ಸಾರಾಂಶ
ಕೋಲಾರ : ಕೋಲಾರ ಕಾಂಗ್ರೆಸ್‌ನ ಭದ್ರಕೋಟೆ. 1952 ರಿಂದ ಗೆಲ್ಲುತ್ತಾ ಬಂದಿದ್ದೇವೆ. ಕಳೆದ ಬಾರಿ ವ್ಯತ್ಯಾಸದಿಂದಾಗಿ ಸೋಲಾಯಿತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್ ಎಂದರು.ನಗರದ ಕಾಂಗ್ರೆಸ್ ಪಕ್ಷದ ರೋಡ್ ಶೋದಲ್ಲಿ ಮಾತನಾಡಿ, ದೇಶದಲ್ಲಿ ಕಳೆದ ೧೦ ವರ್ಷದಿಂದ ಆಡಳಿತ ನಡೆಸುತ್ತಿರುವುದು ಬಿಜೆಪಿ ಪಕ್ಷವಲ್ಲ ಬಂಡವಾಳ ಶಾಹಿಗಳಾದ ಅದಾನಿ, ಅಂಬಾನಿ, ನೀರವ್ ಮೋದಿಯಂತವರು, ಜಿಎಸ್‌ಟಿಯಲ್ಲಿ ನಮಗೆ ಬರಬೇಕಾಗಿದ್ದ ಪಾಲು ನೀಡಲು ಹಣವಿಲ್ಲ ಬಂಡವಾಳ ಶಾಹಿಗಳ ಲಕ್ಷಾಂತರ ಕೋಟಿ ರು.ಗಳ ಸಾಲ ಮನ್ನಾ ಮಾಡಲಾಗಿದೆ ಎಂದು ದೂರಿದರು, ಭರವಸೆ ಈಡೇರಿಸಿದ್ದೇವೆ
ಬಿಜೆಪಿ ನೀಡಿದ್ದ ಭರವಸೆಗಳು ಕಳೆದ 10 ವರ್ಷದಿಂದ ಒಂದೂ ಈಡೇರಿಸಿಲ್ಲ, ಕಾಂಗ್ರೇಸ್ ಪಕ್ಷವು ಅಧಿಕಾರಕ್ಕೆ ಬಂದ 6 ತಿಂಗಳಲ್ಲಿಯೇ ಚುನಾವಣೆ ಮುನ್ನ ನೀಡಿದ್ದ ೫ ಭರವಸೆಗಳನ್ನು ಅನುಷ್ಟನಕ್ಕೆ ತಂದಿದೆ. ಚುನಾವಣೆಯಲ್ಲಿ ನೀವುಗಳು ಎಚ್ಚೆತ್ತುಕೊಂಡು ಬಿ.ಇ. ಪದವೀಧರ, ಜನಪರ ಕಾಳಜಿಯುಳ್ಳ ಯುವಕನಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವಿ.ಗೌತಮ್ ಕಾಂಗ್ರೆಸ್ ಪಕ್ಷದಲ್ಲಿ ತಳಮಟ್ಟದಿಂದ ಬಂದವರು, ಕಳೆದ ೩೦ ವರ್ಷದಿಂದ ವಿದ್ಯಾರ್ಥಿದೆಸೆಯಿಂದಲೂ ಕಾಂಗ್ರೆಸ್ ಸಂಘನೆಗಳಲ್ಲಿ ದುಡಿದ ಸಾಮಾನ್ಯ ಕಾರ್ಯಕರ್ತ ಆಗಿದ್ದಾರೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಇವರನ್ನು ಗುರುತಿಸಿ ಲೋಕಸಭೆ ಚುನಾವಣೆಯಲ್ಲಿ ಸ್ವರ್ಧಿಸಲು ಅವಕಾಶ ಕಲ್ಪಿಸಿರುವುದು ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯಕ್ಕೆ ಹಿಡಿದ ಕೈಗನ್ನಡಿ ಎಂದರು.
ಶಾಸಕ ಕೊತ್ತೂರು ಮಂಜುನಾಥ್,
ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು. ಬಳಿಕ ಡಿ.ಕೆ.ಶಿವಕುಮಾರ್ ಅವರು ಪ್ರಜಾಧ್ವನಿ ಬಸ್ ಏರಿ ಕಾಲೇಜು ವೃತ್ತ ತಲುಪಿದರು ವಾಲ್ಮೀಕಿಗೆ ಮಾಲಾರ್ಪಣೆ ಮಾಡಿ ಯಾತ್ರೆ ಕೊನೆಗೊಂಡಿತು.
ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಶಿಡ್ಲಘಟ್ಟ ರಾಜೀವ್ ಗೌಡ, ಪುಟ್ಟು ಅಂಜಿನಪ್ಪ, ಕಾಂಗ್ರೆಸ್ ಮುಖಂಡರಾದ ಊರುಬಾಗಿಲು ಶ್ರೀನಿವಾಸ್ಇ ದ್ದರು.