸಿದ್ದಾರೆ.

ನವದೆಹಲಿ: ಇಂದು ಚುನಾವಣೆಗೆ ಸ್ಪರ್ಧಿಸದ ಮಾಜಿ ಕೇಂದ್ರ ಸಚಿವರ ಪಿಎಗಳು ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎಂದು ಇತ್ತೀಚೆಗೆ ಪಕ್ಷ ತೊರೆದು ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್‌ ವಕ್ತಾರ ಗೌರವ ವಲ್ಲಭ್‌ ಆರೋಪಿಸಿದ್ದಾರೆ.

ಭಾನುವಾರ ಸುದ್ದಿಗಾರರ ಜತೆ ಅವರು ಮಾತನಾಡಿ, ‘ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಕಳೆದ 30 ವರ್ಷಗಳಿಂದ ಇದೇ ವ್ಯಕ್ತಿ ಸಿದ್ಧಪಡಿಸುತ್ತಿದ್ದಾರೆ. ಅವರ ಆಲೋಚನೆಗಳು ಗಟ್ಟಿ ಆಗಿದ್ದರೆ ಇಂದು ಕಾಂಗ್ರೆಸ್ 42 ಸ್ಥಾನಕ್ಕೆ ಕುಸಿಯುತ್ತಿರಲಿಲ್ಲ. ನಾನು ಕಾಲೇಜಿನಲ್ಲಿ ಓದುವಾಗ ಇದೇ ವ್ಯಕ್ತಿ ಟೀವಿಯಲ್ಲಿ ವಕ್ತಾರರಾಗಿ ಪಕ್ಷವನ್ನು ಸಮರ್ಥಿಸಿಕೊಳ್ಳುತ್ತಿದ್ದರು.ಇಂದಿಗೂ ಅವರು ಕಮ್ಯುನಿಕೇಷನ್ಸ್ ಉಸ್ತುವಾರಿ’ ಆಗಿದ್ದಾರೆ ಎಂದು ಜೈರಾಂ ರಮೇಶ್ ಹೆಸರೆತ್ತದೇ ಕುಟುಕಿದರು,

‘ಇಂದು ಚುನಾವಣೆಗೆ ಸ್ಪರ್ಧಿಸದ ಮಾಜಿ ಕೇಂದ್ರ ಸಚಿವರ ಪಿಎಗಳು ಕಾಂಗ್ರೆಸ್ ನಡೆಸುತ್ತಿದ್ದಾರೆ. ಈ ಪಿಎಗಳಿಗೆ ಉತ್ತರ ಪ್ರದೇಶ ಬೇರೆ ರಾಜ್ಯ, ಬಿಹಾರ ಬೇರೆ ರಾಜ್ಯ ಎಂಬುದೇ ಗೊತ್ತಿಲ್ಲ’ ಎಂದು ಕಿಡಿಕಾರಿದರು.