ಹಕ್ಕುಪತ್ರಕ್ಕಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ 35 ಕಿ.ಮೀ. ಅರೆಬೆತ್ತಲೆ ಪಾದಯಾತ್ರೆ

| N/A | Published : Mar 06 2025, 12:31 AM IST / Updated: Mar 06 2025, 04:19 AM IST

ಸಾರಾಂಶ

ಕಳೆದ 3 ವರ್ಷಗಳಿಂದ 25 ಮನೆಗಳಿಗೆ ಹಕ್ಕುಪತ್ರ ನೀಡದೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರೊಬ್ಬರು ಅರೆಬೆತ್ತಲೆಯಾಗಿ 35 ಕಿ.ಮೀ. ಪಾದಯಾತ್ರೆ ನಡೆಸಿದ ಪ್ರಸಂಗ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

 ಕೊಟ್ಟಿಗೆಹಾರ : ಕಳೆದ 3 ವರ್ಷಗಳಿಂದ 25 ಮನೆಗಳಿಗೆ ಹಕ್ಕುಪತ್ರ ನೀಡದೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರೊಬ್ಬರು ಅರೆಬೆತ್ತಲೆಯಾಗಿ 35 ಕಿ.ಮೀ. ಪಾದಯಾತ್ರೆ ನಡೆಸಿದ ಪ್ರಸಂಗ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

ನಿಡುವಾಳೆ ಗ್ರಾಪಂ ಉಪಾಧ್ಯಕ್ಷ ನವೀನ್ 25 ಮನೆಗಳ ಮಣ್ಣನ್ನು ಬುಟ್ಟಿಯಲ್ಲಿ ತುಂಬಿಕೊಂಡು ತಲೆ ಮೇಲೆ ಹೊತ್ತು ಮೂಡಿಗೆರೆ ತಹಸೀಲ್ದಾರ್ ಕಚೇರಿವರೆಗೆ ನಡೆದು ಬಂದು ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ಭೂಮಿ ಹಕ್ಕುಪತ್ರ ವಿತರಿಸುವಂತೆ ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕಂದಾಯ ಇಲಾಖೆ ಸ್ಪಂದಿಸಿಲ್ಲ. ನಾನು ತಂದಿರುವ ಮಣ್ಣಿನಲ್ಲಿ ಏನಾದರೂ ತೊಂದರೆ ಇದೆಯಾ? ಈ ಮಣ್ಣಿಗೆ ಹಕ್ಕುಪತ್ರ ಕೊಡಲು ಸಾಧ್ಯವಿಲ್ಲವೇ? ಎಂದು ನವೀನ್ ಪ್ರಶ್ನಿಸಿದರು50ಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರ ನೀಡಬೇಕಿದ್ದರೂ ಕೇವಲ 25 ಮನೆಗಳಿಗೆ ಮಾತ್ರ ಮಂಜೂರು ಮಾಡಲಾಗಿದೆ. ಉಳಿದ ಮನೆಗಳಿಗೆ ಯಾಕೆ ಹಕ್ಕುಪತ್ರ ನೀಡಿಲ್ಲ.

ಸಮಸ್ಯೆ ಪರಿಹರಿಸುವಂತೆ ತಹಸೀಲ್ದಾರ್‌ ರಾಜಶೇಖರ್‌ ಮೂರ್ತಿ ಅವರಿಗೆ ಮನವಿ ಸಲ್ಲಿಸಿದ್ದಾರೆ.