ಬಿಜೆಪಿ ಸದಸ್ಯತ್ವ ಅಭಿಯಾನ: ಪ್ರಧಾನಿ ಮೋದಿ ಹಾಗೂ ಪಕ್ಷದ ಕೈ ಬಲಪಡಿಸಲು ಸದಸ್ಯತ್ವ ಪಡೆಯಿರಿ - ಬಿ.ವಿ.ಮಹೇಶ್

| Published : Sep 23 2024, 01:17 AM IST / Updated: Sep 23 2024, 04:47 AM IST

ಸಾರಾಂಶ

ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಧಾನಿ ಮೋದಿ ಮತ್ತು ಪಕ್ಷವನ್ನು ಬಲಪಡಿಸಬೇಕೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಕರೆ ನೀಡಿದ್ದಾರೆ.  

 ಬಂಗಾರಪೇಟೆ : ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಯುವಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಹೆಸರನ್ನು ನೋಂದಾಯಿಸುವ ಮೂಲಕ ಪ್ರಧಾನಿ ಮೋದಿ ಹಾಗೂ ಪಕ್ಷದ ಕೈ ಬಲಪಡಿಸಬೇಕೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಹೇಳಿದರು.

ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ದೇಶ ಇತರೇ ಬಲಿಷ್ಟ ದೇಶಗಳೊಂದಿಗೆ ಸಮಾನವಾಗಿ ನಿಲ್ಲುವಂತೆ ಪ್ರಧಾನಿ ಮೋದಿ ಹತ್ತು ವರ್ಷಗಳಿಂದ ಕೈಗೊಂಡಿರುವ ಹಲವು ಕಠಿಣ ಕ್ರಮಗಳೇ ಕಾರಣ. ಆದ್ದರಿಂದ ಅವರಿಗೆ ಶಕ್ತಿ ತುಂಬಲು ಯುವಕರು ಮುಂದೆ ಬರಬೇಕು ಎಂದರು.ಕೇಂದ್ರದ ಯೋಜನೆಗಳ ತಿಳಿಸಿ

ದೇಶಕ್ಕೆ ಯುವಶಕ್ತಿ ಅವಶ್ಯಕತೆ ಇದೆ,ಪ್ರಧಾನಿ ಮೋದಿ ಸಹ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಯುವಕರು ರಾಜಕೀಯದಲ್ಲಿಯೂ ಸಹ ಸಕ್ರಿಯವಾಗಿ ಭಾಗವಹಿಸುವುದರಿಂದ ಹೆಚ್ಚಿನ ರೀತಿ ಅಭಿವೃದ್ದಿಯಾಗಲಿದೆ. ಕಳೆದ ವರ್ಷ ಕ್ಷೇತ್ರದಲ್ಲಿ ೫೦ಸಾವಿರ ಸದಸ್ಯತ್ವವನ್ನು ಮಾಡಲಾಗಿತ್ತು. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಸದಸ್ಯರನ್ನು ನೋಂದಾಯಿಸಬೇಕಾಗಿದೆ.

 ಕ್ಷೇತ್ರದ ಪ್ರತಿ ಹಳ್ಳಿಗೂ ತೆರಳಿ ಕಾರ್ಯಕರ್ತರು ಕೇಂದ್ರ ಸರ್ಕಾರ ಜನಪರ ಯೋಜನೆಗಳನ್ನು ಜನರಿಗೆ ಮನದಟ್ಟು ಮಾಡಿಕೊಟ್ಟು ಯಾಕೆ ಬಿಜೆಪಿ ಪಕ್ಷಕ್ಕೆ ಸದಸ್ಯತ್ವ ನೀಡಬೇಕೆಂದು ತಿಳಿಸಿ, ಆಗ ಜನರೇ ಮುಂದೆ ಬಂದು ಸದಸ್ಯರಾಗುತ್ತಾರೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಹಲವು ಅನಿರೀಕ್ಷಿತ ಘಟನೆಗಳಿಂದ ಜಿಗುಪ್ಸೆಗೊಂಡು ಜನರು ಬದಲಾವಣೆ ಬಯಸಿದ್ದಾರೆ. ಈಗ ವಿಧಾನಸಭೆ ಚುನಾವಣೆ ನಡೆದರೂ ಕಾಂಗ್ರೆಸ್ ಧೂಳಿಪಟವಾಗುವುದು ಖಚಿತ ಎಂದು ಭವಿಷ್ಯ ನುಡಿದರು.